ಗಂಡಿಗಿಂತ ಹೆಣ್ಣಿಗೇ ಕಾಮದಾಹ ಹೆಚ್ಚಾ? ಬೆಡ್ ರಹಸ್ಯ ಬಿಚ್ಚಿಟ್ಟ ವೌಚರ್ ಕೋಡ್ಸ್ ಅಧ್ಯಯನ

Published : Jan 16, 2026, 08:52 PM IST

ಗಂಡಿಗಿಂತ ಹೆಣ್ಣಿಗೇ ಕಾಮದಾಹ ಹೆಚ್ಚಾ? ಬೆಡ್ ರಹಸ್ಯ ಬಿಚ್ಚಿಟ್ಟ ವೌಚರ್ ಕೋಡ್ಸ್ ಅಧ್ಯಯನ, ಪುರುಷ ಹಾಗೂ ಹೆಣ್ಣಿನ ಬೆಡ್ ರಹಸ್ಯದ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಹಲವು ಉಹಾಪೋಹಗಳಿಗೆ ಈ ಅಧ್ಯಯನ ವರದಿ ತೆರೆ ಎಳೆದಿದೆ. 

PREV
15
ಯಾರಿಗೆ ಹೆಚ್ಚು ಆಸಕ್ತಿ? ಪುರುಷನಿಗೋ-ಮಹಿಳೆಗೋ

ಕಾಮದಾಹ ವಿಚಾರದಲ್ಲಿ ಹಲವು ಚರ್ಚೆಗಳು ನಡೆದಿದೆ. ಇನ್ನು ಬಹುತೇಕ ಚರ್ಚೆಗಳು ಗೌಪ್ಯವಾಗಿಯೇ ನಡೆಯುತ್ತದೆ. ಸಾಮಾನ್ಯವಾಗಿ ಪುರುಷರಿಗೆ ಹೆಚ್ಚು ಕಾಮಾಸಕ್ತಿ ಅನ್ನೋ ಮಾತುಗಳು ಸಹಜವಾಗಿ ಕೇಳಿಬರುತ್ತದೆ. ಇದಕ್ಕೆ ಚರ್ಚೆಗಳಲ್ಲಿ ಹಲವು ಉದಾಹರಣೆಗಳನ್ನು ನೀಡಲಾಗುತ್ತದೆ. ಆದರೆ ವಾಚರ್ ಕೋಡ್ಸ್ ಪ್ರೋ ಸಂಸ್ಥೆಯ ಅಧ್ಯಯನ ವರದಿ ಈ ಎಲ್ಲಾ ಊಹೆಗಳಿಗೆ ತೆರೆ ಎಳೆದಿದೆ.

25
ಅಧ್ಯಯನ ವರದಿ ಪ್ರಕಾರ ಯಾರಿಗೆ ದಾಹ ಹೆಚ್ಚು

ವಾಚರ್ ಕೋಡ್ಸ್ ಪ್ರೋ ಅಧ್ಯಯನ ಪ್ರಕಾರ ಪುರುಷರಿಗಿಂತ ಹೆಚ್ಚು ಕಾಮಾಸಕ್ತಿ, ಕಾಮದಾಹ ಮಹಿಳೆಯರಿಗೆ ಇದೆ ಎಂದಿದೆ. ಪುರುಷರು ತಮ್ಮ ಆಸಕ್ತಿ ಪ್ರಕಟಿಸುವು ಸಾಧ್ಯತೆಗಳು ಹೆಚ್ಚು. ಆದರೆ ಮಹಿಳೆ ಪ್ರಕಟಿಸದೇ ಇರಬಹುದು. ಪುರುಷ ಹಾಗೂ ಮಹಿಳೆಗೆ ಹೋಲಿಕೆ ಮಾಡಿದರೆ ಆಸಕ್ತಿ, ದಾಹ ಮಹಿಳೆಗೆ ಹೆಚ್ಚು ಎಂದು ವರದಿ ಹೇಳಿದೆ

35
ಆಸಕ್ತಿ, ದಾಹ ಕುರಿತು ಪುರುಷುರ ಮಹಿಳೆಯರು ಹೇಳುವುದೇನು

ಅಧ್ಯಯನ ವರದಿಯಲ್ಲಿ 18 ವರ್ಷ ಮೇಲ್ಪಟ್ಟ 2385 ಮಂದಿಯನ್ನು ಸಂದರ್ಶಿಸಿ, ಗೌಪ್ಯ ಮಾಹಿತಿಗಳನ್ನು ಪಡೆದು ವರದಿ ತಯಾರಿಸಲಾಗಿದೆ. ಯುಕೆಯಲ್ಲಿ ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ ಶೇಕಡಾ 59ರಷ್ಟು ಮಹಿಳೆಯರು ಸಂಗಾತಿ ಜೊತೆಗೆ ಹೆಚ್ಚು ಸಮಯ ಬೆಡ್‌ನಲ್ಲಿ ಕಳೆಯುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ಪುರುಷರ ಈ ಸಂಖ್ಯೆ ಶೇಕಡಾ 41 ಮಾತ್ರ.

45
ಇದೇ ವಿಚಾರಕ್ಕೆ ಜಗಳ

ಅಧ್ಯಯನ ವರದಿ ಮತ್ತೊಂದು ಮಹತ್ವದ ವಿಚಾರ ಬಹಿರಂಗಪಡಿಸಿದೆ.ಶೇಕಡಾ 21ರಷ್ಟು ಜೋಡಿಗಳು ತಮ್ಮ ಹಳೇ ಲೈ0(ಗಿ)ಕತೆ ವಿಚಾರದಲ್ಲಿ ಜಗಳವಾಡಿದ್ದಾರೆ. ಮಾಜಿ ಸಂಗಾತಿ ಜೊತೆಗಿನ ಬೆಡ್ ವಿಚಾರ, ಮಾಜಿ ಸಂಗಾತಿ ಜೊತೆಗಿನ ಲೈ0(ಗಿ)ಕ ವಿಚಾರಗಳಲ್ಲಿ ಜಗಳವಾಡಿ ಬೇರ್ಪಟ್ಟ ಉದಾಹರಣೆಗಳು ಇವೆ ಎಂದಿದೆ.

ಇದೇ ವಿಚಾರಕ್ಕೆ ಜಗಳ

55
ಅಡ್ವೆಂಚರ್ ಇಲ್ಲ

ಅದ್ಯಯನ ವರದಿ ಪ್ರಕಾರ ಶೇಕಡಾ 34ರಷ್ಟು ಮಂದಿ ತಮ್ಮ ಸಂಗಾತಿ ಬೆಡ್‌ನಲ್ಲಿ ಸ್ಲೋ ಎಂದಿದ್ದಾರೆ. ಇದೇ ವೇಳೆ ಶೇಕಡಾ 34ರಷ್ಟು ಮಂದಿ ಸಂಗಾತಿಯಿಂದ ಅಡ್ವೆಂಚರ್ ಸಿಗುತ್ತಿಲ್ಲ. ಬೆಡ್‌ನಲ್ಲಿ ಉತ್ತಮ ಸಮಯ ಕಳೆಯುತ್ತಿಲ್ಲ ಎಂದಿದ್ದಾರೆ. ಇದು ಬಹುತೇಕ ಮಹಿಳೆಯರ ಹೇಳಿದ ಮಾತು ಎಂದು ಅಧ್ಯಯನ ವರದಿ ಹೇಳಿದೆ.

ಅಡ್ವೆಂಚರ್ ಇಲ್ಲ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories