ಖಾಸಗಿ ಬ್ಯಾಂಕ್ ಮ್ಯಾನೇಜರ್ ಪತ್ನಿಯೊಬ್ಬಳು ತನ್ನ ಪ್ರಿಯಕರನಾದ ಟ್ಯಾಕ್ಸಿ ಚಾಲಕನೊಂದಿಗೆ ಸೇರಿ, ಗಂಡ ಮತ್ತು ಅತ್ತೆಗೆ ಜೀವ ಬೆದರಿಕೆ ಹಾಕಿದ್ದಾಳೆ. 50 ಲಕ್ಷ ರೂಪಾಯಿಗಾಗಿ ಬೇಡಿಕೆಯಿಟ್ಟು, ಕೊಲೆ ಯತ್ನವನ್ನೂ ನಡೆಸಿದ್ದಾರೆ ಎನ್ನಲಾಗಿದೆ.
ಖಾಸಗಿ ಬ್ಯಾಂಕ್ ಮ್ಯಾನೇಜರ್ ಪತ್ನಿ ಪ್ರಿಯಕರನೊಂದಿಗೆ ಸೇರಿ ಗಂಡ ಮತ್ತು ಆತನ ತಾಯಿಗೆ ಜೀವ ಬೆದರಿಕೆ ಹಾಕಿದ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು. ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಆಕೆಯ ಪ್ರಿಯಕರನನ್ನು ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಏನಿದು ಪ್ರಕರಣ ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ.
25
ಟ್ಯಾಕ್ಸಿ ಚಾಲಕ
ಗೋವಿಂದಗಢ ನಿವಾಸಿಯಾಗಿರುವ ಅರ್ಚನಾ ಅರೋರಾ ಮದುವೆ 2018ರಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಕರ್ಣವ್ ಖತ್ರಿ ಎಂಬವರೊಂದಿಗೆ ನಡೆದಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದು, ಕರ್ಣವ್ ಜೈಪುರದಲ್ಲಿ ಕೆಲಸ ಮಾಡ್ತಿದ್ದು, ಅರ್ಚನಾ ಮಕ್ಕಳೊಂದಿಗೆ ಅಲ್ವಾರ್‌ದಲ್ಲಿ ವಾಸವಾಗಿದ್ದಳು. ಆಗಾಗ್ಗೆ ಗಂಡನನ್ನು ಭೇಟಿಯಾಗಲು ಅರ್ಚನಾ ಜೈಪುರಕ್ಕೆ ಟ್ಯಾಕ್ಸಿ ಮೂಲಕ ಬರುತ್ತಿದ್ದಳು. ಈ ವೇಳೆ ಅರ್ಚನಾಗೆ ಟ್ಯಾಕ್ಸಿ ಚಾಲಕ ರಿಷಬ್ ಶರ್ಮಾನ ಪರಿಚಯವಾಗಿದೆ.
35
ರಿಷಬ್ ಶರ್ಮಾ ಮತ್ತು ಅರ್ಚನಾ ಅಕ್ರಮ ಸಂಬಂಧ
ರಿಷಬ್ ಶರ್ಮಾ ಮತ್ತು ಅರ್ಚನಾ ನಡುವಿನ ಸ್ನೇಹ ಅಕ್ರಮ ಸಂಬಂಧವಾಗಿ ಬದಲಾಗಿತ್ತು. ಮುಂದೆ ಇಬ್ಬರು ಜೊತೆಯಾಗಿರುವ ನಿರ್ಧಾರಕ್ಕೂ ಬಂದಿದ್ದರು. ಆದ್ರೆ ಇವರಿಬ್ಬರ ಪ್ರೇಮ ಸಂಬಂಧಕ್ಕೆ ಅರ್ಚನಾ ಗಂಡ ಅಡ್ಡವಾಗಿದ್ದನು. 7ನೇ ಸೆಪ್ಟೆಂಬರ್ 2025ರಂದು ಕಿರಿಯ ಮಗನೊಂದಿಗೆ ಮನೆಯಲ್ಲಿದ್ದ 5 ಲಕ್ಷ ನಗದು ಜೊತೆ ರಿಷಬ್ ಜೊತೆ ಅರ್ಚನಾ ಓಡಿ ಹೋಗಿ ಜೈಪುರದಲ್ಲಿ ವಾಸವಾಗಿದ್ದಳು. ಡಿಸೆಂಬರ್ 2025ರಲ್ಲಿ ಮತ್ತೆ ಅಲ್ವಾರಕ್ಕೆ ಬಂದು ರಿಷಬ್ ಜೊತೆಯಲ್ಲಿಯೇ ಅರ್ಚನಾ ವಾಸವಾಗಿರಲು ಆರಂಭಿಸಿದ್ದಳು.
8ನೇ ಫೆಬ್ರವರಿ 2026ರಂದು ಕರ್ಣವ್‌ವೆ ವಾಟ್ಸಪ್ ಕಾಲ್ ಮಾಡಿದ್ದ ರಿಷಬ್ ಜೀವ ಬೆದರಿಕೆ ಹಾಕಿದ್ದಾನೆ. ಮಾರ್ಚ್ 2026ರಂದು ಕಾರ್‌ನಲ್ಲಿ ಕರ್ಣವ್ ತೆರಳುತ್ತಿದ್ದಾಗ ತನ್ನ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಸಂಬಂಧ ಜೀವ ಬೆದರಿಕೆ ಆಡಿಯೋ ಕಾಲ್ ರೆಕಾರ್ಡ್ ಸಹ ಪೊಲೀಸರಿಗೆ ಸಲ್ಲಿಸಿದ್ದರು. ರಿಷಬ್ ಜೈಲು ಪಾಲಾಗ್ತಿದ್ದಂತೆ ಕರ್ಣವ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ಅರ್ಚನಾ ದೂರು ದಾಖಲಿಸಿದ್ದಳು.
ಗಂಡನಿಗೆ ಪತ್ರದ ಮೂಲಕ ಮೊದಲು 30 ಲಕ್ಷ ನಂತ್ರ 50 ಲಕ್ಷ ರೂಪಾಯಿ ನೀಡಬೇಕೆಂದು ಅರ್ಚನಾ ಬೆದರಿಕೆ ಹಾಕಿದ್ದಾಳೆ. ಕರ್ಣವ್ ಹೇಳಿಕೆ ಪ್ರಕಾರ, ಆರೋಪಿಗಳು ಫೋನ್ ಮೂಲಕ ತನಗೂ ಮತ್ತು ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇಬ್ಬರು 50 ಲಕ್ಷ ಪಡೆದುಕೊಂಡು ಓಡಿ ಹೋಗುವ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.