ಸೋಶಿಯಲ್ ಮೀಡಿಯಾದಲ್ಲಿ (Social media) ನಾವಿಂದು ಎಷ್ಟೊಂದು ಶೇರ್ ಮಾಡ್ತಿದ್ದೇವೆ ಅಂದ್ರೆ, ಅದರಲ್ಲಿ ಸೀಕ್ರೆಟ್ ಆಗಿ ಇಡೋದು ಅಂದ್ರೆ ಅದೊಂದು ಹಳೆಯ ವಿಷ್ಯವಾಗಿದೆ. ಆದ್ರೆ ನೀವು ಅದೆಷ್ಟೇ ಸೋಶಿಯಲ್ ಆಗಿರಿ, ಬಿಂದಾಸ್ ಆಗಿರಿ, ಆದ್ರೆ ಕೆಲವು ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ತಜ್ಞರು ಹೇಳ್ತಾರೆ.
ಸ್ನೇಹವು ಸಾಮಾನ್ಯವಾಗಿ ನಂಬಿಕೆ ಮತ್ತು ಪರಸ್ಪರ ತಿಳುವಳಿಕೆಯ ಮೇಲೆ ನಿಂತಿದ್ದರೂ ಸಹ, ಆ ಸ್ನೇಹದ ಮಧ್ಯೆ ಬಾರ್ಡರ್ ಅನ್ನೋದು ಬೇಕೇ ಬೇಕು., ಅದನ್ನು ಉಲ್ಲಂಘಿಸಿದರೆ, ಸಂಬಂಧ ಹಳಸಿ ಹೋಗಬಹುದು ಅಥವಾ ನಿಮ್ಮ ಜೀವನದಲ್ಲಿ ಕೆಟ್ಟದ್ದು ಉಂಟಾಗಲೂ ಬಹುದು. ಅದಕ್ಕಾಗಿ ಕೆಲವೊಂದು ಸೀಕ್ರೆಟ್ (secrets)ಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳೋದು ಬೆಸ್ಟ್ ಎಂದು ಹೇಳುತ್ತಾರೆ ತಜ್ಞರು. ಅಂತಹ ವಿಷ್ಯಗಳು ಯಾವುವು ಅನ್ನೋದನ್ನು ನೋಡೋಣ.
ಹಣಕಾಸಿನ ವಿವರಗಳು
ಸ್ನೇಹಿತರೊಂದಿಗೆ ಜೀವನದ ಹಲವಾರು ಸೀಕ್ರೆಟ್ ಗಳನ್ನು ನೀವು ಹಂಚಿಕೊಳ್ಳುತ್ತೀರಿ, ಅದು ಒಳ್ಳೆಯದೇ ಆದರೆ, ಹಣಕಾಸಿನ ವಿಷಯಗಳು (financial details) ತುಂಬಾ ಸೂಕ್ಷ್ಮ ವಿಚಾರ. ಆದಾಯ, ಉಳಿತಾಯ ಅಥವಾ ಸಾಲಗಳ ಬಗ್ಗೆ ಸ್ನೇಹಿತರ ಬಳಿ ಹೇಳೋದರಿಂದ ಸಂಬಂಧ ಹಾಳಾಗುವ ಸಾಧ್ಯತೆ ಇದೆ. ಜೊತೆಗೆ ಅಸಮಧಾನದ ಹೊಗೆ ಎದ್ದೇಳಬಹುದು. ಈ ವಿಷಯ ಒಬ್ಬರಿಂದ ಇನ್ನೊಬ್ಬರಿಗೆ ಪ್ರಸಾರವಾಗುತ್ತ ಹೋದಂತೆ, ಇದು ಒಬ್ಬರ ಆರ್ಥಿಕ ಭದ್ರತೆಯನ್ನು ಅಪಾಯಕ್ಕೆ ತಳ್ಳಬಹುದು.
