ಭಾರತೀಯರೂ ವಿವಾಹೇತರ ಸಂಬಂಧಕ್ಕೆ ಸೈ ಅಂತಿದ್ದಾರೆ! ಮದ್ವೆ ಮೌಲ್ಯ ಕಡಿಮೆಯಾಗಿದ್ದೇಕೆ?

First Published | Apr 2, 2024, 4:02 PM IST

ಇತ್ತೀಚಿಗೆ ಮದುವೆ ಅನ್ನೋದು ಗಟ್ಟಿಯಾಗಿ, ಬಹಳ ವರ್ಷಗಳವರೆಗೆ ಸಾಗೋದು ಕಷ್ಟವಾಗಿರುವಂತಿದೆ. ಯಾಕಂದ್ರೆ ಮದುವೆಯಾಗಿ ಸ್ವಲ್ಪ ಸಮಯದಲ್ಲೇ ಡಿವೋರ್ಸ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ, ಅಷ್ಟೇ ಅಲ್ಲ ವಿವಾಹೇತರ ಸಂಬಂಧಗಳೂ ಹೆಚ್ಚುತ್ತಿವೆ. 
 

ಜಗತ್ತು ಬದಲಾಗುತ್ತಿದೆ, ನಾವು ಬದಲಾಗ್ತಿದ್ದೀವಿ, ನೀವು ಬದಲಾಗಿದ್ದೀರಿ ಅಲ್ವಾ? ಎಲ್ಲಾ ಬದಲಾಗೋವಾಗ ಪ್ರೀತಿ ಎಲ್ಲಿ ಉಳಿಯುತ್ತೆ. ಜನರಲ್ಲಿ ಶಾಶ್ವತ ಪ್ರೀತಿ ಅನ್ನೋದೇ ಇಲ್ಲ, ಏನಿದ್ದರೂ ಟೈಮ್ ಪಾಸ್ ಪ್ರೀತಿಯತ್ತಲೇ ಆಕರ್ಷಿತರಾಗ್ತಾರೆ. ಅಂತದ್ರಲ್ಲಿ ಭಾರತದಲ್ಲಿ ಮದುವೆಯಾದ ಮೇಲೂ ಸಂಬಂಧ ಹೊಂದುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗಿದ್ರೆ ಜಗತ್ತಿನಲ್ಲಿ ಪ್ರೀತಿಯೇ ಉಳಿದಿಲ್ವಾ? ವಿವಾಹೇತರ ಡೇಟಿಂಗ್ (ectramarital dating) ಅಪ್ಲಿಕೇಶನ್ ಗ್ಲೀಡೆನ್ ಇತ್ತೀಚೆಗೆ ನಡೆಸಿದ ಅಧ್ಯಯನವು ಭಾರತದಲ್ಲಿ ವಿವಾಹಿತ ಜನರ ಬಗ್ಗೆ ಶಾಕಿಂಗ್ ವಿಷಯವನ್ನು ಬಹಿರಂಗಪಡಿಸಿದೆ. ಅಧ್ಯಯನದ ಫಲಿತಾಂಶಗಳ ಪ್ರಕಾರ, ಭಾರತದಲ್ಲಿ ಜನರು ಈಗ ವಿವಾಹೇತರ ಡೇಟಿಂಗ್‌ಗೆ ಹೆಚ್ಚು ಆಕರ್ಷಿತರಾಗಿದ್ದಾರಂತೆ.

ಗ್ಲೀಡೆನ್ ಸಮೀಕ್ಷೆ ಏನು ಹೇಳುತ್ತದೆ?
ಮದುವೆ, ದಾಂಪತ್ಯ ದ್ರೋಹ ಮತ್ತು ಸಾಂಸ್ಕೃತಿಕ ಕಟ್ಟುಪಾಡುಗಳ ಬಗ್ಗೆ ಭಾರತದ ಬದಲಾಗುತ್ತಿರುವ ಮನೋಭಾವದ ಬಗ್ಗೆ ಗ್ಲೀಡೆನ್ ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನವು 25 ರಿಂದ 50 ವರ್ಷದೊಳಗಿನ ಶ್ರೇಣಿ 1 ಮತ್ತು ಶ್ರೇಣಿ 2 ನಗರಗಳ 1,503 ವಿವಾಹಿತ ಭಾರತೀಯರನ್ನು (married Indians) ಒಳಗೊಂಡಿತ್ತು. 
 

Latest Videos


ಅಧ್ಯಯನದಲ್ಲಿ ಭಾಗಿಯಾಗಿರುವ 60 ಪ್ರತಿಶತಕ್ಕೂ ಹೆಚ್ಚು ಜನರು ಸ್ವಿಂಗ್ (ಇದರಲ್ಲಿ ಸಂಗಾತಿ ಇದ್ದರೂ ಸಹ, ಮೋಜಿಗಾಗಿ ಇತರರೊಂದಿಗೆ ಸಂಬಂಧಗಳನ್ನು ರೂಪಿಸುತ್ತಾರೆ) ನಂತಹ ಸಾಂಪ್ರದಾಯಿಕವಲ್ಲದ ಡೇಟಿಂಗ್ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಸಂಶೋಧನೆ ತೋರಿಸಿದೆ. ಭಾರತದಲ್ಲಿ ಓಪನ್ ರಿಲೇಶನ್ ಶಿಪ್ (oepn relationship) ಟ್ರೆಂಡ್ ಹೆಚ್ಚುತ್ತಿದೆ ಎಂದು ಸಂಶೋಧನೆಯ ಫಲಿತಾಂಶಗಳು ತಿಳಿಸಿವೆ.
 

ಅಚ್ಚರಿಯ ವಿಷ್ಯ ಏನೆಂದ್ರೆ ಮದುವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತಹ ಭಾರತೀಯ ಸಮಾಜದಲ್ಲಿ ಎಕ್ಸ್ ಟ್ರಾ ಮ್ಯಾರಿಟಲ್ ಅಫೇರ್ ಹೊಂದುವುದು ಸಾಮಾನ್ಯವಾಗಿರೋದೆ ಅಚ್ಚರಿಯಾಗಿದೆ.  ಭಾರತದಲ್ಲಿ ಮದುವೆ ಎಂದರೆ ಗಂಡು ಹೆಣ್ಣಿನ ಎಂದೂ ಬಿಟ್ಟಿರಲಾರದ ಬಾಂದವ್ಯ, ಒಂದು ಬಾರಿ ತಾಳಿ ಕಟ್ಟಿದರೆ ಗಂಡ ಹೆಂಡತಿ ಕೊನೆಯವರೆಗೂ ಜೊತೆಯಾಗಿರಬೇಕು ಎಂದು ಜನ ನಂಬುತ್ತಾರೆ.. 
 

ಈ ಅಧ್ಯಯನವು ಮದುವೆಯ ನಂತರದ ದಾಂಪತ್ಯ ದ್ರೋಹ ನೀಡೋದಕ್ಕೆ ಏನೆಲ್ಲಾ ಕಾರಣಗಳಿವೆ ಅನ್ನೋದನ್ನು ತಿಳಿಸಿದೆ. 

ಪ್ಲೇಟೋನಿಕ್ ಇಂಟಾರಾಕ್ಷನ್ (46 ಪ್ರತಿಶತ) (pletonic interaction)
ಈ ರೀತಿ ದಾಂಪತ್ಯ ದ್ರೋಹ ಮದುವೆಯ ಹೊರಗಿನ ಇನ್ನೊಬ್ಬ ವ್ಯಕ್ತಿಯೊಂದಿಗಿನ ದೈಹಿಕ ಸಂಬಂಧಗಳಿಗೆ ಸೀಮಿತವಾಗಿಲ್ಲ, ಆದರೆ ಭಾವನಾತ್ಮಕ ಸಂಬಂಧವನ್ನು (Emotional Relationship) ಸಹ ಒಳಗೊಂಡಿದೆ. ಒಬ್ಬ ವ್ಯಕ್ತಿಯು ಮದುವೆಯ ಹೊರಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಭಾವನಾತ್ಮಕವಾಗಿ ಅಂಟಿಕೊಂಡಿದ್ದರೆ, ಅದನ್ನು ದಾಂಪತ್ಯ ದ್ರೋಹವೆಂದು ಪರಿಗಣಿಸಲಾಗುತ್ತದೆ.

ಸಮೀಕ್ಷೆಯಲ್ಲಿ ಶೇಕಡಾ 46 ರಷ್ಟು ಪುರುಷರು ಸಂಬಂಧದಲ್ಲಿ ಮುಂದುವರಿಯಲು ಬಯಸುತ್ತಾರೆ, ಕೋಲ್ಕತ್ತಾ (52 ಪ್ರತಿಶತ) ದ ಹೆಚ್ಚಿನ ಪುರುಷರು ಈ ರೀತಿಯಲ್ಲಿ ಭಾವನಾತ್ಮಕ ಸಂಬಂಧದಲ್ಲಿ ಮುಂದುವರೆಯಲು ಇಷ್ಟಪಡ್ತಾರೆ. 
 

ವರ್ಚುವಲ್ ಫ್ಲರ್ಟಿಂಗ್ (Virtual flirting)
ಡಿಜಿಟಲ್ ಜಗತ್ತಿನಲ್ಲಿ (Digital World), ಆನ್ಲೈನ್ ಫ್ಲರ್ಟ್ (Online Flirt) ಮಾಡುವುದು ದಾಂಪತ್ಯ ದ್ರೋಹದ (Marital Cheating) ಸಾಮಾನ್ಯ ರೂಪ. 36 ಪ್ರತಿಶತ ಮಹಿಳೆಯರು ಮತ್ತು 35 ಪ್ರತಿಶತ ಪುರುಷರು ವರ್ಚುವಲ್ ಫ್ಲರ್ಟಿಂದ್ ಪ್ರಲೋಭನೆಗೆ ಒಳಗಾಗುತ್ತಾರೆ ಎಂದು ವರದಿ ತೋರಿಸುತ್ತದೆ. ಇದರಲ್ಲಿ ಕೊಚ್ಚಿಯ ಜನರು ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ (35 ಪ್ರತಿಶತ). 
 

ಸಂಗಾತಿಯನ್ನು ಹೊರತುಪಡಿಸಿ ಬೇರೊಬ್ಬರೊಂದಿಗೆ ವಾಸಿಸುವ ಕನಸು ಕಾಣುವುದು (33-35 ಪ್ರತಿಶತ) 
ಇದು ಈಗ ಸಾಮಾನ್ಯ ಮತ್ತು ತಮ್ಮ ಸಂಗಾತಿಯನ್ನು ಬಿಟ್ಟು, ಬೇರೊಬ್ಬರ ಬಗ್ಗೆ ಯೋಚಿಸೋದು ದೊಡ್ಡ ವಿಷ್ಯ ಅಲ್ಲ. ಶೇಕಡಾ 33ರಷ್ಟು ಪುರುಷರು ಮತ್ತು ಶೇಕಡಾ 35ರಷ್ಟು ಮಹಿಳೆಯರು ಅಂತಹ ಕಲ್ಪನೆಗಳನ್ನು ಹೊಂದಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ಡೇಟಾ ತೋರಿಸುತ್ತದೆ.
 

click me!