ಜಾತಕ ಕೂಡಿ ಬಂದರೆ ಮಾತ್ರ ವೈವಾಹಿಕ ಸಂಬಂಧ ಗಟ್ಟಿಯಾಗಿರುತ್ತಾ?

First Published | Sep 2, 2021, 6:03 PM IST

ಹಿಂದೂ ಪದ್ಧತಿಗಳ ಪ್ರಕಾರ ಜಾತಕ ಹೊಂದಾಣಿಕೆ ಮದುವೆಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಏಕೆಂದರೆ ವಧು-ವರರ ಜಾತಕವನ್ನು ವಿಶ್ಲೇಷಿಸುವ ಮೂಲಕ ಮಾತ್ರ ಜನರು ತಮ್ಮ ಜೋಡಿ ಸರಿ ಇರುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿಯುತ್ತಾರೆ. ಇಬ್ಬರ ಜಾತಕಗಳನ್ನು ಸಂಯೋಜಿಸಿ ಹುಡುಗ ಮತ್ತು ಹುಡುಗಿಯ ಕುಟುಂಬವು ಸಮ್ಮತಿಸುವವರೆಗೂ ವಿವಾಹ ಸಂಬಂಧವನ್ನು ನಿರ್ಧರಿಸದಿರಲು ಇದು ಕಾರಣವಾಗಿದೆ.

ಮದುವೆಗೂ ಮೊದಲು ಜಾತಕ ನೋಡುತ್ತಾರೆ. ಆದಾಗ್ಯೂ, ಈ ಸಮಯದಲ್ಲಿ ಗಮನಿಸಬೇಕಾದ ಆಸಕ್ತಿದಾಯಕ ಸಂಗತಿಯೆಂದರೆ, ಕುಟುಂಬ ಸದಸ್ಯರು ತಮ್ಮ ಮನಸ್ಸನ್ನು ಶಾಂತಗೊಳಿಸಲು ಮಾತ್ರ ಭವಿಷ್ಯದ ವಧು ಮತ್ತು ವರನ ಜಾತಕವನ್ನು ಹೊಂದಿಸುತ್ತಾರೆಯೇ ಅಥವಾ ಸಂತೋಷದ ಮತ್ತು ಯಶಸ್ವಿ ವೈವಾಹಿಕ ಜೀವನಕ್ಕಾಗಿ ಹಾಗೆ ಮಾಡುವುದು ನಿಜವಾಗಿಯೂ ಮುಖ್ಯವೇ ಎಂಬುವುದು.  

ಜನರು ಜಾತಕಗಳನ್ನು ಏಕೆ ತೋರಿಸುತ್ತಾರೆ?
ವೈವಾಹಿಕ ಸಂಬಂಧವನ್ನು ನಿರ್ಧರಿಸುವಾಗ, ಮದುವೆಯಾಗಲಿರುವ ಹುಡುಗ-ಹುಡುಗಿ ಸಂಬಂಧದಲ್ಲಿ ಯಾವುದೇ ರೀತಿಯ 'ದೋಷ' ಅಥವಾ ಗ್ರಹ ದೋಷಗಳು, ಇತರ ಸಮಸ್ಯೆ ಇವೆಯೇ ಎಂದು ತಿಳಿಯಲು ಜಾತಕವನ್ನು ಹೊಂದಿಸಲಾಗುತ್ತದೆ. ಸಂತೋಷದ ಜೀವನಕ್ಕಾಗಿ 36 ಗುಣಗಳಲ್ಲಿ ಕನಿಷ್ಠ 18 ಗುಣಗಳು ಪರಸ್ಪರ ಹೊಂದಾಣಿಕೆ ಆಗುವುದು ಬಹಳ ಮುಖ್ಯ.

