ದಾಂಪತ್ಯ ಜೀವನ ಚೆನ್ನಾಗಿರಬೇಕು ಅಂದ್ರೆ ಗಂಡ ಹೆಂಡತಿ ಕೆಲವು ನಿಯಮಗಳನ್ನು ಪಾಲಿಸಬೇಕಂತೆ. ಅದರಲ್ಲೂ ಮುಖ್ಯವಾಗಿ ಹೆಂಡತಿಯ ಬಗ್ಗೆ ಯಾವ ವಿಷಯವನ್ನೂ ಗಂಡ ಬೇರೆಯವರ ಜೊತೆ ಹೇಳ್ಕೋಬಾರದು ಅಂತೆ. ಗಂಡ ಹೆಂಡತಿ ಜಗಳ ಆಗೋದು ಸಹಜ. ಗಂಡನಿಗೆ ಹೆಂಡತಿ ಮೇಲೆ ಕೋಪ ಬರೋದೂ ಸಹಜ. ಆದ್ರೆ ಜಗಳ ಆಯ್ತು, ಹೆಂಡತಿ ಮೇಲೆ ಕೋಪ ಬಂತು ಅಂತ ಎಲ್ಲರ ಜೊತೆ ಹೇಳ್ಕೋಬಾರದು. ಕೋಪವನ್ನು ಹೆಂಡತಿಗೆ ಮಾತ್ರ ಹೇಳಬೇಕು. ಎಲ್ಲರಿಗೂ ಹೇಳಿ ಅವಳನ್ನು ಅವಮಾನ ಮಾಡಬಾರದು.