ನಿಮ್ಮ ಹೃದಯ ಮತ್ತು ಮನಸ್ಸಿನಿಂದ ಯೋಚಿಸಿ
ಪ್ರೀತಿಯಲ್ಲಿ ಬೀಳೋದಕ್ಕೆ ಹೃದಯಾನೆ ಕಾರಣ ಎನ್ನಲಾಗುತ್ತೆ. ಇದರರ್ಥ ಮನಸ್ಸನ್ನು ಹಿಂದೆ ಇಡಬೇಕು ಎಂದಲ್ಲ. ಚಾಣಕ್ಯ ನೀತಿ ಹೇಳುವಂತೆ, ಪ್ರೀತಿಯಲ್ಲಿಯೂ ಸಹ, ಪ್ರಾಯೋಗಿಕ ವಿಧಾನವು ಅವಶ್ಯಕ. ನೀವು ನಿಮ್ಮ ಮನಸ್ಸಿನಿಂದ ಯೋಚಿಸಿದಾಗ, ನೀವು ತಪ್ಪು ತಿಳುವಳಿಕೆಗಳನ್ನು ನಿವಾರಿಸೋದಕ್ಕೆ ಸಾಧ್ಯವಾಗುತ್ತದೆ. ಇದಲ್ಲದೆ, ಒಬ್ಬ ವ್ಯಕ್ತಿಯು ನಿಮಗೆ ಮೋಸ ಮಾಡಲು ಬಯಸಿದರೆ, ಅವನ ಚಟುವಟಿಕೆಗಳು ಮತ್ತು ಮಾತುಗಳಲ್ಲಿ ಖಂಡಿತವಾಗಿಯೂ ಕೆಲವು ಸೂಚನೆಗಳು ಕಾಣಿಸಿಕೊಳ್ಳುತ್ತೆ. ಅದನ್ನು ನೀವು ನಿರ್ಲಕ್ಷಿಸಬಾರದು. ಯಾರಾದರೂ ಪದೇ ಪದೇ ಸುಳ್ಳು ಹೇಳುತ್ತಿದ್ದರೆ, ಜಾಗರೂಕರಾಗಿರಿ ಮತ್ತು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಿ.