ಮದುವೆಯಾದ ಬಳಿಕದ ಜೀವನದಲ್ಲಿ ಪ್ರೀತಿ (Love), ನಂಬಿಕೆ (Trust) ಜೊತೆಗೆ ಲೈಂಗಿಕ ಜೀವನವೂ ಉತ್ತಮವಾಗಿರಬೇಕು. ನಾವು ನಮ್ಮ ಆಹಾರದ (Food) ಬಗ್ಗೆ ಕಾಳಜಿ ವಹಿಸುವಂತೆ, ವೈವಾಹಿಕ ಜೀವನದಲ್ಲಿ ಲೈಂಗಿಕತೆ (Sexuality) ಕೂಡ ಬಹಳ ಮುಖ್ಯ. ಜೀವನದಲ್ಲಿ ಲೈಂಗಿಕತೆಯ ರೋಮಾಂಚನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಇಲ್ಲದಿದ್ದರೆ ನಿಮ್ಮ ಸಂಗಾತಿಯು ನಿಮ್ಮಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಈ ಕಾರಣದಿಂದಾಗಿ, ಇದು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದನ್ನು ತಡೆಗಟ್ಟಲು, ನೀವು ಲೈಂಗಿಕತೆಯ ಸರಿಯಾದ ವಿಧಾನಗಳನ್ನು ತಿಳಿದಿರಬೇಕು. ಅದಕ್ಕೆ ಹೊಸತನವನ್ನು ತರುವ ಅವಶ್ಯಕತೆಯಿದೆ. ಲೈಂಗಿಕ ಕ್ರಿಯೆಯಲ್ಲಿ ರೋಮಾಂಚನವನ್ನು ತರಲು ಕೆಲವು ಸಲಹೆಗಳನ್ನು ಇಲ್ಲಿ ಹೇಳುತ್ತಿದ್ದೇವೆ-
ಈ ರೀತಿ ಕಿಸ್(Kiss) ಮಾಡಿ
ನೀವು ಇದೇ ಮೊದಲ ಬಾರಿಗೆ ಕಿಸ್ ಮಾಡುತ್ತಿರುವಂತೆ ನಿಮ್ಮ ಸಂಗಾತಿಯನ್ನು ಚುಂಬಿಸಿ. ಅಲ್ಲದೆ, ಇದು ನಿಮ್ಮ ಅತ್ಯುತ್ತಮ ಚುಂಬನವಾಗಿರಬೇಕು ಅನ್ನೋದು ನೆನಪಿರಲಿ. ಆದಾಗ್ಯೂ, ನಿಮ್ಮ ಸಂಗಾತಿಯು ಸಹ ಈ ಕೆಲಸದಲ್ಲಿ ನಿಮ್ಮನ್ನು ಪೂರ್ಣ ಉತ್ಸಾಹದಿಂದ ಬೆಂಬಲಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ.
ಬೆಸ್ಟ್ ಕಿಸ್ ನಿಮ್ಮದಾಗಲು ಮೊದಲು ನೀವು ಮತ್ತು ನಿಮ್ಮ ಸಂಗಾತಿ(Partner) ಇಬ್ಬರೂ ಮಾನಸಿಕವಾಗಿ ಸಿದ್ಧವಾಗಬೇಕು, ಅದಕ್ಕಾಗಿ, ಅವರನ್ನು ಪ್ರೇರೇಪಿಸಿ. ನಂತರ ನೋಡಿ, ನೀವು ವಿಭಿನ್ನ ರೀತಿಯ ಸಂತೋಷವನ್ನು ಅನುಭವಿಸುವಿರಿ. ಇಬ್ಬರೂ ಪ್ರೀತಿಯ ಮತ್ತಲ್ಲಿ ಖಂಡಿತಾ ಕಳೆದು ಹೋಗುತ್ತೀರಿ.
ರೊಮ್ಯಾನ್ಸ್ ವಿತ್ ಮ್ಯೂಸಿಕ್(Romance with music)
ಹೊಸ ರೀತಿಯಲ್ಲಿ ಲೈಂಗಿಕ ಜೀವನ ಆನಂದಿಸಲು, ನೀವು ತುಂಬಾ ಸ್ಲೋ ಮ್ಯೂಸಿಕ್ ಪ್ಲೇ ಮಾಡಬೇಕು ಮತ್ತು ನಿಮ್ಮ ಸಂಗಾತಿಯನ್ನು ನೃತ್ಯಕ್ಕೆ ಆಹ್ವಾನಿಸಬೇಕು. ಆದರೆ ಸಂಗೀತವು ತುಂಬಾ ಜೋರಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ನೀವು ನೃತ್ಯದ ಮೂಲಕ ನಿಮ್ಮ ಸಂಗಾತಿಯನ್ನು ಸಂತೋಷಪಡಿಸಬಹುದು ಮತ್ತು ಫೋರ್ ಪ್ಲೇಯನ್ನು ಸಹ ಆನಂದಿಸಬಹುದು.
