30 ವರ್ಷವಾಗಿದೆ ಈ ಕೆಲ್ಸವನ್ನೆಲ್ಲ ಅಪ್ಪಿತಪ್ಪಿಯೂ ಮಾಡ್ಬೇಡಿ! ಮಾಡಿದ್ರೆ ನೀವು ಮೂರ್ಖರು ಬಿಡಿ

First Published | Apr 2, 2024, 4:25 PM IST

ಜೀವನದಲ್ಲಿ ಎಲ್ಲವನ್ನೂ ಮಾಡಬೇಕು, ಆದರೆ ಪ್ರತಿಯೊಂದು ಕೆಲಸಕ್ಕೂ ಒಂದು ಸಮಯವಿದೆ, ಏಕೆಂದರೆ ನೀವು ಸರಿಯಾದ ಕೆಲಸವನ್ನು ತಪ್ಪು ಸಮಯದಲ್ಲಿ ಮಾಡಿದರೆ, ಅದು ತಪ್ಪು, ಆದ್ದರಿಂದ ಸಮಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ನಿಮ್ಮ ವಯಸ್ಸು 30 ಆಗಿದ್ದರೆ, ಯಾವ ಕೆಲಸವನ್ನು ಮಾಡಬಾರದು ಅನ್ನೋದರ ಬಗ್ಗೆ ತಿಳಿಯಿರಿ. 
 

ಜೀವನವನ್ನು ಎಂಜಾಯ್ (enjoy life) ಮಾಡಬೇಕು. ಯಾವುದರ ಬಗ್ಗೆಯೂ ಚಿಂತೆ ಮಾಡಬಾರದು ಎಂದು ಹೇಳುವವರೇ ಹೆಚ್ಚು. ಆದರೆ ಜೀವನ ಮತ್ತು ವ್ಯರ್ಥ ಜೀವನದ ನಡುವಿನ ವ್ಯತ್ಯಾಸವನ್ನು ಪ್ರತಿಯೊಬ್ಬರೂ ಸಹ ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಜೀವನವನ್ನು ಆನಂದಿಸಲು ಮತ್ತು ಹಾಳುಮಾಡೋದು ಎರಡೂ ನಾವು ಏನು ಮಾಡ್ತೀವಿ ಅನ್ನೋದರ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಜೀವನ ಹ್ಯಾಪಿಯಾಗಿರಲು ಏನು ಮಾಡಬೇಕು ಅನ್ನೋದನ್ನು ನೀವು ತಿಳಿದುಕೊಂಡಿದ್ರೆ ಉತ್ತಮ. 

30 ವರ್ಷದ ನಂತರವೂ(after 30) ಜವಾಬ್ದಾರಿಗಳನ್ನು ಅರಿತುಕೊಳ್ಳದ ಅನೇಕ ಜನರಿದ್ದಾರೆ, ಅವರು ತಮ್ಮ ಜೀವನವನ್ನು ನಡೆಸಲು ಮತ್ತು ಆಸೆಗಳನ್ನು ಪೂರೈಸಲು ಮಾತ್ರ ಗಮನ ಹರಿಸುತ್ತಾರೆ. ನಿಜವಾಗಿಯೂ ಜೀವನವನ್ನು ಎಂಜಾಯ್ ಮಾಡಬೇಕು ಅಂದಿದ್ರೆ, ನೀವು ಕೆಲವೊಂದು ತಪ್ಪುಗಳನ್ನು ಮಾಡೋದನ್ನು ನಿಲ್ಲಿಸಬೇಕು., ನೀವು ಆ ಕೆಲಸಗಳನ್ನು ಮಾಡುತ್ತಿದ್ದರೆ ಜಾಗರೂಕರಾಗಿರಬೇಕು ಇದರಿಂದ ನಿಮ್ಮ ಜೀವನವನ್ನು ಹಾಳಾಗೋದರಿಂದ ಕಾಪಾಡಬಹುದು.
 

