ನಿಜವಾದ ಪ್ರೀತಿ ಎಂದ್ರೆ ಇದೇನೆ ಎನ್ನುತ್ತಲೇ ಭಾವಿ ಪತ್ನಿ ಬಗ್ಗೆ Chandan Shetty ರಿವೀಲ್​

Published : Apr 24, 2026, 07:06 PM IST

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರಿಂದ ವಿಚ್ಛೇದನ ಪಡೆದ ನಂತರ ಇದೀಗ ತಮ್ಮ ಎರಡನೇ ಮದುವೆ ಹಾಗೂ ನಿಜವಾದ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಮುಂದಿನ ವರ್ಷ ಮದುವೆಯಾಗುವ ಯೋಜನೆ ಇದ್ದು, ಈ ಬಾರಿ ತರಾತುರಿ ಮಾಡದೆ, ಪೋಷಕರ ಒಪ್ಪಿಗೆಯೊಂದಿಗೆ ಹೊಸ ಜೀವನ ಆರಂಭಿಸುವುದಾಗಿ ತಿಳಿಸಿದ್ದಾರೆ.

PREV
16
ಬಿಗ್​ಬಾಸ್​ನಿಂದ ಫೇಮಸ್​

Bigg Bossನಿಂದ ಫೇಮಸ್​ ಆಗಿರೋ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ (Niveditha Gowda) ವಿಷ್ಯ ಎಲ್ಲರಿಗೂ ತಿಳಿದದ್ದೇ. ನಿವೇದಿತಾಗೆ ಇನ್ನೂ ವಯಸ್ಸು 20 ಇರುವಾಗಲೇ ಬಿಗ್​ಬಾಸ್​ ಮನೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಚಂದನ್​ ಶೆಟ್ಟಿಯವರ ಲವ್​ಗೆ ಬಿದ್ದು, ಮೈಸೂರು ದಸರಾ ವೇದಿಕೆಯಲ್ಲಿ ಪ್ರಪೋಸ್​ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗುವುದರಿಂದ ಹಿಡಿದು, ಡಿವೋರ್ಸ್ ಪಡೆದಾಗಿನಿಂದ, ತುಂಡುಡುಗೆಯಲ್ಲಿ ರೀಲ್ಸ್‌ ಮಾಡುವ ಇಂದಿನವರೆಗೂ ನಿವೇದಿತಾ ಸದಾ ಸುದ್ದಿಯಲ್ಲಿದ್ದರೆ, ತಮ್ಮ ಸಿನಿಮಾದಲ್ಲಿ ಮುಂದುವರೆದಿದ್ದಾರೆ ಚಂದನ್​ ಶೆಟ್ಟಿ.

26
ಟ್ರೂ ಲವ್​ ಎಂದರೇನು?

ಇದೀಗ ಅವರು ಜೀವನದಲ್ಲಿ ಸಿಗುವ ನಿಜವಾದ ಪ್ರೀತಿ (True Love) ಬಗ್ಗೆ ಮಾತನಾಡಿದ್ದಾರೆ. sanchara_tv ಗೆ ನೀಡಿರುವ ಸಂದರ್ಶನದಲ್ಲಿ ಚಂದನ್​ ಶೆಟ್ಟಿ ಅವರು, ಟ್ರೂ ಲವ್​ ತುಂಬಾ ಅಮೂಲ್ಯವಾದದ್ದು. ಅದು ಸಿಗಬೇಕು ಎಂದರೆ ಅದೃಷ್ಟ ಮಾಡಿರಬೇಕು. ಈಗಿನ ಜನರೇಷನ್​ನಲ್ಲಿ ಅದು ಸಿಗುವುದು ತುಂಬಾ ಕಷ್ಟ. ಸಿಕ್ಕಿದಾಗ ಅದನ್ನು ಉಳಿಸಿಕೊಂಡು ಹೋಗುವುದು ಇನ್ನೊಂದು ದೊಡ್ಡ ಚಾಲೆಂಜ್​ ಎಂದಿದ್ದಾರೆ.