ಇದನ್ನೊಮ್ಮೆ ಮಾಡಿ
ಉನ್ಮಾದದ ಸೆಕ್ಸ್(Sex) ಮಾಡೋದರಿಂದ ನಿಮ್ಮೊಳಗಿನ ಲೈಂಗಿಕತೆಯ ಕಡೆಗೆ ಆಕ್ರಮಣಶೀಲತೆಯನ್ನು ತೋರಿಸುತ್ತದೆ. ನೀವು ಹೊರಜಗತ್ತಿನಲ್ಲಿ ತುಂಬಾ ಗಂಭೀರ ಮತ್ತು ಶಾಂತವಾಗಿದ್ದರೂ ಸಹ, ಮಲಗುವ ಕೋಣೆಯ ಒಳಗೆ ನೀವು ನಿಮ್ಮ ಸಂಗಾತಿಯ ಮೇಲೆ ಪ್ರಾಬಲ್ಯ ಸಾಧಿಸಬೇಕು. ನಿಮ್ಮ ಸಂಗಾತಿ ಊಹಿಸಿರದ ರೀತಿ ನಿಮ್ಮನ್ನು ನೀವು ತೊಡಗಿಸಿಕೊಳ್ಳೋದು ಮುಖ್ಯ. ಇದನ್ನು ಮಾಡೋದರಿಂದ ನಿಮ್ಮ ಲೈಂಗಿಕ ಜೀವನ ಚೆನ್ನಾಗಿರುತ್ತೆ.
ಫ್ಯಾಂಟಸಿ(Fantacy) ಬಳಸಿ
ನಿಮ್ಮ ಲೈಂಗಿಕ ಫ್ಯಾಂಟಸಿಯ ಬಗ್ಗೆ ಸಂಗಾತಿಯೊಂದಿಗೆ ಮಾತನಾಡಿ. ಅದರ ನಂತರ, ನಿಮ್ಮ ಮತ್ತು ನಿಮ್ಮ ಸಂಗಾತಿಯ ಲೈಂಗಿಕ ಫ್ಯಾಂಟಸಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಯು ಸ್ನಾನ ಮಾಡುವಾಗ ಅಥವಾ ಹೊಸ ಟೆಕ್ನಿಕ್ ಬಳಸಿ ಸೆಕ್ಸ್ ಮಾಡಲು ಇಷ್ಟಪಟ್ಟರೆ, ಅವರ ಆಸೆಗಳನ್ನು ಪೂರ್ಣಗೊಳಿಸಲು ತಯಾರಾಗಿರಿ.
ಆಟ -ತುಂಟಾಟ
ಈ ಆಟದಲ್ಲಿ, ನೀವು ನಿಮ್ಮ ಸಂಗಾತಿಯ ಕಣ್ಣುಮುಚ್ಚಿ ಅವರೊಂದಿಗೆ ಆಟಗಳನ್ನು ಆಡಬೇಕು ಮತ್ತು ನಿಮ್ಮ ಸಂಗಾತಿಗೆ ಐದು ಅಥವಾ ಹತ್ತು ನಿಮಿಷಗಳಲ್ಲಿ ನಿಮ್ಮನ್ನು ಹಿಡಿಯಲು ಸಾಧ್ಯವಾಗದಿದ್ದರೆ ರೊಮ್ಯಾನ್ಸ್ ಮಾಡೋ ಪನಿಶ್ ಮೆಂಟ್ ನೀಡಬಹುದು., ಆಗ ನೀವು ಬಯಸಿದಂತೆ ಅವರೊಂದಿಗೆ ರೊಮ್ಯಾಂಟಿಕ್ ಮೂಡ್ ನಲ್ಲಿ(Romantic mood) ಕಳೆದು ಹೋಗಬಹುದು ನೀವು ಅದನ್ನು ತುಂಬಾ ಇಷ್ಟಪಡುತ್ತೀರಿ. ಜೊತೆಗೆ ನೀವು ನಿಮ್ಮ ಸಂಗಾತಿಗೆ ಹೊಸ ಪ್ರಯೋಗಗಳನ್ನು ಮಾಡಲು ಮನವೊಲಿಸಬಹುದು.