ಲೈಂಗಿಕ ಬಯಕೆ (Sexual desire) ಅನ್ನೋದು ನೈಸರ್ಗಿಕ ಪ್ರಕ್ರಿಯೆಯಾಗಿದೆ, ಆದರೆ ವಯಸ್ಸಿನೊಂದಿಗೆ ಅದು ಬದಲಾಗುವುದು ಸಾಮಾನ್ಯ. ವಯಸ್ಸಾದಂತೆ ಲೈಂಗಿಕ ಬಯಕೆ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ ಎಂದು ಅನೇಕ ಜನ ಭಾವಿಸುತ್ತಾರೆ, ಆದರೆ ಇದು ನಿಜವಲ್ಲ. ಕೆಲವು ಸಂದರ್ಭಗಳಲ್ಲಿ, ಜನರು ವೃದ್ಧಾಪ್ಯದಲ್ಲಿಯೂ ಪ್ರಚೋದನೆಯನ್ನು ಅನುಭವಿಸುತ್ತಾರೆ, ಇದು ದೀರ್ಘಕಾಲದವರೆಗೆ ಇರುತ್ತದೆ. ಲೈಂಗಿಕ ಬಯಕೆಯ ಮೇಲೆ ವಯಸ್ಸು ಯಾವ ಪರಿಣಾಮ ಬೀರುತ್ತದೆ ಮತ್ತು ಅದನ್ನು ಹೇಗೆ ಉತ್ತಮವಾಗಿ ನಿರ್ವಹಿಸಬಹುದು ಎಂಬುದನ್ನು ತಜ್ಞರ ಅಭಿಪ್ರಾಯದಿಂದ ಅರ್ಥಮಾಡಿಕೊಳ್ಳೋಣ.
ಲೈಂಗಿಕ ಬಯಕೆ ಮತ್ತು ವಯಸ್ಸಿನ ನಡುವಿನ ಸಂಬಂಧ
ಲೈಂಗಿಕ ಬಯಕೆಯ ಮೇಲೆ ವಯಸ್ಸಿನ (age) ಪರಿಣಾಮವು ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಂಶಗಳನ್ನು ಅವಲಂಬಿಸಿರುತ್ತೆ. ಇದರಲ್ಲಿ ಮುಖ್ಯ ಪಾತ್ರವೆಂದರೆ ಹಾರ್ಮೋನುಗಳ ಬದಲಾವಣೆಗಳು, ಆರೋಗ್ಯ ಸ್ಥಿತಿ ಮತ್ತು ಮನಸ್ಥಿತಿ. ಮೊದಲಿಗೆ ಯಾವ ವಯಸ್ಸಿನಲ್ಲಿ ಲೈಂಗಿಕ ಆಸಕ್ತಿ ಯಾವ ರೀತಿ ಇರುತ್ತೆ ಅನ್ನೋದನ್ನು ನೋಡೋಣ.
ಪ್ರೌಢಾವಸ್ಥೆ (20-30 ವರ್ಷಗಳು):
ಈ ವಯಸ್ಸಿನಲ್ಲಿ ಲೈಂಗಿಕ ಪ್ರಚೋದನೆ ಅತ್ಯಧಿಕವಾಗಿರುತ್ತದೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ (testosterone level) ಮತ್ತು ಮಹಿಳೆಯರಲ್ಲಿ ಈಸ್ಟ್ರೊಜೆನ್ ಮಟ್ಟವು ಉತ್ತುಂಗದಲ್ಲಿರುತ್ತೆ, ಇದು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ.
ಮಧ್ಯ ವಯಸ್ಸು (30-50 ವರ್ಷಗಳು):
ಈ ವಯಸ್ಸಿನಲ್ಲಿ, ಹೆಚ್ಚುತ್ತಿರುವ ದೈಹಿಕ ಮತ್ತು ಮಾನಸಿಕ ಜವಾಬ್ದಾರಿಗಳಿಂದಾಗಿ, ಲೈಂಗಿಕ ಬಯಕೆ ಕಡಿಮೆಯಾಗಬಹುದು. ಮಹಿಳೆಯರಲ್ಲಿ, ಋತುಬಂಧದ ಪ್ರಕ್ರಿಯೆಯು ಈ ಸಮಯದಲ್ಲಿ ಪ್ರಾರಂಭವಾಗುತ್ತದೆ, ಇದರಿಂದಾಗಿ ಈಸ್ಟ್ರೊಜೆನ್ ಮಟ್ಟವು (estrogen level) ಕುಸಿಯಲು ಪ್ರಾರಂಭಿಸುತ್ತದೆ.
