ಮೊಬೈಲ್ ಬಳಕೆ..
ಈಗಿನ ಮಕ್ಕಳು ಎದ್ದಾಗಿನಿಂದ ಮಲ್ಕೊಳ್ಳೋವರೆಗೂ ಮೊಬೈಲ್‌ನಲ್ಲೇ ಕಾಲ ಕಳೆಯುತ್ತಾರೆ. ಜಾಸ್ತಿ ಮೊಬೈಲ್ ನೋಡೋದ್ರಿಂದಲೂ ಮಕ್ಕಳಿಗೆ ಕೋಪ ಜಾಸ್ತಿ ಆಗಬಹುದು. ಅದಕ್ಕೆ ಮೊಬೈಲ್ ಅಭ್ಯಾಸ ಮಾಡ್ಸಬಾರದು. ದೂರ ಇಡಬೇಕು.
ಮಕ್ಕಳ ಮೇಲಿನ ಪ್ರೀತಿಯಿಂದ ನಾವು ಮಾಡೋ ಮುದ್ದೇ ಅವ್ರಿಗೆ ಕೋಪ ಬರೋಕೆ ಕಾರಣ ಆಗಬಹುದು. ಪ್ರೀತಿಯಿಂದ ಬೊಂಬೆಗಳಿಂದ ಹಿಡಿದು ತಿಂಡಿವರೆಗೂ ಅವ್ರು ಕೇಳಿದ್ದನ್ನೆಲ್ಲಾ ಕೊನಿಸ್ತೀವಿ. ಕೆಲವೊಮ್ಮೆ, ಆರ್ಥಿಕ ಪರಿಸ್ಥಿತಿಯಿಂದ ನಾವು ಅದನ್ನ ಕೊಳ್ಳೋಕೆ ಆಗಲ್ಲ. ಈ ನಿರಾಸೆ ಮಕ್ಕಳಿಗೆ ಕೋಪ ತರಬಹುದು.
ಮಕ್ಕಳು ಪ್ರಶಾಂತವಾಗಿದ್ದಾಗ ಮಾತ್ರ ಅವ್ರು ಕಡಿಮೆ ಕೋಪದಲ್ಲಿ ಇರ್ತಾರೆ. ಏನನ್ನಾದ್ರೂ ಸರಿಯಾಗಿ ಮಾಡ್ತಾರೆ. ಅದಕ್ಕೆ ಪೋಷಕರು ಮಕ್ಕಳನ್ನ ಯಾವಾಗ್ಲೂ ಖುಷಿಯಾಗಿಡೋ ವಾತಾವರಣ ನಿರ್ಮಿಸಬೇಕು.