36
ಭಾವಿ ಪತ್ನಿಯ ಬಗ್ಗೆ

ಟ್ರೂ ಲವ್​ ಸಿಕ್ಕಾಗ, ಪರಸ್ಪರ ಹೊಂದಾಣಿಕೆ ಇತ್ತು ಎಂದು ತಿಳಿದರೆ ಅದನ್ನು ಬಿಡಬೇಡಿ, ಚಿಕ್ಕಪುಟ್ಟ ಸಮಸ್ಯೆ ಇದ್ದರೆ ಅದನ್ನು ಹಾಗೆಯೇ ಅಲ್ಲಿಯೇ ಬಿಟ್ಟು ಮುಂದುವರೆಸಿಕೊಂಡು ಹೋಗಿ ಎಂದಿರುವ ನಟ, ಇದೇ ರೀತಿಯ ಟ್ರೂ ಲವ್​ ಕೊಡುವ ಹುಡುಗಿಗಾಗಿ ನಾನೂ ಕಾಯ್ತಾ ಇದ್ದೀನಿ, ನೋಡೋಣ ಎಂದಿದ್ದಾರೆ.

46
ಎರಡನೆಯ ಮದುವೆಯ ಬಗ್ಗೆ

ಇದಾಗಲೇ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ (Chandan Shetty and Nivedita Gowda) ಡಿವೋರ್ಸ್​ ಪಡೆದು ಎರಡು ವರ್ಷಗಳಾಗುತ್ತಾ ಬಂದಿದ್ದು, ಚಂದನ್​ ಶೆಟ್ಟಿ ಅವರು ಇದೀಗ ಎರಡನೆಯ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹುಡುಗಿ ನೋಡಿಬಂದಿರುವ ಬಗ್ಗೆಯೂ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದರು.

56
ತುಂಬಾ ಎಫೆಕ್ಟ್​ ಆಗಿತ್ತು

ವಿಚ್ಛೇದನ ಪಡೆದಾಗ ತಮ್ಮ ಮನಸ್ಸಿಗೆ ತುಂಬಾ ಬೇಸರವಾಗಿತ್ತು, ಅದು ಕೆಲಸದ ಮೇಲೂ ಪರಿಣಾಮ ಬೀರಿತ್ತು. ಈಗ ಆ ನೋವಿನಿಂದ ಹೊರಬಂದಿದ್ದೇನೆ. ಮದುವೆ ಮುರಿದು ಬಿತ್ತು ಎಂದು ಅದರ ಮೇಲೆ ನಂಬಿಕೆ ಕಳೆದುಕೊಂಡಿಲ್ಲ. ಮುಂದಿನ ವರ್ಷ ಮದುವೆಯಾಗುವ ಪ್ಲ್ಯಾನ್​ ಮಾಡಿದ್ದೇನೆ ಎಂದಿದ್ದಾರೆ ನಟ.

66
ಮುಂದಿನ ವರ್ಷ ಮದುವೆ

ನನಗೆ ಡಿವೋರ್ಸ್ ಆದಾಗ ತುಂಬಾನೆ ಹರ್ಟ್ ಆಗಿತ್ತು. ಸಂಗೀತ ಸಾಧನೆಯಲ್ಲಿ ಮನಸ್ಸು ಶಾಂತವಾಗಿರಬೇಕು. ಆದರೆ ಡಿವೋರ್ಸ್​ನಿಂದ ಕೆಲಸದ ಮೇಲೂ ಎಫೆಕ್ಟ್ ಆಗಿತ್ತು. ಒಳ್ಳೆ ಟ್ಯೂನ್ ಮಾಡಲು ಬೇಕಾದ ಪ್ರಶಾಂತ ಮನಸ್ಸು ಇರಲಿಲ್ಲ. ಎಲ್ಲಾ ಕೆಲಸ ನಿಧಾನವಾಯ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದು, ಮತ್ತೊಂದು ಮದುವೆಯ ಬಗ್ಗೆ ಯೋಚನೆ ಮಾಡಿದ್ದೇನೆ ಎಂದಿದ್ದರು. ಒಂದಿಬ್ಬರು ಹುಡುಗಿಯರನ್ನು ನೋಡಿದ್ದೇನೆ. ಸಮಾಧಾನವಾಗಿ ಟೈಮ್​ ತೆಗೆದುಕೊಂಡು ನಿರ್ಧಾರ ಮಾಡುತ್ತೇನೆ. ಮೊದಲಿನ ಮದುವೆಯಲ್ಲಿ ಮಾಡಿರೋ ತಪ್ಪು ಮತ್ತೆ ಮಾಡಲ್ಲ. ಅಪ್ಪ ಮತ್ತು ಅಮ್ಮ ಒಪ್ಪಿಕೊಂಡ ಮೇಲೆ ಮದುವೆ ಆಗುತ್ತೇನೆ. ಮೊದಲಿನ ರೀತಿ ತರಾತುರಿ ಮಾಡುವುದಿಲ್ಲ ಎಂದಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories