ಈ ತಾಯಂದಿರ ದಿನಕ್ಕೆ ನಿಮ್ಮ ಅಮ್ಮನಿಗೆ ವಿಶೇಷವಾಗಿ ಶುಭಾಶಯ ತಿಳಿಸಲು ಬಯಸುವಿರಾ? ಹಾಗಿದ್ರೆ ಇಲ್ಲಿದೆ ನೀವು ಅವರಿಗೆ ಕಳುಹಿಸಬಹುದಾದ ಅತ್ಯುತ್ತಮ ಮೆಸೇಜ್ ಗಳು. ಇದರಿಂದ ಅವರ ದಿನವೂ ಚೆನ್ನಾಗಿರುತ್ತೆ.
ತಾಯಂದಿರ ದಿನವು (Mothers Day) ನಿಮ್ಮನ್ನು ಬೆಳೆಸಿದ ಮತ್ತು ಇಂದು ನೀವು ಯಾರಾಗಿದ್ದೀರೋ ಆ ವ್ಯಕ್ತಿಯನ್ನು ರೂಪಿಸಿದ ವ್ಯಕ್ತಿಯನ್ನು ಆಚರಿಸುವ ದಿನವಾಗಿದೆ. ಮಗುವಿನ ಜೀವನದಲ್ಲಿ ತಾಯಿಯ ಪ್ರೀತಿ ಮತ್ತು ಪಾತ್ರವು ನಿಸ್ಸಂದೇಹವಾಗಿ ಅತ್ಯಂತ ಮುಖ್ಯವಾಗಿದೆ. ಮಗುವಿನ ಪಾತ್ರ ಮತ್ತು ಮೌಲ್ಯಗಳ ವಿಷಯಕ್ಕೆ ಬಂದಾಗ ತಾಯಿಯೇ ಮೊದಲ ಗುರು. ತಾಯಿ ತನ್ನ ಪ್ರೀತಿ, ಪೋಷಣೆ ಮತ್ತು ಬೋಧನೆಗಳ ಮೂಲಕ ಮಗುವಿನ ಭವಿಷ್ಯದ ಅಡಿಪಾಯ ಹಾಕುತ್ತಾಳೆ. ತಾಯಂದಿರ ಪಾತ್ರವು ಎಷ್ಟು ವರ್ಷಗಳು ಕಳೆದರೂ ಎಂದಿಗೂ ಬದಲಾಗುವುದಿಲ್ಲ ಮತ್ತು ಅವರು ಶಕ್ತಿಯ ಆಧಾರಸ್ತಂಭವಾಗಿ ಉಳಿಯುತ್ತಾರೆ ಮತ್ತು ತಮ್ಮ ಮಕ್ಕಳಿಗಾಗಿ 24×7 ಕೆಲಸ ಮಾಡುವ ಅಪ್ರತಿಮ ವೀರರಾಗಿ ಮುಂದುವರಿಯುತ್ತಾರೆ.
210
ಮೇ ತಿಂಗಳ ಎರಡನೇ ಭಾನುವಾರದಂದು (Second Sunday of May)ವಿಶೇಷವಾಗಿ ತಾಯಿಯನ್ನೂ ಗೌರವಿಸಲು ನಾವು ತಾಯಂದಿರ ದಿನವನ್ನು ಆಚರಿಸುತ್ತೇವೆ. ಈ ವರ್ಷ, ಮೇ 14 ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ನಿಮ್ಮ ತಾಯಂದಿರೊಂದಿಗೆ ಸಮಯ ಕಳೆಯುವ ಮೂಲಕ ಮತ್ತು ಸುಂದರವಾದ ಶುಭಾಶಯಗಳೊಂದಿಗೆ ಅವರನ್ನು ಸ್ವಾಗತಿಸುವ ಮೂಲಕ ಈ ದಿನದಂದು ಅವರಿಗೆ ವಿಶೇಷ ಭಾವನೆ ಮೂಡಿಸಿ. ನಿಮ್ಮ ತಾಯಿಗೆ ಕೆಲವು ಶುಭ ಹಾರೈಕೆಗಳು ಮತ್ತು ಸಂದೇಶಗಳು ಇಲ್ಲಿವೆ.
310
ವಿಶ್ವದ ಅತ್ಯಂತ ಅದ್ಭುತ ತಾಯಿಗೆ ತಾಯಂದಿರ ದಿನದ ಶುಭಾಶಯಗಳು! ನಿಮ್ಮ ಪ್ರೀತಿ, ಕಾಳಜಿ ಮತ್ತು ಬೆಂಬಲ ಎಲ್ಲವೂ ನನಗೆ ಸರ್ವಸ್ವವಾಗಿದೆ. ನನ್ನ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಇದ್ದದಕ್ಕಾಗಿ ಧನ್ಯವಾದಗಳು. ಐ ಲವ್ ಯೂ ಅಮ್ಮ.
410
ಸುಂದರ, ಸ್ಟ್ರಾಂಗ್ ಮತ್ತು ಸ್ನೇಹ ಜೀವಿ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು. ನಿಮ್ಮ ಕೊನೆಯಿಲ್ಲದ ಪ್ರೀತಿ ಮತ್ತು ಸಮರ್ಪಣೆಯಿಂದ ನೀವು ಪ್ರತಿದಿನ ನನಗೆ ಸ್ಫೂರ್ತಿ ನೀಡುತ್ತೀರಿ. ಅಂತಹ ಅದ್ಭುತ ರೋಲ್ ಮಾಡೆಲ್ (role model) ಆಗಿದ್ದಕ್ಕಾಗಿ ಧನ್ಯವಾದಗಳು ಅಮ್ಮ.
