ಈ ಕಾರಣಗಳಿಗಾಗಿಯೇ ಮಹಿಳೆಯರು ಮಿಲನಕ್ರಿಯೆ ನಿರಾಕರಿಸುತ್ತಾರೆ

First Published Oct 29, 2020, 2:57 PM IST

ಮಿಲನಕ್ರಿಯೆ ಎಂಬುದು ದಾಂಪತ್ಯ ಜೀವನದ ಒಂದು ಸುಮಧುರ ಕ್ಷಣವಾಗಿದೆ. ಇದು ಸಂಗಾತಿಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಾಢವಾಗುವಂತೆ ಮಾಡುತ್ತದೆ. ಆದರೆ ಕೆಲವೊಮ್ಮೆ ಪತ್ನಿ ಮಿಲನಕ್ರಿಯೆ ಮಾಡಲು ನಿರಾಕರಿಸುತ್ತಾಳೆ. ಕೆಲವೊಮ್ಮೆ ಇಷ್ಟವಿಲ್ಲದೆ ಇರಬಹುದು, ಇನ್ನು ಕೆಲವು ಸಂದರ್ಭಗಳಲ್ಲಿ ಯಾವುದೋ ಮಾನಸಿಕ ಅಥವಾ ಶಾರೀರಿಕ ಸಮಸ್ಯೆಯಿಂದ ಅವರು ಮಿಲನಕ್ರಿಯೆಗೆ ಒಪ್ಪಿಗೆ ಸೂಚಿಸದೆ ಇರಬಹುದು. 