Latest Videos


ಆದರೆ, ಹುಡುಗ-ಹುಡುಗಿ ಜಾತಕವನ್ನು ಹೊಂದಿಸಲು ಗುಣಗಳು ಪರಸ್ಪರ ಹೊಂದಾಣಿಕೆ ಆಗುವುದು ಮುಖ್ಯ ಎಂದು ಕೆಲವರು ನಂಬುತ್ತಾರೆ, ಇದರಿಂದ ದಂಪತಿ ತಮ್ಮ ವೈವಾಹಿಕ ಸಂಬಂಧದಲ್ಲಿ ಬರಲಿರುವ ಸವಾಲುಗಳ ಬಗ್ಗೆ ತಿಳಿದು ಕೊಳ್ಳಬಹುದು. ಇಬ್ಬರ ಜಾತಕ ಕೂಡಿ ಬಾರದೆ ಇದ್ದರೆ ಇಬ್ಬರ ಮದುವೆ ಮಾಡಿಸುವ ಗೋಜಿಗೇ ಹೋಗುವುದಿಲ್ಲ. ಹಿಂದಿನ ಸಂಪ್ರದಾಯವನ್ನು ನಂಬಿಕೊಂಡು ಬಂದವರು ಮದುವೆಗೆ ಗಂಡು -ಹೆಣ್ಣಿನ ಒಪ್ಪಿಗೆಗೂ ಮುನ್ನ ಜಾತಕ ಕೂಡಿ ಬರುವುದು ಮುಖ್ಯ ಎಂದು ನಂಬುತ್ತಾರೆ.

ಸಂತೋಷದ ಸಂಬಂಧಕ್ಕಾಗಿ ಜಾತಕವನ್ನು ಸೇರಿಸಬೇಕು
1968 ರಿಂದ 2001 ರವರೆಗೆ 65,000 ಕ್ಕೂ ಹೆಚ್ಚು ವಿವಾಹಿತ ದಂಪತಿ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಗಂಡ ಮತ್ತು ಹೆಂಡತಿ ತಮ್ಮ ಮದುವೆಯ ದೋಷಗಳನ್ನು ಹೇಗೆ ಸರಿಪಡಿಸಬೇಕು ಎಂಬುದನ್ನು ತೋರಿಸುವ ಅಥವಾ ವೈವಾಹಿಕ ಜೀವನವನ್ನು ಸುಧಾರಿಸಲು ಯಾವುದೇ ಜ್ಯೋತಿಷ್ಯ ಸೂಚನೆಗಳು ಇಲ್ಲ ಎಂದು ತಿಳಿಸಿವೆ.

ಜ್ಯೋತಿಷ್ಯವನ್ನು ಪೂರ್ತಿಯಾಗಿ ನಂಬದೇ ಇರುವ ಮದುವೆಗಳು. ಜ್ಯೋತಿಷ್ಯದ ಜ್ಞಾನ ಮತ್ತು ನಂಬಿಕೆಯನ್ನು ತಮ್ಮ ವೈವಾಹಿಕ ಜೀವನದಲ್ಲಿ ಅನ್ವಯಿಸಲು ಪ್ರಯತ್ನಿಸುವ ದಂಪತಿಗಿಂತ ಹೆಚ್ಚು ಸಂತೋಷವಾಗಿರುತ್ತಾರೆ ಎಂದು ತಿಳಿದು ಬಂದಿದೆ.  ವೈವಾಹಿಕ ಮೈತ್ರಿಯೊಂದಿಗೆ ಮುಂದುವರಿಯುವ ಮೊದಲು ಜ್ಯೋತಿಷಿ ಅಂಶವನ್ನು ನಿರ್ಲಕ್ಷಿಸಬೇಕು ಎಂದು ಹೇಳುತ್ತಿಲ್ಲ, ಆದರೆ ಅವುಗಳನ್ನು ನಂಬುವಂತೆ ಮತ್ತು ದಂಪತಿಗೆ ಅರಿವು ಮೂಡಿಸಲು ಸಲಹೆ ಮಾಡುವುದು ಸಹ ಸರಿಯಲ್ಲ.

