ಇಲ್ಲಿ ನಡೆಯುತ್ತೆ ವಧುಗಳ ಮಾರ್ಕೆಟ್, ಮದುವೆ ಆಗ್ತಿಲ್ವಾ ನಿಮಗಿಷ್ಟವಾದ ವಧು ಖರೀದಿಸಲೂಬಹುದು!

First Published | Jan 15, 2025, 7:49 PM IST

ತರಕಾರಿ, ಹಣ್ಣುಹಂಪಲು, ಮೀನು ಮಾರ್ಕೆಟ್ ಬಗ್ಗೆ ಕೇಳಿದ್ದೀರಿ. ಆದರೆ ಯಾವತ್ತಾದಾರೂ ವಧುಗಳ ಮಾರ್ಕೆಟ್ ಬಗ್ಗೆ ಕೇಳಿದ್ದೀರಾ? ಬಲ್ಗೇರಿಯಾದಲ್ಲಿದೆ ವಧುಗಳ ಮಾರುಕಟ್ಟೆ, ಇಲ್ಲಿ ಹುಡುಗರು ತಮಗೆ ಇಷ್ಟವಾದ ವಧುವನ್ನು ಖರೀದಿಸಬಹುದು. 
 

ನೀವೂ ಸಹ ಮದುವೆಯಾಗುತ್ತಿದ್ದರೆ ಮತ್ತು ನಿಮಗೆ ನೀವು ಅಂದುಕೊಂಡಂತ ಹುಡುಗಿ ಸಿಗದಿದ್ದರೆ, ಇಂದು ನಾವು ವಧುವಿನ ಮಾರುಕಟ್ಟೆಯ (Bride Market) ಬಗ್ಗೆ ನಿಮಗೆ ಹೇಳಲಿದ್ದೇವೆ.  ಮಾರುಕಟ್ಟೆಯಲ್ಲಿ ತರಕಾರಿ, ಇತರ ಸಾಮಾಗ್ರಿಗಳನ್ನು ಮಾರೋದನ್ನು ನೀವು ನೋಡಿರಬಹುದು. ಆದ್ರೆ ಇದ್ಯಾವುದು ವಧುವಿನ ಮಾರುಕಟ್ಟೆ ಅಂದ್ಕೊಂಡ್ರಾ? 

ಬಲ್ಗೇರಿಯಾದಲ್ಲಿ ಸ್ಟಾರಾ ಜಾಗೋರ್ ಎಂಬ ಸ್ಥಳದಲ್ಲಿ ಒಂದು ವಿಶಿಷ್ಟ ಮಾರುಕಟ್ಟೆ ಇದೆ, ಅಲ್ಲಿ ವಧುಗಳನ್ನು 'ಖರೀದಿಸಲಾಗುತ್ತದೆ' (buying bride). ಇಲ್ಲಿ ಪುರುಷರು ತಮ್ಮ ಕುಟುಂಬಗಳೊಂದಿಗೆ ಬಂದು ತಮಗೆ ಇಷ್ಟವಾದ ಹುಡುಗಿಯನ್ನು ಆಯ್ಕೆ ಮಾಡುತ್ತಾರೆ. ಒಂದು ವೇಳೆ ಅವರಿಗೆ ವಧು ಇಷ್ಟವಾದರೆ, ತರಕಾರಿಗಳನ್ನು ಖರೀದಿಸುವಾಗ ಮಾಡಿದಂತೆಯೇ ಹುಡುಗಿಯ ಕುಟುಂಬ ಸದಸ್ಯರೊಂದಿಗೆ ಚೌಕಾಸಿ ಮಾಡಲಾಗುತ್ತದೆ.

Tap to resize

ಹುಡುಗಿಗೆ ಒಂದು ನಿಗಧಿತ ಬೆಲೆ ಗೊತ್ತು ಮಾಡಿದ ಬಳಿಕ, ಹುಡುಗಿಯನ್ನು ಹುಡುಗನಿಗೆ ಹಸ್ತಾಂತರಿಸಲಾಗುತ್ತದೆ, ಆ ನಂತರ ಆಕೆ ಅವನ ಹೆಂಡತಿಯಾಗುತ್ತಾಳೆ. ಬಡ ಕುಟುಂಬಗಳು ಮಾತ್ರ ತಮ್ಮ ಹೆಣ್ಣುಮಕ್ಕಳನ್ನು ಈ ಮಾರುಕಟ್ಟೆಗೆ ಕರೆತರುತ್ತವೆ, ಅಂದರೆ ಯಾವ ಕುಟುಂಬಕ್ಕೆ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಡಲು ಸಾಧ್ಯವಿಲ್ಲವೋ ಅವರು ಇಲ್ಲಿ ಮಾರುಕಟ್ಟೆಗೆ ಹುಡುಗಿಯರನ್ನು ಕರೆತರುತ್ತಾರೆ. 