Tap to resize

Cognitive Impairment

ಜೀವನದ ಪ್ಲ್ಯಾನಿಂಗ್ ಇರಲಿ
ಜೀವನದಲ್ಲಿ ಮುಂದೆ ಸಾಗಲು ಪ್ಲ್ಯಾನಿಂಗ್ (planning of life) ಅತ್ಯಂತ ಮುಖ್ಯವಾದ ವಿಷಯ, ಯಾವುದೇ ಚಿಂತೆಯಿಲ್ಲದೆ ಜೀವನವನ್ನು ನಡೆಸುವುದು, ಹೇಳಿದಷ್ಟು ಸುಲಭ ಅಲ್ಲ. ಪರ್ಫೆಕ್ಟ್ ಜೀವನ ಬೇಕಾದರೆ ಅದರ ಬಗ್ಗೆ ಇವತ್ತಿನಿಂದಲೇ ಪ್ಲ್ಯಾನ್ ಮಾಡೋದು ಮುಖ್ಯ. ಉದ್ಯೋಗ (Employment), ಮದುವೆ (Wedding), ಮಕ್ಕಳು ಮತ್ತು ಉಳಿತಾಯ (Savings) ಎಲ್ಲಾದಕ್ಕೂ ಪ್ಲ್ಯಾನಿಂಗ್ ಅಗತ್ಯವಿದೆ. ಇದರಿಂದ ನೀವು ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಪಡೆಯುವ ಮೂಲಕ ನಿವೃತ್ತಿಯನ್ನು ಎಂಜಾಯ್ ಮಾಡಬಹುದು.

ಫೋನ್ ಅಡಿಕ್ಷನ್
ಪುಸ್ತಕ ಓದುವುದು (reading books) ಅತ್ಯುತ್ತಮ ಅಭ್ಯಾಸಗಳಲ್ಲೊಂದು. ನೀವು 30 ವರ್ಷದ ನಂತರವೂ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಮಾಡದಿದ್ದರೆ, ನೀವು ತಪ್ಪು ಮಾಡುತ್ತಿದ್ದೀರಿ. ಏಕೆಂದರೆ ನಾವು ಪುಸ್ತಕಗಳಿಂದ ಬಹಳಷ್ಟು ಕಲಿಯುತ್ತೇವೆ, ಪುಸ್ತಕಗಳೂ ಒಂದು ಸಮಯದಲ್ಲಿ ನಮ್ಮ ಸ್ನೇಹಿತರಾಗುತ್ತವೆ. ಜೀವನವನ್ನು ಸುಲಭಗೊಳಿಸಲು ಸ್ನೇಹಿತರನ್ನು ಮಾಡಿಕೊಳ್ಳುವುದು ಮುಖ್ಯ, ಆದ್ದರಿಂದ ನೀವು ನಿಮ್ಮ ಆಸಕ್ತಿಯ ಪುಸ್ತಕವನ್ನು ಓದಬೇಕು. ಫೋನ್ ಅನ್ನು ಆಪರೇಟ್ ಮಾಡುವುದು ಸಹ ಅಗತ್ಯವಾಗಿದ್ದರೂ, ಫೋನ್ ಅನ್ನು ಬಳಸುವ ಮೂಲಕ ಪುಸ್ತಕಗಳಿಂದ ದೂರವಿರುವುದು ತಪ್ಪಾಗಬಹುದು.