లైంగిక జీవితాన్ని ఆస్వాదించడానికి వయసుతో ఏమాత్రం సంబంధం లేదు. వారిలో లైంగిక కోరికలు (Sexual desires) ఉన్నంత వరకు శృంగార జీవితాన్ని పూర్తిగా ఆస్వాదించవచ్చు. తరచూ శృంగారంలో పాల్గొంటే శరీరానికి ఎన్నో లాభాలు కలుగుతాయి. శృంగారం అనేది వ్యాయామం (Exercise) లాంటిది. తరచూ శృంగారంలో పాల్గొంటే శరీరంలో కేలరీలు ఖర్చవుతాయి. ఫలితంగా బరువు అదుపులో ఉంటుంది.
ಹಿರಿಯ ವಯಸ್ಸು (50 ವರ್ಷಗಳ ನಂತರ):
ವಯಸ್ಸಾದಂತೆ ದೇಹದಲ್ಲಿ ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ, ಇದು ಲೈಂಗಿಕ ಬಯಕೆಯನ್ನು ದುರ್ಬಲಗೊಳಿಸುತ್ತದೆ. ಆದರೆ, ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಕೆಲವರು ಈ ವಯಸ್ಸಿನಲ್ಲಿಯೂ ಸಕ್ರಿಯ ಲೈಂಗಿಕ ಜೀವನವನ್ನು (sex life) ನಡೆಸುತ್ತಾರೆ.
ನಿರಂತರ ಪ್ರಚೋದನೆಯ ಕಾರಣಗಳು
ಹಾರ್ಮೋನುಗಳ ಅಸಮತೋಲನ:
ಕೆಲವು ಜನರಲ್ಲಿ, ಹಾರ್ಮೋನುಗಳ ಅಸಮತೋಲನದಿಂದಾಗಿ (hormonal imbalance) ಲೈಂಗಿಕ ಪ್ರಚೋದನೆಯು ದೀರ್ಘಕಾಲದವರೆಗೆ ಮುಂದುವರಿಯಬಹುದು.
ಮಾನಸಿಕ ಸ್ಥಿತಿ:
ಒತ್ತಡ, ಆತಂಕ ಅಥವಾ ಖಿನ್ನತೆಯಂತಹ ಮಾನಸಿಕ ಪರಿಸ್ಥಿತಿಗಳು (mental status) ಸಹ ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರಬಹುದು.
ಆರೋಗ್ಯ ಸಮಸ್ಯೆಗಳು:
ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಬೊಜ್ಜಿನಂತಹ (obesity) ಸಮಸ್ಯೆಗಳು ಲೈಂಗಿಕ ಪ್ರಚೋದನೆಯ ಮೇಲೆ ಪರಿಣಾಮ ಬೀರಬಹುದು.
ಲೈಂಗಿಕ ಆರೋಗ್ಯ ಸಮಸ್ಯೆಗಳು:
ಪುರುಷರಲ್ಲಿ ಪ್ರಾಸ್ಟೇಟ್ ಕಾಯಿಲೆಗಳು ಮತ್ತು ಮಹಿಳೆಯರಲ್ಲಿ ಪೆಲ್ವಿಕ್ ಫ್ಲೋರ್ ಸಮಸ್ಯೆಗಳು ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರಬಹುದು.
ಲೈಂಗಿಕ ಬಯಕೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಹೇಗೆ?