ಒಂದು ವೇಳೆ ನಿಮ್ಮ ಸಂಗಾತಿ ಮಿಲನ ಕ್ರಿಯೆಗೆ ಒಪ್ಪಿಗೆ ಸೂಚಿಸದೆ ಇದ್ದರೆ, ಅವರನ್ನು ನೀವು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ. ಯಾವುದೆಲ್ಲಾ ಕಾರಣಗಳಿಗೆ ಮಹಿಳೆಯರು ಸೆಕ್ಸ್ ಮಾಡಲು ನೋ ಎನ್ನುತ್ತಾರೆ ಅನ್ನೋದರ ಬಗ್ಗೆ ವಿವರಗಳು ಇಲ್ಲಿವೆ... ಇವುಗಳನ್ನು ಅರ್ಥ ಮಾಡಿಕೊಂಡರೆ ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ.
undefined
ಕೋಪದಲ್ಲಿದ್ದಾಗ: ಹೆಚ್ಚಿನ ಮಹಿಳೆಯರು ತಮ್ಮ ಸಂಗಾತಿಯೊಂದಿಗೆ ಮುನಿಸಿಕೊಂಡಿದ್ದಾಗ ಅವರಿಗೆ ತಮ್ಮನ್ನು ಮುಟ್ಟಲೂ ಬಿಡುವುದಿಲ್ಲ.ಇನ್ನೂ ಸೆಕ್ಸ್‌ಗೆ ಒಪ್ಪುತ್ತಾರಾ ಹೇಳಿ?ಈ ಸಂದರ್ಭದಲ್ಲಿ ಸೆಕ್ಸ್‌ಗೆ ಒಪ್ಪಿ ತಾವು ಪುರುಷರ ಮೇಲೆ ದಯೆ ತೋರುತ್ತಿದ್ದೇವೆ ಎಂದು ಮಹಿಳೆಯರಿಗೆ ಅನಿಸುತ್ತದೆ. ಹಾಗಾಗಿ ಅವರು ಪುರುಷರನ್ನು ದೂರ ತಳ್ಳುತ್ತಾರೆ.
undefined
ಅಹಂ:ಪುರುಷರಿಗೆ ಹೇಗೆ ಅಹಂ ಇರುತ್ತದೋ ಅದೇ ರೀತಿ ಮಹಿಳೆಯರಿಗೂ ಕೂಡಾ ಅಹಂ ಇರುತ್ತದೆ. ಅವರ ಅಹಂಗೆ ಧಕ್ಕೆಯುಂಟಾಗುತ್ತದೆ ಎಂದು ತಿಳಿದುಕೊಂಡಾಗ ಅವರು ಸೆಕ್ಸ್‌ಗೆ ನಿರಾಕರಿಸುತ್ತಾರೆ. ಪುರುಷರ ಆಡಳಿತದಿಂದ ತಾನು ಸ್ವತಂತ್ರಳು ಎನ್ನುವುದನ್ನು ತೋರಿಸುವ ರೀತಿ ಸೆಕ್ಸ್‌ಗೆ ನಿರಾಕರಿಸುವುದು.
undefined
ಆಸಕ್ತಿಯನ್ನು ಕಾಯ್ದುಕೊಳ್ಳುವುದು: ಪುರುಷರಿಗೆ ಮಹಿಳೆಯ ಮೇಲೆ ಹೇಗೆ ಆಸಕ್ತಿ ಇರುತ್ತದೆಯೋ ಹಾಗೆಯೇ ಮಹಿಳೆಯರಿಗೂ ಆಸಕ್ತಿ ಇರುತ್ತದೆ. ಆದಷ್ಟು ಬೇಗ ಆತನನನ್ನು ಬೆಡ್‌ಗೆ ಕರೆದರೆ ಕ್ರಮೇಣ ತನ್ನ ಮೇಲಿನ ಆಸಕ್ತಿ ಕಳೆದುಕೊಳ್ಳಬಹುದೆನ್ನುವ ಭಾವನೆ ಅವರಲ್ಲಿರುತ್ತದೆ.
undefined
ಕಮಿಟ್‌ಮೆಂಟ್: ಪ್ರತಿಯೊಂದೂ ಮಹಿಳೆಗೆ ಒಬ್ಬ ಪುರುಷನ ಜೊತೆ ದೈಹಿಕ ಸಂಪರ್ಕ ಬೆಳೆಸಬೇಕಾದರೆ ಬದ್ಧತೆ ಬಯಸುತ್ತಾಳೆ. ತಮ್ಮ ಮುಂದಿನ ಜೀವನದ ಬಗ್ಗೆ ಆಲೋಚನೆ ಮಾಡುತ್ತಾಳೆ. ಮುಂದಿನ ಜೀವನದ ಬಗ್ಗೆ ಯಾವುದೇ ಐಡಿಯಾ ಇಟ್ಟುಕೊಳ್ಳದೇ ಪುರುಷನ ಜೊತೆ ಸೆಕ್ಸ್‌ ಮಾಡಲು ಆಕೆ ಒಪ್ಪುವುದಿಲ್ಲ.
undefined
ಪಿರಿಯಡ್ಸ್:ಪಿರಿಯಡ್ಸ್ ಸಮಯದಲ್ಲಿ ಮತ್ತು ಅದಕ್ಕೂ ಮುನ್ನ ಅಥವಾ ನಂತರ ಮಹಿಳೆಯರಿಗೆ ಮೂಡ್ ಸ್ವಿಂಗ್ ಆಗುವುದು ಸಾಮಾನ್ಯ. ಆದುದರಿಂದ ಈ ಸಮಯದಲ್ಲಿ ಅವರಿಗೆ ಸೆಕ್ಸ್ ಬಗ್ಗೆ ಯಾವುದೇ ಆಸಕ್ತಿ ಇರುವುದಿಲ್ಲ. ಹಾಗಾಗಿ ಸೆಕ್ಸ್ ಗೆ ನೋ ಎನ್ನುತ್ತಾರೆ.
undefined
ಒತ್ತಡ: ಕೆಲಸದ ಒತ್ತಡ, ಮನೆ, ಮಕ್ಕಳ ಒತ್ತಡ ಎಲ್ಲಾ ಸೇರಿದಾಗ ಮಹಿಳೆಯರಿಗೆ ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಸೆಕ್ಸ್‌ಗೆ ನಿರಾಕರಿಸುತ್ತಾರೆ.
undefined
ಟೆಸ್ಟೋಸ್ಟೆರಾನ್: ಟೆಸ್ಟೋಸ್ಟೆರಾನ್ ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕತೆ ಮೇಲೆ ಪರಿಣಾಮ ಬೀರುತ್ತದೆ. ಟೆಸ್ಟೋಸ್ಟೆರಾನ್ ಮಟ್ಟವು ಮಹಿಳೆಯರ ಮಧ್ಯ -20 ರ ವಯಸ್ಸಿನಲ್ಲಿ ಹೆಚ್ಚಾಗಿರುತ್ತದೆ. ನಂತರ ಅದು ಕುಸಿಯಲು ಆರಂಭಿಸುತ್ತದೆ. ಇದರಿಂದ ಆಸಕ್ತಿ ಕಡಿಮೆಯಾಗುತ್ತದೆ.
undefined
ವೈದ್ಯಕೀಯ ಸಮಸ್ಯೆಗಳು: ಖಿನ್ನತೆಯಂತಹ ಮಾನಸಿಕ ಕಾಯಿಲೆಗಳು ಅಥವಾ ಎಂಡೊಮೆಟ್ರಿಯೊಸಿಸ್, ಫೈಬ್ರಾಯ್ಡ್‌ಗಳು ಮತ್ತು ಥೈರಾಯ್ಡ್ ಕಾಯಿಲೆಗಳಂತಹ ವೈದ್ಯಕೀಯ ಪರಿಸ್ಥಿತಿಗಳು ಮಹಿಳೆಯ ಲೈಂಗಿಕತೆ ಮೇಲೆ ಪರಿಣಾಮ ಬೀರುತ್ತದೆ.
undefined
ಬೋರ್‌ ಆಗಿರುತ್ತದೆ:ಈ ಮೇಲಿನ ಯಾವುದೇ ಕಾರಣಗಳಿಗಾಗಿ ಆಕೆ ಸೆಕ್ಸ್‌ಗೆ ನೋ ಎನ್ನುತ್ತಿಲ್ಲವೆಂದಾದರೆ ಆಕೆ ನಿಮ್ಮ ಜೊತೆ ಬೋರ್‌ ಆಗಿದ್ದಾಳೆ ಎಂದೇ ಅರ್ಥ.
undefined
click me!