21ನೇ ಶತಮಾನದಲ್ಲಿ ಸಂಬಂಧಗಳಲ್ಲಿ ಯಾವುದೇ ನಂಬಿಕೆ ಇಲ್ಲದಂತಾಗಿದೆ. ಇಂದು ರಿಲೇಶನ್‌ಶಿಪ್‌ನಲ್ಲಿ ಹಲವು ಟ್ರೆಂಡ್‌ಗಳು ಶುರುವಾಗಿದೆ. ಇದೀಗ One Night Stand Relationships ಟ್ರೆಂಡ್ ಶುರುವಾಗಿದೆ. ಈ ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್ ನಲ್ಲಿ ಭಾವನೆಗಳಿಗೆ ಯಾವುದೇ ಬೆಲೆಯಿರಲ್ಲ.
26
ಇಂದಿನ ಯುವ ಸಮುದಾಯವನ್ನು ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್ ಆಕರ್ಷಿಸುತ್ತಿದೆ. ಈ ರಿಲೇಶನ್‌ಶಿಪ್‌ನಲ್ಲಿ ಕೇವಲ ದೈಹಿಕ ಆನಂದಕ್ಕಾಗಿ ಮಾತ್ರ ಸಂಬಂಧ ಹೊಂದಲಾಗುತ್ತದೆ. ವಿದೇಶಗಳಲ್ಲಿ ಈ ಟ್ರೆಂಡ್ ಆರಂಭಗೊಂಡಿದೆ.
36
ಮಹಾನಗರ ಸೇರಿದಂತೆ ವಿದೇಶಗಳಲ್ಲಿ ಹುಡುಗರು ಮಾತ್ರವಲ್ಲ, ಹುಡುಗಿಯರು ಸಹ ಒನ್ ನೈಟ್ ಸ್ಟ್ಯಾಂಡ್ ಜೀವನಶೈಲಿಯತ್ತ ಆಕರ್ಷಿತರಾಗುತ್ತಿದ್ದಾರೆ. ವರದಿಗಳ ಪ್ರಕಾರ, ಭಾರತದಲ್ಲಿಯೂ ಒನ್ ನೈಟ್ ಸ್ಟ್ಯಾಂಡ್ ಜೀವನಶೈಲಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಜೀವನಶೈಲಿ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ಅಮೆರಿಕದಲ್ಲಿ ಒನ್ ನೈಟ್ ಸ್ಟ್ಯಾಂಡ್ ಟ್ರೆಂಡ್ ಅಧಿಕವಾಗಿದೆ. ಇಲ್ಲಿನ ಯುವ ಸಮುದಾಯ ಈ ಸಂಸ್ಕೃತಿಯನ್ನು ಬಹಳಷ್ಟು ಪ್ರೀತಿಸುತ್ತಾರೆ. ಅಮೆರಿಕದಲ್ಲಿ ಸುಮಾರು ಶೇ. 72 ರಷ್ಟು ಪುರುಷರು ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್ ಹೊಂದಿರೋದಾಗಿ ಒಪ್ಪಿಕೊಂಡಿದ್ದಾರೆ. ಅಮೆರಿಕದ 10ರಲ್ಲಿ 7 ಪುರುಷರು, ಒಂದು ರಾತ್ರಿ ಸಂಬಂಧದಲ್ಲಿದ್ದಾರೆ.
56
ಪುರುಷುರ ಮಾತ್ರವಲ್ಲ ಅಮೆರಿಕದ ಮಹಿಳೆಯರು ಸಹ ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್‌ನಲ್ಲಿ ಆಸಕ್ತಿ ಹೊಂದಿದ್ದಾರೆ. ಅಮೆರಿಕದ ಶೇ. 68ರಷ್ಟು ಮಹಿಳೆಯರು ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್‌ನಲ್ಲಿ ಭಾಗಿಯಾಗಿರೋದಾಗಿ ಒಪ್ಪಿಕೊಂಡಿದ್ದಾರೆ.
66
ಅಮೆರಿಕದಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್‌ಗಾಗಿ ಜನರನ್ನು ಸಂಪರ್ಕಿಸುತ್ತಾರೆ. ಕ್ಲಬ್, ಪಾರ್ಟಿಗಳಲ್ಲಿ ಭೇಟಿಯಾಗುವ ಮೂಲಕ ತಮ್ಮ ಒಂದು ದಿನದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ ಈ ಸಂಬಂಧವನ್ನು ಸಮಸ್ಯೆಯೆಂದು ಪರಿಗಣಿಸಲ್ಲ. ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ.42ರಷ್ಟು ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್‌ನಲ್ಲಿ ಭಾಗಿಯಾಗಿದ್ದಾರೆ. ನಾರ್ವೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿಯೂ ಈ ರಿಲೇಶನ್‌ಶಿಪ್ ಸಾಮಾನ್ಯವಾಗಿದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.