ನಿಖಿಲ್ ಕುಮಾರಸ್ವಾಮಿ, ಮಡದಿ ರೇವತಿಯ ಮಾದರಿ ಕಪಲ್ ಗೋಲ್ಸ್

First Published | Aug 17, 2020, 5:06 PM IST

ಲಾಕ್‌‍ಡೌನ್ ಶುರುವಾದ ನಂತರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಷ್ಯಲ್ ಮೀಡಿಯಾಗಳಲ್ಲಿ ಹೆಚ್ಚೇ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಅಭಿಮಾನಿಗಳು ಹಾಗೂ ಬೆಂಬಲಿಗರಿಗೆ ತಮ್ಮ ಜೀವನದ ಕುರಿತು ಅಪ್ಡೇಟ್ ಮಾಡುತ್ತಲೇ ಇದ್ದಾರೆ. ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗುವ ನಿಖಿಲ್ ಈ ಬಗ್ಗೆ ಆಗಾಗ್ಗೆ ಪೋಸ್ಟ್ ಮಾಡಿ ಜನರನ್ನು ಪ್ರೇರೇಪಿಸುತ್ತಿರುತ್ತಾರೆ. ಈ ವರ್ಷ ವಿವಾಹವಾದ ಬಳಿಕ ನಿಖಿಲ್ ಪತ್ನಿ ರೇವತಿಯೊಂದಿಗೆ ಕ್ವಾಲಿಟಿ ಟೈಂ ಕಳೆಯುತ್ತಿದ್ದಾರೆ. ಪತ್ನಿಯ ಜೊತೆಗೇ ವರ್ಕೌಟ್ ಮಾಡುವ ವಿಡಿಯೋವನ್ನು ಈ ಹಿಂದೆ ಹಂಚಿಕೊಂಡು ಕಪಲ್ ಗೋಲ್ ಸೆಟ್ ಮಾಡಿದ್ದರು. ಇದೀಗ ಮನಶ್ಶಾಂತಿಗಾಗಿ ಈ ಜೋಡಿ ಏನು ಮಾಡುತ್ತಾರೆಂಬ ಗುಟ್ಟು ರಟ್ಟಾಗಿದೆ. ಈ ಮುದ್ದು ಜೋಡಿಯ ಚೆಂದದ ಚಿತ್ರಗಳು ಇಲ್ಲಿವೆ ನೋಡಿ.

;

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿಯ ವಿವಾಹವಾಗಿ ನಾಲ್ಕು ತಿಂಗಳು ಕಳೆದವು. ಈ ಸಂದರ್ಭದಲ್ಲಿ ಲಾಕ್‍ಡೌನ್ ಇದ್ದ ಕಾರಣ ಈ ಜೋಡಿಗೆ ಜೊತೆ ಕಳೆಯಲು ಸಾಕಷ್ಟು ಸಮಯವೂ ಸಿಕ್ಕಿತು.
ಹೀಗೆ ಒಟ್ಟಾಗಿ ಸಮಯ ಕಳೆಯುತ್ತಿರುವ ನವ ಜೋಡಿ ಆ ಸಮಯವನ್ನು ಸುಂದರವಾಗಿ ಹಾಗೂ ಆರೋಗ್ಯಕರವಾಗಿಯೂ ಕಳೆಯುತ್ತಿದ್ದಾರೆ ಎಂಬುದು ಅವರ ಫೋಟೋಗಳನ್ನು ನೋಡಿದರೆ ತಿಳಿಯುತ್ತದೆ.
Tap to resize

ನಿಖಿಲ್- ರೇವತಿ ಜೋಡಿ ಹಲವಾರು ಕಪಲ್ ಗೋಲ್ ಸೆಟ್ ಮಾಡಿಕೊಡುತ್ತದೆ.
ಎರಡು ತಿಂಗಳ ಹಿಂದಷ್ಟೇ ಇವರಿಬ್ಬರೂ ಒಟ್ಟಿಗೇ ವರ್ಕೌಟ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಬಿಡದಿಯ ತೋಟದ ಮನೆಯ ಆವರಣದಲ್ಲಿ ಕಳೆದ ಸುಂದರ ಕ್ಷಣ ಎಂದು ನಿಖಿಲ್ ಈ ಪೋಟೋ ಶೇರ್ ಮಾಡಿದ್ದರು.
ಹೆಚ್ಚಾಗಿ ಎಲ್ಲಿಯೇ ಹೋಗಲಿ, ಒಂದೇ ಬಣ್ಣದ ಬಟ್ಟೆ ಧರಿಸುವುದನ್ನೂ ನಿಖಿಲ್- ರೇವತಿ ಅನುಸರಿಸುತ್ತಿದ್ದಾರೆ.
ಎರಡು ತಿಂಗಳ ಹಿಂದೆ ರೇವತಿಯ ಬರ್ತ್‌ಡೇಗೆ ಹುಟ್ಟುಹಬ್ಬದ ಶುಭಾಶಯಗಳು ಚಿನ್ನ ಎಂದು ನಿಖಿಲ್ ಪ್ರೀತಿಯ ಮಾತುಗಳಲ್ಲಿ ವಿಶ್ ಮಾಡಿದ್ದರು.
ಪತ್ನಿಯೊಂದಿಗಿನ ಫೋಟೋಗಳನ್ನು ಹಾಕಿದಾಗಲೆಲ್ಲ ಒಂದಿಷ್ಟು ಪ್ರೀತಿಯ ಸಾಲುಗಳನ್ನು ಹಂಚಿಕೊಳ್ಳುವುದನ್ನು ನಿಖಿಲ್ ಮರೆಯುವುದಿಲ್ಲ.
ವಾಕಿಂಗ್ ಸಂದರ್ಭದಲ್ಲಿ ಸಿಕ್ಕ ನಾಯಿಯನ್ನು ಮಾತನಾಡಿಸುತ್ತಿರುವ ಜೋಡಿ.
ಈಗ ಈ ಜೋಡಿ ಒಟ್ಟಾಗಿ ಕುಳಿತು ಧ್ಯಾನ ಮಾಡುತ್ತಿರುವ ಫೋಟೋವನ್ನು ನಿಖಿಲ್ ಹಂಚಿಕೊಂಡಿದ್ದಾರೆ. ಮನಃಶಾಂತಿಗೆ ಧ್ಯಾನವೇ ದಾರಿ ಎಂದು ಅವರು ಬರೆದುಕೊಂಡಿದ್ದಾರೆ.

Latest Videos

click me!