510
ನನ್ನನ್ನು ಬೆಳೆಸಲು ತುಂಬಾ ತ್ಯಾಗ ಮಾಡಿದ ಮಹಿಳೆಗೆ ತಾಯಂದಿರ ದಿನದ ಶುಭಾಶಯಗಳು. ನಿಮ್ಮ ಪ್ರೀತಿ ಇಂದು ನಾನು ಏನಾಗಿದ್ದೇನೊ ಅದಕ್ಕೆ ಕಾರಣ. ಎಲ್ಲದಕ್ಕೂ ಧನ್ಯವಾದಗಳು, ಅಮ್ಮ. ನಿಮ್ಮ ದಿನವು ಸಂತೋಷ ಮತ್ತು ಸಂಭ್ರಮದಿಂದ ಕೂಡಿರಲಿ ಎಂದು ನಾನು ಭಾವಿಸುತ್ತೇನೆ.
610
ವರ್ಲ್ಡ್ ಬೆಸ್ಟ್ ಅಮ್ಮನಿಗೆ, ತಾಯಂದಿರ ದಿನದ ಶುಭಾಶಯಗಳು! ನಿಮ್ಮ ನಿಷ್ಕಲ್ಮಶ ಪ್ರೀತಿ ಮತ್ತು ನಿಸ್ವಾರ್ಥತೆ ನಿಮ್ಮನ್ನು ನಿಜವಾಗಿಯೂ ಅಸಾಧಾರಣರನ್ನಾಗಿ ಮಾಡುತ್ತದೆ. ನನ್ನ ಜೀವನದಲ್ಲಿ ನಿಮ್ಮನ್ನು ತಾಯಿಯಾಗಿ ಪಡೆಯೋದಕ್ಕೆ ನಾನು ಕೃತಜ್ಞನಾಗಿದ್ದೇನೆ.
710
ತಾಯಂದಿರ ದಿನದಂದು ನಿಮಗೆ ಶುಭಾಶಯಗಳನ್ನು ಕಳುಹಿಸುತ್ತಿದ್ದೇನೆ, ಅಮ್ಮ. ನೀವು ನನ್ನ ಮಾರ್ಗದರ್ಶಕರು, ನನ್ನ ಶಕ್ತಿಯ ಮೂಲ ಮತ್ತು ನನ್ನ ಅತಿದೊಡ್ಡ ಚಿಯರ್ ಲೀಡರ್. ನಿಮ್ಮನ್ನು ನನ್ನ ತಾಯಿ ಎಂದು ಕರೆಯಲು ನಾನು ಹೆಮ್ಮೆಪಡುತ್ತೇವೆ.
810
ಈ ತಾಯಂದಿರ ದಿನದಂದು, ನಮ್ಮ ಕುಟುಂಬಕ್ಕಾಗಿ ನೀವು ಮಾಡಿದ ಎಲ್ಲಾ ತ್ಯಾಗಗಳಿಗೆ ಥ್ಯಾಂಕ್ಸ್ ಹೇಳೊದಕ್ಕೆ ಬಯಸುತ್ತೇನೆ. ನಿಮ್ಮ ಪ್ರೀತಿಗೆ ಮಿತಿಯಿಲ್ಲ, ಮತ್ತು ನಿಮ್ಮನ್ನು ನನ್ನ ತಾಯಿಯಾಗಿ ಪಡೆದ ನಾನು ಅದೃಷ್ಟಶಾಲಿ. ನಿಮ್ಮ ದಿನ ಹ್ಯಾಪಿಯಾಗಿರಲಿ.
910
ವಿಶ್ವದ ಅತ್ಯಂತ ಸ್ಟ್ರಾಂಗ್ ತಾಯಿಗೆ, ತಾಯಂದಿರ ದಿನದ ಶುಭಾಶಯಗಳು! ನಿಮ್ಮ ಅಚಲ ಪ್ರೀತಿ ಮತ್ತು ಬೆಂಬಲವು ನನ್ನ ಜೀವನದಲ್ಲಿ ಎಲ್ಲಾ ಬದಲಾವಣೆಗಳನ್ನು ಮಾಡಿದೆ. ನಾನು ನಿಮಗಾಗಿ ಎಂದೆಂದಿಗೂ ಕೃತಜ್ಞನಾಗಿರುತ್ತೇನೆ.
1010
ಅಮ್ಮ ಹ್ಯಾಪಿ ಮದರ್ಸ್ ಡೇ…! ನೀವು ಅದ್ಭುತ ತಾಯಿ ಮಾತ್ರವಲ್ಲ, ಪ್ರೀತಿಯ ಹೆಂಡತಿ, ಸ್ಟ್ರಾಂಗ್ ಮಹಿಳೆ ಮತ್ತು ನನ್ನ ಉತ್ತಮ ಸ್ನೇಹಿತೆ. ಪದಗಳು ವರ್ಣಿಸುವುದಕ್ಕಿಂತ ಹೆಚ್ಚಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ. ಈ ವಿಶೇಷ ದಿನವನ್ನು ಎಂಜಾಯ್ ಮಾಡಿ.