ಸಂಬಂಧವನ್ನು ಲಘುವಾಗಿ ತೆಗೆದುಕೊಳ್ಳಬಾರದು
ವೈವಾಹಿಕ ಮೈತ್ರಿಯನ್ನು ಉತ್ತಮವಾಗಿ ಪೂರ್ಣಗೊಳಿಸಲು ಜಾತಕ ಮತ್ತು ನಕ್ಷತ್ರಗಳ ಅಧ್ಯಯನ ಅತ್ಯಗತ್ಯ. ಆದರೆ ವೈವಾಹಿಕ ಜೀವನದಲ್ಲಿ ಇರುವ ತೊಂದರೆಯನ್ನು ಜ್ಯೋತಿಷ್ಯ ತತ್ವಗಳ ಗೊಂದಲದ ಸಂಕೇತವೆಂದು ಪರಿಗಣಿಸಿದರೂ ಅದು ತಪ್ಪು. ಏಕೆಂದರೆ ಸಂಬಂಧದಲ್ಲಿ ಕಲಹ ಸಾಮಾನ್ಯ. ಆದರೆ ಅದನ್ನು ಸರಿ ಮಾಡುವ ಪ್ರಯತ್ನ ನಡೆದರೆ ಮಾತ್ರ ವೈವಾಹಿಕ ಜೀವನ ಸರಿಯಾಗಿರಲು ಸಾಧ್ಯ. ಅದನ್ನು ಕುಂಡಲಿ ಹೊಂದಿಕೊಳ್ಳದೇ ಇರುವುದು ಎಂದು ಹೇಳಲು ಸಾಧ್ಯವಿಲ್ಲ. 

ಸಂಗಾತಿಗೆ ನಿಮ್ಮ ಅಗತ್ಯವಿದ್ದಾಗ ಮತ್ತು ನೀವು ಅವರೊಂದಿಗೆ ಇಲ್ಲದಿದ್ದಾಗ, ಕಷ್ಟಗಳಿಗೆ ಸ್ಪಂದಿಸದೇ ಇದ್ದಾಗ ಸಂಬಂಧ ಹುಳಿಯಾಗುತ್ತದೆ. ಸುಖ ಜೀವನಕ್ಕಾಗಿ ಸಂಗಾತಿಯ ಅಗತ್ಯಗಳನ್ನು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಹೆಚ್ಚು ಮುಖ್ಯ. ಇದರಿಂದ ಮಾತ್ರ ದಾಂಪತ್ಯ ಜೀವನ ಸುಖಮಯವಾಗಿರಲು ಸಾಧ್ಯ. ಜಾತಕ ಕೂಡಿ ಬರೋದರಿಂದ ಅಲ್ಲ. 
 

ತೆಗೆದುಕೊಳ್ಳಬೇಕಾದ ಅಗತ್ಯ ನಿರ್ಧಾರಗಳು
ನಿಜವಾಗಿಯೂ ವೈವಾಹಿಕ ಜೀವನವನ್ನು ಸುಧಾರಿಸಲು ಬಯಸಿದರೆ,  ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸಂಗಾತಿ ಜೊತೆ ಕೂಡಿ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದರೆ,  ಸಂಬಂಧವು ಎಂದಿಗೂ ಹದಗೆಡುವುದಿಲ್ಲ. ಆದರೂ, ವಿವಾಹವು ಏರಿಳಿತವಾಗುವುದಿಲ್ಲ ಎಂದು ನಾವು ಹೇಳುತ್ತಿಲ್ಲ, ಆದರೆ ನಿಮ್ಮ ನಡುವಿನ ವಿಷಯಗಳನ್ನು ಪರಸ್ಪರರ ಸಲಹೆಯೊಂದಿಗೆ ಸರಿಪಡಿಸಲು  ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

click me!