18 year old husband 36 year old wife: ಇವರಿಬ್ಬರ 18 ವರ್ಷಗಳ ವಯಸ್ಸಿನ ಅಂತರದಿಂದಾಗಿ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಇವರನ್ನು ತಾಯಿ-ಮಗನ ಸಂಬಂಧಕ್ಕೆ ಹೋಲಿಸಿ ಟೀಕಿಸಿದ್ದಾರೆ.
18 ವರ್ಷದ ಗಂಡ ಮತ್ತು 36 ವರ್ಷದ ಹೆಂಡತಿಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಜೋಡಿ ತಮ್ಮ ಜೀವನದಲ್ಲಿ ಸಾಧಿಸಿದ ವಿಶೇಷ ಮೈಲಿಗಲ್ಲನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನೆಟ್ಟಿಗರು ಇವರಿಬ್ಬರ ವಯಸ್ಸಿನ ಅಂತರ ನೋಡಿ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಪೋಸ್ಟ್‌ಗೆ ಅತ್ಯಧಿಕವಾಗಿ ನೆಗೆಟಿವ್ ಕಮೆಂಟ್‌ಗಳು ಬಂದಿವೆ.
25
ಪತ್ನಿಯ ಆಸೆ
ಲೇಕ್ ಹೆಸರಿನ ಹುಡುಗ ವಿಡಿಯೋ ಮಾಡುತ್ತಾ, ನನಗೆ 18 ವರ್ಷ, ನನ್ನ ಹೆಂಡತಿ ಜ್ಯಾಕ್‌ಗೆ 36 ವರ್ಷ. ಇದೀಗ ನಾವಿಬ್ಬರು ಜೊತೆಯಾಗಿ ಮನೆಯೊಂದನ್ನು ಖರೀದಿಸಿದ್ದೇವೆ. ಇದು ನಮ್ಮ ಮೊದಲ ಮನೆ. ಜೊತೆಯಾಗಿ ಮನೆ ಖರೀದಿಸೋದು ಪತ್ನಿಯ ಆಸೆಯಾಗಿತ್ತು ಎಂದು ಲೇಕ್ ಹೇಳಿಕೊಂಡಿದ್ದಾರೆ. ಇದೀಗ ಲೇಕ್-ಜ್ಯಾಕ್ ದಂಪತಿಯ ವಿಡಿಯೋ ವೈರಲ್ ಆಗುತ್ತಿದೆ.
35
ನೆಗೆಟಿವ್ ಕಮೆಂಟ್
ಸಾಮಾನ್ಯವಾಗಿ ಮನೆ ಖರೀದಿಯ ಪೋಸ್ಟ್‌ಗಳಿಗೆ ನೆಟ್ಟಿಗರು ಶುಭಾಶಯ ತಿಳಿಸುತ್ತಾರೆ. ಆದ್ರೆ ಲೇಕ್-ಜ್ಯಾಕ್ ಪೋಸ್ಟ್ ನೆಗೆಟಿವ್ ಕಮೆಂಟ್‌ಗಳಿಂದ ತುಂಬಿದೆ. ಇದಕ್ಕೆ ಇವರಿಬ್ಬರ ವಯಸ್ಸಿನ ಅಂತರವಾಗಿದೆ. ಜ್ಯಾಕ್ ಹಣ ಬಳಸಿಕೊಂಡು ಕಿರಿಯ ಸಂಗಾತಿಯನ್ನು ಆಯ್ಕೆ ಮಾಡಿಕೊಂಡ್ರೆ, ಲೇಕ್ ಐಷಾರಾಮಿ ಜೀವನಕ್ಕಾಗಿ ಜ್ಯಾಕ್ ಮಹಿಳೆಯನ್ನು ಆಯ್ಕೆ ಮಾಡಿಕೊಂಡಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.
ಲೇಕ್ ಮತ್ತು ಜ್ಯಾಕ್ ಫೋಟೋಗಳನ್ನು ನೋಡಿರುವ ನೆಟ್ಟಿಗರು, ನಿಮ್ಮಿಬ್ಬರದ್ದು ತಾಯಿ ಮತ್ತು ಮಗನ ಸಂಬಂಧ. ಇದೀಗ ಇಬ್ಬರ ನಡುವಿನ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇವರಿಬ್ಬರ ವಯಸ್ಸಿನ ಅಂತರ 18 ವರ್ಷ ಆಗಿದೆ.
ಮಹಿಳೆ ಆರ್ಥಿಕವಾಗಿ ಸದೃಢಳಾಗಿದ್ದು, ಹುಡುಗನಿಗೆ ಹಣದಾಸೆ ತೋರಿಸಿ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಮುಂದೆ ಹುಡುಗ ಪಶ್ಚಾತ್ತಾಪ ಪಡುತ್ತಾನೆ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಕೆಲವರು ಜೋಡಿಯನ್ನು ಬೆಂಬಲಿಸಿದ್ದು, ಪ್ರೀತಿಗೆ ವಯಸ್ಸಿಲ್ಲ ಎಂದಿದ್ದಾರೆ. ಇಂದು ಟೀನೇಜರ್ಸ್ ಐಷಾರಾಮಿ ಜೀವನಕ್ಕಾಗಿ ತಮಗಿಂತ ದುಪ್ಪಟ್ಟು ವಯಸ್ಸಿನವರೊಂದಿಗೆ ಡೇಟ್ ಮಾಡುತ್ತಿರೋದು ಟ್ರೆಂಡ್ ಆಗಿದೆ.