ಕೋಟ್ಯಾಧೀಶೆ ಆಗಿದ್ದರೂ ಐಷಾರಾಮಿ ಜೀವನಕ್ಕೆ ಗುಡ್‌ಬೈ; ಸನ್ಯಾಸತ್ವ ಸ್ವೀಕರಿಸಿದ ಕನ್ನಡತಿ!

ಕೋಟ್ಯಾಧೀಶ್ವರರ ಮನೆಯಲ್ಲಿ ಬೆಳೆದ 26 ವರ್ಷದ ಯುವತಿ ನಿಖಿತಾ, ಐಷಾರಾಮಿ ಜೀವನವನ್ನು ತ್ಯಜಿಸಿ ಸನ್ಯಾಸತ್ವ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ. ವ್ಯಾಮೋಹದ ಜೀವನವನ್ನು ತೊರೆದು ಆಧ್ಯಾತ್ಮದ ಕಡೆಗೆ ಪಯಣ ಬೆಳೆಸಲು ಮುಂದಾಗಿದ್ದಾರೆ.

ಕೋಟ್ಯಾಧೀಶ್ವರರ ಮನೆಯಲ್ಲಿ ಬಾಯಿಯಲ್ಲಿ ಬಂಗಾರದ ಚಮಟ ಇಟ್ಟುಕೊಂಡು ಹುಟ್ಟಿ, ಬೆಳೆದ ಯುವತಿಗೆ ಈವರೆಗೆ ಕಷ್ಟವೇ ಗೊತ್ತಿಲ್ಲ. ಇದೀಗ ಕೋಟ್ಯಾಧೀಶ್ವರ ಯುವತಿ ಜೀವನದ ಮೇಲಿನ ವ್ಯಾಮೋಹವನ್ನು ತ್ಯಜಿಸಿ 26ನೇ ವಯಸ್ಸಿಗೆ ಸನ್ಯಾಸತ್ವ ದೀಕ್ಷೆ ಸ್ವೀಕರಿಸಲು ಮುಂದಾಗಿದ್ದಾಳೆ.

ಉತ್ತರ ಕರ್ನಾಟಕದ ಕೇವಲ 26 ವರ್ಷದ ಕೋಟ್ಯಾಧೀಶನ ಪುತ್ರಿಯೊಬ್ಬಳು ಐಷಾರಾಮಿ ಜೀವನವನ್ನು ತ್ಯಜಿಸುತ್ತಿದ್ದಾರೆ. ವ್ಯಾಮೋಹದ ಜೀವನ ಬಿಟ್ಟು ಸನ್ಯಾಸತ್ವ ಜೀವನದ ಕಡೆಗೆ ಪಯಣ ಬೆಳೆಸುತ್ತಿದ್ದಾರೆ. ಜೀವನ ಇನ್ನೂ ಆರಂಭವೇ ಆಗಿಲ್ಲ ಎನ್ನುವಾಗಲೇ ಐಹಿಕ ಜೀವನದ ವ್ಯಾಮೋಹ ತೊರೆಯಲು ಮುಂದಾಗಿದ್ದಾರೆ. ಈ ಮೂಲಕ ತಾನು ಕೋಟ್ಯಾಧೀಶ್ವರಿಯಾಗಿ ಈವರೆಗೆ ನಡೆಸಿದ ಆಡಂಬರ ಜೀವನಕ್ಕೆ ಗುಡ್ ಬೈ ಹೇಳುತ್ತಿದ್ದಾರೆ.

ಕಲ್ಯಾಣ ಕರ್ನಾಟಕದ ಯಾದಗಿರಿ ನಗರದ ಜೈನ್ ಬಡಾವಣೆಯ ನಿವಾಸಿ ನಿಖಿತಾ (Nikhita Gandhi) ಸನ್ಯಾಸತ್ವ ಸ್ವೀಕರಿಸಲು ಮುಂದಾದ ಯುವತಿ ಆಗಿದ್ದಾಳೆ. ಈ ನಿಖಿತಾ ಗಾಂಧಿ ಅವರು ಜೈನ್ ಬಡಾವಣೆಯ ನರೇಂದ್ರ ಗಾಂಧಿ ಹಾಗೂ ಸಂಗೀತಾ ಗಾಂಧಿ ಪುತ್ರಿ ಆಗಿದ್ದಾರೆ. ಮೂರ್ನಾಲ್ಕು ತಲೆಮಾರುಗಳಿಂದ ಉದ್ಯಮ ನಡೆಸುತ್ತಾ ಕೋಟ್ಯಾಧಿಪತಿಯಾಗಿರುವ ನರೇಂದ್ರ ಗಾಂಧಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನಿದ್ದಾನೆ. ಆದರೆ, ಹಿರಿಯ ಮಗಳು ನಿಖಿತಾ ಕಳೆದ 7 ವರ್ಷದಿಂದ ಸನ್ಯಾಸಿ ಆಗಬೇಕೆಂದು ಬಯಸಿದ್ದಳು.