ಕುಟುಂಬದ ಬಗ್ಗೆ ಗಮನ
ಕೆಲವು ಜನರು ತಮ್ಮ ಕೆಲಸ ಅಥವಾ ಸ್ನೇಹಿತರಲ್ಲಿ ಎಷ್ಟೊಂದು ಬ್ಯುಸಿಯಾಗಿರ್ತಾರೆ ಅಂದ್ರೆ ಅವರು ಕುಟುಂಬದ ಬಗ್ಗೆ ಕಾಳಜಿ ವಹಿಸೋದೇ ಇಲ್ಲ, ಆರಂಭದಲ್ಲಿ, ಕುಟುಂಬ (importance of family) ಅಂದುಕೊಳ್ಳುತ್ತೆ ಬಹುಶಃ ಹೆಚ್ಚಿನ ಕೆಲಸವಿರೋದ್ರಿಂದ ನಮ್ಮತ್ತ ಗಮನ ಹರಿಸೋದಿಲ್ಲ. ಆದರೆ ಸ್ವಲ್ಪ ಸಮಯದ ನಂತರ, ನೀವು ಅವರ ಬಗ್ಗೆ ಗಮನ ಹರಿಸದಿದ್ದರೆ  ಅವರಿಗೆ ನಮ್ಮ ಅಗತ್ಯಾನೆ ಇಲ್ಲವೇ ಎನ್ನುವ ಪ್ರಶ್ನೆ ಮನಸ್ಸಲ್ಲಿ ಮೂಡುತ್ತೆ. ಇದು ಸಂಬಂಧದ ಮೇಲೆ ನೇರ ಪರಿಣಾಮ ಬೀರುತ್ತದೆ. 

ಯೌವ್ವನದ ಆಸೆ ಈಡೇರಿಸಲು ಖರ್ಚು ಮಾಡುವುದು
ಚಿಕ್ಕ ವಯಸ್ಸು ಎಂದರೆ ಒಬ್ಬ ವ್ಯಕ್ತಿಯು ಕಡಿಮೆ ತಿಳುವಳಿಕೆ ಮತ್ತು ಹೆಚ್ಚು ಉತ್ಸಾಹವನ್ನು ಹೊಂದಿರುವ ಸಮಯ. ಜೀವನವನ್ನು ಆನಂದಿಸುವ ಹೆಸರಿನಲ್ಲಿ ಮಾತ್ರ ಖರ್ಚು ಮಾಡುವ ಕೆಲವು ಜನರಿದ್ದಾರೆ. ವೃತ್ತಿಜೀವನ (Career) ಮತ್ತು ಉಳಿತಾಯದ (Savings) ಬಗ್ಗೆ ಯೋಚಿಸದೇ, ತಮ್ಮ ಯೌವ್ವನದ ಆಸೆಗಳನ್ನು ಈಡೇರಿಸಲು ಖರ್ಚು ಮಾಡುತ್ತಿದ್ದರೆ, ಮುಂದಿನ ಜೀವನ ನರಕವಾಗಬಹುದು. 

ನಿಮ್ಮನ್ನು ನಿಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಳ್ಳದಿರೋದು
ನಿಮ್ಮ ಪ್ರೀತಿಪಾತ್ರರಿಗಾಗಿ ಬದುಕುವುದು, ನಿಮ್ಮ ಕೆಲಸದ ಮೇಲೆ ಗಮನ ಹರಿಸುವುದು ಮತ್ತು ನಿಮ್ಮ ಜವಾಬ್ದಾರಿಗಳನ್ನು ಪೂರೈಸುವುದು ಸರಿ, ಆದರೆ ನಿಮಗಾಗಿ ಸಮಯ ತೆಗೆದುಕೊಳ್ಳುವುದು ಮತ್ತು ನಿಮ್ಮನ್ನು ಮೊದಲ ಆದ್ಯತೆಯನ್ನಾಗಿ (giving importance to yourself) ಮಾಡುವುದು ಇನ್ನೂ ಮುಖ್ಯ. ನಿಮಗಾಗಿ ಮೀಸಲಿಟ್ಟ ಸಮಯದಲ್ಲಿ ನಿಮ್ಮನ್ನು ತಿಳಿದುಕೊಳ್ಳುವುದು ಮತ್ತು ನಿಮ್ಮ ಹವ್ಯಾಸಗಳನ್ನು ಅನ್ವೇಷಿಸುವುದು ಜೀವನದ ಒಂದು ಭಾಗವಾಗಿದೆ, ನೀವು ಇದನ್ನು ಮಾಡದಿದ್ದರೆ ಅದು ದೊಡ್ಡ ತಪ್ಪು.

Latest Videos

click me!