ನಿಯಮಿತವಾಗಿ ವ್ಯಾಯಾಮ ಮಾಡಿ:
ನಿಯಮಿತ ವ್ಯಾಯಾಮವು ದೈಹಿಕ ಆರೋಗ್ಯವನ್ನು (physical health) ಸುಧಾರಿಸುತ್ತದೆ ಮತ್ತು ಲೈಂಗಿಕ ಬಯಕೆಯನ್ನು ಕಾಪಾಡಿಕೊಳ್ಳುತ್ತದೆ.
ಸಮತೋಲಿತ ಆಹಾರ ಸೇವಿಸಿ:
ಹಸಿರು ತರಕಾರಿಗಳು, ಬೀಜಗಳು ಮತ್ತು ಪ್ರೋಟೀನ್ ಭರಿತ ಆಹಾರಗಳು ಲೈಂಗಿಕ ಆರೋಗ್ಯವನ್ನು ಸುಧಾರಿಸುತ್ತವೆ. ಕೆಫೀನ್ ಮತ್ತು ಆಲ್ಕೋಹಾಲ್ ನಿಂದ ದೂರವಿರಿ.
ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ:
ಒತ್ತಡ ಮತ್ತು ಆತಂಕವನ್ನು ತಪ್ಪಿಸಲು ಧ್ಯಾನ ಮತ್ತು ಯೋಗ ಮಾಡಿ.
ವೈದ್ಯರನ್ನು ಸಂಪರ್ಕಿಸಿ:
ಲೈಂಗಿಕ ಬಯಕೆಯಲ್ಲಿ ಹಠಾತ್ ಬದಲಾವಣೆಯನ್ನು ನೀವು ಅನುಭವಿಸಿದರೆ, ವೈದ್ಯರನ್ನು ಸಂಪರ್ಕಿಸಿ. ಹಾರ್ಮೋನುಗಳ ಚಿಕಿತ್ಸೆಯೂ (hormonal treatment) ಸಹ ಸಹಾಯ ಮಾಡಬಹುದು.
ಸಂಗಾತಿಯೊಂದಿಗೆ ಮಾತನಾಡಿ :
ಲೈಂಗಿಕ ಬಯಕೆಗಳು ಮತ್ತು ಕಾಳಜಿಗಳನ್ನು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಇದು ಸಂಬಂಧವನ್ನು ಬಲಪಡಿಸುತ್ತದೆ ಮತ್ತು ತೃಪ್ತಿಯನ್ನು ಹೆಚ್ಚಿಸುತ್ತದೆ.
ವಯಸ್ಸಿನೊಂದಿಗೆ ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸುವುದು ಹೇಗೆ?
ಫೋರ್ ಪ್ಲೇಗೆ ಗಮನ ಕೊಡಿ: ವಯಸ್ಸಾದಂತೆ ದೇಹದ ಪ್ರತಿಕ್ರಿಯೆಗಳು ಬದಲಾಗಬಹುದು. ಆದ್ದರಿಂದ ಲೈಂಗಿಕ ಚಟುವಟಿಕೆಗೆ ಮೊದಲು ಫೋರ್ ಪ್ಲೇಗೆ (for play) ಆದ್ಯತೆ ನೀಡಿ.
ಹೊಸ ವಿಷಯಗಳನ್ನು ಪ್ರಯತ್ನಿಸಿ: ನಿಮ್ಮ ಲೈಂಗಿಕ ಜೀವನವನ್ನು ರೋಮಾಂಚನಗೊಳಿಸಲು ಹೊಸ ವಿಷಯಗಳನ್ನು ಪ್ರಯತ್ನಿಸಿ.
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ರಕ್ತದೊತ್ತಡ ಮತ್ತು ಬ್ಲಡ್ ಶುಗರ್ ಲೆವೆಲ್ (blood sugar level) ನಿಯಂತ್ರಣದಲ್ಲಿಡಿ.
ಆರೋಗ್ಯಕರ ಸಂಬಂಧಗಳು: ಸಂಬಂಧಗಳಲ್ಲಿ ಪಾರದರ್ಶಕತೆ ಮತ್ತು ತಿಳುವಳಿಕೆಯನ್ನು ಕಾಪಾಡಿಕೊಳ್ಳಿ.