ಈ ಪದ್ಧತಿಯನ್ನು ಅನುಸರಿಸುವ ಕಲೈಡ್ಝಿ ಸಮುದಾಯವಿದೆ. ಅವರು ಈ ಪದ್ಧತಿಯ ಬಗ್ಗೆ ತುಂಬಾ ಹೆಮ್ಮೆ ಪಡುತ್ತಾರೆ ಈ ಸಮುದಾಯವು ಮೂಲತಃ ತಾಮ್ರ ಮತ್ತು ಹಿತ್ತಾಳೆ ಶಿಲ್ಪಗಳನ್ನು ತಯಾರಿಸುವ ಕೆಲಸ ಮಾಡ್ತಾರೆ. ಅವರ ಪ್ರಕಾರ, ಈ ಪದ್ಧತಿಯು ಹುಡುಗರು ಮತ್ತು ಹುಡುಗಿಯರು ಇಬ್ಬರಿಗೂ ಪ್ರಯೋಜನಕಾರಿ. ಈ ಪದ್ಧತಿ ಮೂಲಕ, ಬಡ ಕುಟುಂಬಗಳ ಜನರು ತಮ್ಮ ಮಕ್ಕಳನ್ನು ಚೆನ್ನಾಗಿ ಮದುವೆಯಾಗಬಹುದು ಅನ್ನೋದು ಈ ಜನರ ನಂಬಿಕೆ. 
 

ಈ ಸಂಪ್ರದಾಯಕ್ಕೆ ಸರ್ಕಾರದ ಅನುಮತಿ ಕೂಡ ಇದೆ, ಅಷ್ಟೇ ಅಲ್ಲ ಹಲವು ವರ್ಷಗಳಿಂದ ಈ ಸಂಪ್ರದಾಯ ನಡೆಯುತ್ತಾ ಬಂದಿದೆ. ಹುಡುಗಿಯರ ಬೆಲೆ ಅವರ ಸೌಂದರ್ಯ, ವಯಸ್ಸು ಮತ್ತು ಕನ್ಯತ್ವವನ್ನು (varginity)ಅವಲಂಬಿಸಿರುತ್ತದೆ. ಈ ಸಂಪ್ರದಾಯವನ್ನು ಅನುಸರಿಸುವ ಜನರನ್ನು ಬಲ್ಗೇರಿಯಾದ ರೋಮಾ ಜನರು ಎಂದೂ ಕರೆಯುತ್ತಾರೆ. 

ಇನ್ನು ಇಲ್ಲಿ ಹುಡುಗಿಯರಿಗೆ ಹಲವು ನಿಯಮಗಳೂ ಇವೆ. ಅವುಗಳೆಂದರೆ… 
ಹುಡುಗಿಯರು ಡೇಟಿಂಗ್ (Dating) ಮಾಡಬಾರದು. ಹುಡುಗಿಯರು ಹೆಚ್ಚು ವಿದ್ಯಾಭ್ಯಾಸ ಮಾಡುವಂತಿಲ್ಲ. ಕುಟುಂಬ ಸದಸ್ಯರಿಲ್ಲದೆ ಹುಡುಗಿಯರು ಎಲ್ಲಿಯಾದರೂ ಹೋಗುವುದು ತಪ್ಪು. ಅನ್ಯ ಪುರುಷರ ಜೊತೆ ಮಾತನಾಡೋದು ಕೂಡ ತಪ್ಪು. ಬೇರೆ ಸಮುದಾಯದ ಹುಡುಗರನ್ನು ಭೇಟಿಯಾಗುವಂತಿಲ್ಲ. ಲವ್ ಮ್ಯಾರೇಜ್ (Love marriage) ಅಂತೂ ಇಲ್ವೇ ಇಲ್ಲ. ಹಾಗೇನಾದರೂ ಆದರೆ ಅವರನ್ನು ಬಹಿಷ್ಕರಿಸಲಾಗುತ್ತದೆ. 

Latest Videos

click me!