ದಾಂಪತ್ಯ ಜೀವನದ ಸಂಘರ್ಷಗಳು
ವೈವಾಹಿಕ ಜೀವನದಲ್ಲಿ ಅಥವಾ ಲವ್ ಲೈಫ್ ನಲ್ಲಿ ಏನಾದರು ತೊಂದರೆಯಾದಾಗ ಸ್ನೇಹಿತರಲ್ಲಿ ಸಾಂತ್ವನವನ್ನು ಹುಡುಕುವುದು ಸಾಮಾನ್ಯ. ಆದರೆ ನಿಮ್ಮ ಸಂಬಂಧದ ಕುರಿತ, ಪ್ರತಿಯೊಂದು ಸಂಕೀರ್ಣ ವಿವರಗಳನ್ನು (intimate conflicts) ಬಹಿರಂಗಪಡಿಸುವುದು ಡೇಂಜರ್. ಒಂದು ಸಣ್ಣ ವಿಷ್ಯದಿಂದಾಗಿ ಸ್ನೇಹಿತರಿಗೆ ನಿಮ್ಮ ಸಂಗಾತಿ ಮೇಲೆ ಕೆಟ್ಟ ಅಭಿಪ್ರಾಯವೂ ಮೂಡಬಹುದು, ಇದರಿಂದ ನಿಮ್ಮ ಸಂಬಂಧವೂ ಹಾಳಾಗಬಹುದು. ಹಾಗಾಗಿ ಇಂತಹ ವಿಷ್ಯಗಳನ್ನು ಹೇಳಬೇಡಿ.
ಕೌಟುಂಬಿಕ ಕಲಹಗಳು
ಕುಟುಂಬ ಕಲಹಗಳು (family conflicts) ಎಲ್ಲಾ ಮನೆಯಲ್ಲೂ ನಡೆಯುವ ಸಾಮಾನ್ಯ ವಿಷಯ. ಈ ವಿಷಯಗಳನ್ನು ನಿಮ್ಮ ಆಪ್ತ ಸ್ನೇಹಿತರ ಬಳಿಯೂ ಹೇಳಲು ಹೋಗಬಾರದು.ಕುಟುಂಬ ಕಲಹಗಳನ್ನು , ಕುಟುಂಬ ರಹಸ್ಯಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು ಎಂದರೆ, ಅದು ಕುಟುಂಬದ ಗೌಪ್ಯತೆಗೆ ಪೆಟ್ಟು ಬಿದ್ದಂತೆ.
ಕೆಲಸದ ಸ್ಥಳದ ಸಮಸ್ಯೆಗಳು
ಕಚೇರಿಯಲ್ಲಿ ಹಲವು ಸಮಸ್ಯೆಗಳು(workplace problem) ಉಂಟಾಗಬಹುದು, ಅದನ್ನು ಹೊರ ಹಾಕೋದರಿಂದ ನಿಮಗೆ ತಾತ್ಕಾಲಿಕ ಪರಿಹಾರ ಕೂಡ ಸಿಗಬಹುದು. ಅವರು ನಿಮ್ಮ ಬೆಸ್ಟ್ ಫ್ರೆಂಡೇ ಆಗಿರಬಹುದು, ಆದರೆ ಈ ವಿಷಯ ಮೂರನೆಯವರಿಗೆ ತಿಳಿದರೆ ಅದು ಗಾಸಿಪ್ ಗೆ ಕಾರಣವಾಗಬಹುದು ಅಥವಾ ವೃತ್ತಿಪರ ಸಂಬಂಧಗಳನ್ನು ಅಪಾಯಕ್ಕೆ ತಳ್ಳಬಹುದು. ಇದಲ್ಲದೆ, ಸೂಕ್ಷ್ಮ ಕೆಲಸ-ಸಂಬಂಧಿತ ಮಾಹಿತಿಯನ್ನು ಬಹಿರಂಗಪಡಿಸುವುದು ಕಚೇರಿ ನಿಯಮಕ್ಕೂ ವಿರುದ್ಧವಾಗಿದೆ.
ಪರ್ಸನಲ್ ಸಮಸ್ಯೆಗಳು
ನಿಮಗೆ ಕೆಲವು ವಿಷಯಗಳ ಬಗ್ಗೆ ಅಭದ್ರತೆ (personal insecurities) ಕಾಡುತ್ತಿದ್ದರೆ, ಅದನ್ನು ಸಹ ಸ್ನೇಹಿತರ ಮುಂದೆ ಹೇಳುವುದು ಸರಿಯಲ್ಲ, ನಿಮಗೆ ಖುಷಿ ನೀಡುವ ವಿಷ್ಯಗಳನ್ನು ಹಂಚಿಕೊಳ್ಳೋದು ಓಕೆ, ಆದರೆ ಅಭದ್ರತೆಯ ವಿಷಯಗಳನ್ನು ಹಂಚಿಕೊಂಡರೆ ಅದರಿಂದ ಮುಂದೆ ನೀವು ಸಮಸ್ಯೆಗೆ ಸಿಲುಕಬಹುದು. ಹಾಗಾಗಿ ನಿಮ್ಮ ಸ್ನೇಹಕ್ಕೂ ಒಂದು ಗಡಿ ಹಾಕೋದು ಉತ್ತಮ.