ನಿಖಿತಾ ಮದುವೆ ವಯಸ್ಸಿಗೆ ಬಂದಿದ್ದು, ಯಾವುದೇ ಗಂಡು ತೋರಿಸಿದರೂ ಮದುವೆಗೆ ವಿರೋಧ ಮಾಡುತ್ತಿದ್ದರು. ಇದೀಗ ಕೊನೆಗೂ ಜೀವನದ ಐಹಿಕ ಆಸೆಗಳನ್ನು ಬಿಟ್ಟು ತಾನು ಸನ್ಯಾಸಿ ಆಗಬೇಕೆಮಬ ಮಹದಾಸೆಯನ್ನು ಪೂರೈಸಿಕೊಂಡಿದ್ದಾರೆ.


ಸನ್ಯಾಸತ್ವದ ಬಳಿಕ ಅತಿ ಕಠಿಣ ಮಾರ್ಗಗಳು:
ಜೈನ ಧರ್ಮದ ಪ್ರಕಾರ ಸನ್ಯಾಸತ್ವ ಸ್ವೀಕರಿಸಿದ ಬಳಿಕ ಎಲ್ಲರೂ ಕಠಿಣಾತೀ ಕಠಿಣ ದಾರಿಯನ್ನ ಹಿಡಿಯಬೇಕು.
ಪಾದರಕ್ಷೆ ಹಾಕುವಂತಿಲ್ಲ.
ಸಂಚಾರಕರಕೆ ವಾಹನ ಬಳಸುವಂತಿಲ್ಲ.
ಒಂದೇ ಜಾಗದಲ್ಲಿ ಎರಡಕ್ಕೂ ಅಧಿಕ ದಿನ ತಂಗುವಂತಿಲ್ಲ.
ಬಿಳಿ ಬಣ್ಣದ ಸಾದ ಉಡುಪು ತೊಟ್ಟು ನಿತ್ಯ ಕಾಲ್ನಡಿಗೆಯಲ್ಲೇ ಸಂಚಾರ ಮಾಡುತ್ತಲೇ ಜೀವನ ಸಾಗಿಸಬೇಕು.
ಸನ್ಯಾಸತ್ವ ಸ್ವೀಕರಿಸಿದ ಬಳಿಕ ತಲೆಯ ಕೂದನ್ನು ಯಾವುದೇ ಬ್ಲೇಡ್ ಬಳಸಿ ಬೋಳಿಸದೇ, ಕೈಗಳಿಂದ ಕೀಳುವ ಮೂಲಕ ತಲೆ ಬೋಳು ಮಾಡಲಾಗುತ್ತದೆ.

ಸನ್ಯಾಸತ್ವದ ಹಾದಿ ಅತ್ಯಂತ ಕಠಿಣವಾಗಿದ್ದರೂ ನಿಖಿತಾ ಕೋಟ್ಯಾಧೀಶ್ವರ ಮನೆತನದ ಐಷಾರಾಮಿ ಜೀವನ ತೊರೆಯಲು ಮುಂದಾಗಿದ್ದಾರೆ. ಇನ್ನು ನಿಖಿತಾ ಸನ್ಯಾಸಿ ಆಗುತ್ತಿರುವುದಕ್ಕೆ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗಿದೆ. ತಾನು ಇನ್ನುಮುಂದೆ ಯಾವುದೇ ವಸ್ತುಗಳನ್ನ ಬಳಸಲ್ಲ ಎಂಬ ಕಾರಣಕ್ಕೆ ಹೊಸ ಬಟ್ಟೆ ಸೇರಿದಂತೆ ನಾನಾ ವಸ್ತುಗಳನ್ನ ಸಾವಿರಾರು ಜನರಿಗೆ ದಾನ ಮಾಡಿದ್ದಾರೆ. ಸನ್ಯಾಸತ್ವ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ನಿಖಿತಾ ಅವರನ್ನು ಜೈನ್ ಸಮುದಾಯದ ಜನರು ಸಾಕ್ಷಾತ್ ದೇವರಂತೆ ಕಾಣುತ್ತಿದ್ದಾರೆ.

Latest Videos

click me!