52ರ ಹರೆಯದಲ್ಲೂ ಸದ್ದು ಮಾಡುತ್ತಿರುವ ನಟಿ ಮಲೈಕಾ ಅರೋರಾ, ಅರ್ಬಾಜ್ ಖಾನ್ ಜೊತೆ ವಿಚ್ಛೇದನದ ನಂತರ ಅರ್ಜುನ್ ಕಪೂರ್ ಜೊತೆ ಡೇಟಿಂಗ್‌ನಲ್ಲಿದ್ದರು. 'ಪ್ರೀ ಹನಿಮೂನ್' ಹಂತವನ್ನು ಆನಂದಿಸುತ್ತಿದ್ದೇವೆ ಎಂದಿದ್ದ ನಟಿ, ಇದೀಗ 19 ವರ್ಷ ಚಿಕ್ಕ ಯುವಕನ ಜೊತೆ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಅವರಿಗೆ ಈಗ 52 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಫಿಟ್ ಆಗಿದ್ದಾರೆ ನಟಿ. ತಮ್ಮ ಲವ್ ಅಫೇರ್ನಿಂದ ಸದಾ ಸದ್ದು ಮಾಡ್ತಿರೋ ನಟಿ ಈಕೆ. ನಟಿ ಮಲೈಕಾ ಕೆಲ ವರ್ಷಗಳಿಂದ ದೇಹ ಪ್ರದರ್ಶನವಿಲ್ಲದ ಬಟ್ಟೆಗಳನ್ನು ಧರಿಸಿದ್ದೇ ಇಲ್ಲ ಎನ್ನಬಹುದೇನೋ. ರಿಯಾಲಿಟಿ ಷೋಗಳಿಗೆ ಜಡ್ಜ್ ಆಗಿ ಬರುವುದರಿಂದ ಹಿಡಿದು ಹೊರಗಡೆ ಎಲ್ಲಿಯೇ ಹೋಗುವುದಿದ್ದರೂ ಅರ್ದಂಬರ್ಧ ಡ್ರೆಸ್ ಧರಿಸುತ್ತಾರೆ. ಇತರ ಯುವ ನಟಿಯರ ಜೊತೆ ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುತ್ತಾ ತಿರುಗಾಡುವುದು ಇವರಿಗೆ ತುಂಬಾ ಇಷ್ಟ. ಇದಕ್ಕಾಗಿ ಸಾಕಷ್ಟು ಬಾರಿ ಟ್ರೋಲ್ಗೆ ಒಳಗಾಗಿದ್ದರೂ, ಅದರಿಂದಲೇ ಇನ್ನಷ್ಟು ಫೇಮಸ್ ಆಗುತ್ತಿರುವವರು ನಟಿ ಮಲೈಕಾ.
26
ಮೂರನೆ ಯುವಕನ ಜೊತೆ
ಅರ್ಬಾಜ್ ಖಾನ್ ಅವರಿಗೆ ಡಿವೋರ್ಸ್ ಕೊಟ್ಟು ಅರ್ಜುನ್ ಕಪೂರ್ ಜೊತೆ ಬಹಳ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು ನಟಿ ಮಲೈಕಾ (Malaika Arora). ಹಲವು ವರ್ಷ ಎಲ್ಲೆಡೆ ಸುತ್ತಾಡಿ, ಎಲ್ಲ ರೀತಿಯ ಸಂಬಂಧ ಬೆಳಿಸಿ ಅವರೂ ಬೋರ್ ಆದಾಗ ಇದೀಗ 19 ವರ್ಷ ಚಿಕ್ಕ ವಯಸ್ಸಿನ ಯುವಕನ ಜೊತೆ ಡೇಟಿಂಗ್ನಲ್ಲಿ ಇದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಇದಾಗಲೇ ನಟಿ ಆ ಯುವಕನ ಜೊತೆ ಸಂಬಂಧದಲ್ಲಿ ಇರುವ ಬಗ್ಗೆ ಪರೋಕ್ಷವಾಗಿ ಹೇಳಿಕೊಂಡಿದ್ದು, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
36
ಅರ್ಬಾಜ್ ಜೊತೆನೂ ಸ್ನೇಹ
ಮಾಜಿ ಪತಿ ಅರ್ಬಾಜ್ಯ ಜೊತೆ ಮಧುರ ಸ್ನೇಹವನ್ನು ಇಟ್ಟುಕೊಂಡು, ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಬಹಳ ವರ್ಷಗಳಿಂದ ಡೇಟಿಂಗ್ನಲ್ಲಿದ್ದು, ಇದೀಗ ಮತ್ತೊಬ್ಬನ ಜೊತೆ ಸಂಬಂಧದಲ್ಲಿರೋ ನಟಿ ಮಲೈಕಾ, ತಮ್ಮ ಮತ್ತು ಅರ್ಜುನ್ ಕಪೂರ್ ಸಂಬಂಧದ ಕುರಿತು ಮುಕ್ತವಾಗಿ ಮಾತನಾಡಿದ್ದು, ಅದರ ವಿಡಿಯೋ ಪುನಃ ವೈರಲ್ ಆಗಿದೆ.
ನಾವು ಮದುವೆಯಾಗದಿದ್ದರೇನು, ಪ್ರೀ ಹನಿಮೂನ್ ಹಂತವನ್ನು ಅನಭವಿಸುತ್ತಿದ್ದೇವೆ ಎಂದಿದ್ದರು ನಟಿ. 19 ವರ್ಷಗಳ ದಾಂಪತ್ಯದ ನಂತರ 2017ರಲ್ಲಿ ಅರ್ಬಾಜ್ ಖಾನ್ಗೆ (Arbaz Khan) ವಿಚ್ಛೇದನ ನೀಡಿದ ಬಳಿಕ 12 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಜೊತೆ ಸಂಬಂಧ ಹೊಂದಿರುವ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಬೋಲ್ಡ್ ಆಗಿ ಉತ್ತರಿಸಿದ್ದರು ಮಲೈಕಾ, ಅರ್ಜುನ್ ಕಪೂರ್ ಜೊತೆ ಮದುವೆ ಆಗುವುದಿಲ್ಲವೆ ಎಂದು ಕೇಳಿದಾಗ, ಮದುವೆ ಯಾಕೆ? ಪ್ರೀ ಹನಿಮೂನ್ ಆನಂದ ಅನುಭವಿಸುತ್ತಿದ್ದೇವೆ. ಮದುವೆ ಎನ್ನುವುದು ಇಬ್ಬರ ನಡುವೆ ಚರ್ಚೆಯಾಗುವ ವಿಷಯ. ನಮಗೆ ಅನಿಸಿದರೆ, ನಾವು ಅದರ ಬಗ್ಗೆ ಯೋಚಿಸುತ್ತೇವೆ, ಆದರೆ ಸದ್ಯಕ್ಕೆ ಯಾವುದೇ ಯೋಜನೆಗಳಿಲ್ಲ ಎಂದಿದ್ದರು
56
ಈ ಕ್ಷಣದ ಪ್ರೀತಿ
ಈ ಕ್ಷಣದಲ್ಲಿ, ನಾವು ಜೀವನವನ್ನು ಪ್ರೀತಿಸುತ್ತಿದ್ದೇವೆ. ನಮ್ಮ ಪ್ರೀ ಹನಿಮೂನ್ ಹಂತವನ್ನು ನಾವು ತುಂಬಾ ಆನಂದಿಸುತ್ತಿದ್ದೇವೆ. ತುಂಬಾ ಚಿಕ್ಕವನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಜನ ಹೇಳುತ್ತಾರೆ. ಡೇಟಿಂಗ್ ಮಾಡುವುದರಲ್ಲಿ ತಪ್ಪೇನಿದೆ? ಇದು ಅದ್ಭುತ ಅನುಭವ. ವಿಚ್ಛೇದನದ (Divorce) ನಂತರ ಪ್ರೀತಿ ಸಿಗುವುದು ಬೇರೆ ವಿಷಯ. ಕಿರಿಯ ವ್ಯಕ್ತಿಯಲ್ಲಿ ಪ್ರೀತಿಯನ್ನು ಕಂಡುಕೊಂಡ ನಂತರ, ನಾನು ಎಲ್ಲವನ್ನೂ ಹಳೆಯದ್ದನ್ನೆಲ್ಲಾ ಮರೆತಿದ್ದೇನೆ. ಪ್ರೀತಿಗೆ ವಯಸ್ಸಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ ಎಂದಿದ್ದರು.
66
ಚಿಕ್ಕವನು ಅಥವಾ ದೊಡ್ಡವನು ಇಲ್ಲ
ನೀವು ಪ್ರೀತಿಯಲ್ಲಿ ಬಿದ್ದರೆ, ನೀವು ಪ್ರೀತಿಯಲ್ಲಿ ಬೀಳುತ್ತೀರಿ ಅಷ್ಟೇ. ಅವನು ಚಿಕ್ಕವನು ಅಥವಾ ದೊಡ್ಡವನು ಎಂಬುದು ಮುಖ್ಯವಲ್ಲ, ನನ್ನನ್ನು ಅರ್ಥಮಾಡಿಕೊಳ್ಳುವ ಸಂಗಾತಿಯನ್ನು ನಾನು ಕಂಡುಕೊಂಡಿದ್ದೇನೆ. ಅವನು ಚಿಕ್ಕವನು, ಆದರೆ ಅದು ನನ್ನನ್ನೂ ಯುವಕನನ್ನಾಗಿ ಮಾಡುತ್ತದೆ. ನಾನು ಪ್ರಪಂಚದ ಮೇಲಿರುವಂತೆ ಭಾವಿಸುತ್ತೇನೆ. ಅವನ ಜೊತೆ ಸಕತ್ ಎಂಜಾಯ್ (Enjoy) ಮಾಡುತ್ತಿದ್ದೇನೆ. ಮದುವೆ, ಗಿದುವೆಯೆಲ್ಲಾ ಸದ್ಯ ಇಲ್ಲ. ಬಹು ಆನಂದವನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಅವುಗಳ ಬಗ್ಗೆ ಯೋಚಿಸುವುದಿಲ್ಲ. ಮುಂದೆ ಬೇಕಿದ್ದರೆ ನೋಡೋಣ. ಆಗ ನಿಮಗೂ ವಿಷಯ ತಿಳಿಸುತ್ತೇವೆ ಎಂದವರು ಈಗ ಮತ್ತೊಬ್ಬನ ಹಿಂದೆ ಹೋಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.