ಲ್ಯಾಬ್ರಡಾರ್‌ಗಳನ್ನು ಸಾಕುವ ಮುನ್ನ ತಿಳಿದಿರಲೇಬೇಕಾದ 5 ವಿಷಯಗಳು

Published : May 22, 2025, 08:31 AM IST

ಲ್ಯಾಬ್ರಡಾರ್ ರಿಟ್ರೈವರ್‌ಗಳು ಸ್ನೇಹಪರ ಮತ್ತು ಬುದ್ಧಿವಂತ ನಾಯಿಗಳು. ಆದರೆ ಅವುಗಳನ್ನು ಸಾಕಲು ಮನೆಗೆ ತರುವ ಮೊದಲು, ಅವುಗಳ ನಿರ್ದಿಷ್ಟ ಅಗತ್ಯತೆಗಳು ಮತ್ತು ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಲ್ಯಾಬ್ರಡಾರ್ ರಿಟ್ರೈವರ್ ಅನ್ನು ಸಾಕುಪ್ರಾಣಿಯಾಗಿ ಪಡೆಯುವ ಮೊದಲು ಒಬ್ಬರು ತಿಳಿದುಕೊಳ್ಳಬೇಕಾದ ಕೆಲವು ಅಗತ್ಯ ವಿಚಾರಗಳು ಇಲ್ಲಿವೆ.

PREV
16
ಲ್ಯಾಬ್ರಡಾರ್‌ಗಳನ್ನು ಸಾಕುವ ಮುನ್ನ ತಿಳಿದಿರಲೇಬೇಕಾದ 5 ವಿಷಯಗಳು

ಇತ್ತೀಚೆಗೆ ನಾಯಿ ಸಾಕುವುದು ಅನೇಕರ ನೆಚ್ಚಿನ ಹವ್ಯಾಸವಾಗಿದೆ. ಬಹಳ ಸ್ವಾಮಿನಿಷ್ಠವಾಗಿರುವ ಈ ನಾಯಿಗಳು ಮನುಷ್ಯನ ಒಂಟಿತನವನ್ನು ಕಾಪಾಡುತ್ತವೆ ಎಂಬುದು ಅನೇಕರಿಗೆ ಗೊತ್ತಿರುವ ವಿಚಾರ. ಹೀಗಿರುವ ವಿಶ್ವದ ಅತ್ಯಂತ ಜನಪ್ರಿಯ ತಳಿಯಾಗಿರುವ ಲ್ಯಾಬ್ರಡಾರ್ ರಿಟ್ರೈವರ್‌ಗಳನ್ನು ಸಾಕುನಾಯಿಗಳಾಗಿ ನೀವು ಮನೆಯಲ್ಲಿ ಸಾಕಲು ಬಯಸಿದರೆ ಕೆಲವು ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.  ಈ ಮಧ್ಯಮ ಗಾತ್ರದ ನಾಯಿಗಳು ಅವುಗಳ ಸ್ನೇಹಪರ ಸ್ವಭಾವ ಮತ್ತು ಹೆಚ್ಚಿನ ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದ್ದು, ತರಬೇತಿ ನೀಡುವುದಕ್ಕೆ ಸುಲಭ. ಆದರೆ ಅವುಗಳನ್ನು ಸಾಕಲು ಮನೆಗೆ ತರುವ ಮೊದಲು, ಅವುಗಳ ನಿರ್ದಿಷ್ಟ ಅಗತ್ಯತೆಗಳು ಮತ್ತು ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಆದ್ದರಿಂದ, ಲ್ಯಾಬ್ರಡಾರ್ ರಿಟ್ರೈವರ್ ಅನ್ನು ಸಾಕುಪ್ರಾಣಿಯಾಗಿ ಪಡೆಯುವ ಮೊದಲು ಒಬ್ಬರು ತಿಳಿದುಕೊಳ್ಳಬೇಕಾದ ಕೆಲವು ಅಗತ್ಯ ವಿಚಾರಗಳು ಏನು ಎಂಬುದನ್ನು ಈಗ ನೋಡೋಣ.

26

ಅವುಗಳಿಗೆ ಮಾನಸಿಕ ಪ್ರಚೋದನೆಯ ಅಗತ್ಯವಿದೆ.
ಲ್ಯಾಬ್ರಡಾರ್‌ಗಳು ಹೆಚ್ಚು ಬುದ್ಧಿವಂತರಾಗಿರುವುದರಿಂದ, ಸಂತೋಷವಾಗಿರಲು ಅವುಗಳಿಗೆ ಮಾನಸಿಕವಾಗಿ ತೊಡಗಿಸಿಕೊಳ್ಳುವಿಕೆ ಬಹಳಅಗತ್ಯ. ಬೇಸರಗೊಂಡ ಲ್ಯಾಬ್‌ಗಳು ಪೀಠೋಪಕರಣಗಳನ್ನು ಅಗಿಯಬಹುದು ಅಥವಾ ನಿಮ್ಮ ಗಾರ್ಡನ್‌ನಲ್ಲಿ ಅಗೆಯಬಹುದು. ಆದ್ದರಿಂದ, ನೀವು ಅವುಗಳ ಮನಸ್ಸನ್ನು ಸವಾಲು ಮಾಡಲು ಸಂವಾದಾತ್ಮಕ ಆಟಿಕೆಗಳು ಒದಗಿಸಬೇಕು ಜೊತೆಗೆ ವಿಧೇಯ ತರಬೇತಿ ಒದಗಿಸಬೇಕಾಗುತ್ತದೆ.

36

ಲ್ಯಾಬ್ರಡಾರ್‌ಗಳು ಬೊಜ್ಜುತನಕ್ಕೆ ಬೇಗ ಗುರಿಯಾಗುತ್ತವೆ:
ಲ್ಯಾಬ್ರಡಾರ್‌ಗಳು ತಿನ್ನುವುದನ್ನು ತುಂಬಾ ಇಷ್ಟಪಡುತ್ತವೆ ಮತ್ತು ಅವುಗಳಿಗೆ ತಿನ್ನುವುದನ್ನು ನಿಲ್ಲಿಸಿಯೇ ಗೊತ್ತಿಲ್ಲ, ಆದರೆ ಅವುಗಳ ಈ ಲಕ್ಷಣವನ್ನು ನಿರ್ಲಕ್ಷಿಸಿ ಹಸಿವಾಗಿದೆ ಎಂದು ಊಟ ಹಾಕುತ್ತಲೇ ಇದ್ದರೆ, ಅವು ಸುಲಭವಾಗಿ ಬೊಜ್ಜಿನ ಸಮಸ್ಯೆಗೆ ತುತ್ತಾಗಬಹುದು. ಇದು ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಲ್ಯಾಬ್‌ಗಳಲ್ಲಿ ಕೀಲು ಸಮಸ್ಯೆಗಳು ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಆರೋಗ್ಯಕರ ಆಹಾರ  ಹಾಗೂ ನಿಯಮಿತ ವ್ಯಾಯಾಮ ಮುಖ್ಯವಾಗಿದೆ. ಅವುಗಳು ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಮತ್ತು ಉಪಚಾರಗಳನ್ನು ಮಿತಿಗೊಳಿಸಿ, ಮತ್ತು ಮನೆಯಲ್ಲಿರುವ ಪ್ರತಿಯೊಬ್ಬರೂ ಸಹ ಇದನ್ನು ಅನುಸರಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

46
Labrador dog

ಲ್ಯಾಬ್ರಡಾರ್‌ ರೋಮ ತುಂಬಾ ಉದುರುತ್ತವೆ.
ಲ್ಯಾಬ್ರಡಾರ್ ರಿಟ್ರೈವರ್‌ಗಳು ಚಿಕ್ಕ ಕೂದಲನ್ನು ಹೊಂದಿದ್ದರೂ, ವಿಶೇಷವಾಗಿ ಋತುಮಾನದ ಬದಲಾವಣೆಗಳ ಸಮಯದಲ್ಲಿ ಅವುಗಳ ರೋಮ ಬಹಳಷ್ಟು ಉದುರುತ್ತವೆ. ನಿಯಮಿತವಾಗಿ ಅವುಗಳ ಕೂದಲನ್ನು ಬ್ರಷ್‌ ಮಾಡುವುದರಿಂದ ಮನೆಯಲ್ಲಿ ಅವುಗಳ ರೋಮ ಸಿಗುವ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಅವುಗಳಿಗೆ ಆಗಾಗ ವಾಕ್ಯೂಮ್‌ ಮಾಡಲು ಸಿದ್ಧರಾಗಿರಿ. ಲ್ಯಾಬ್‌ಗಳಿಗೆ ರೋಮ ಉದುರುವುದು ಸಾಮಾನ್ಯವಾಗಿದ್ದು ಅದನ್ನು ನಿರ್ವಹಿಸಬಹುದಾದರೂ, ಕೆಲವರು ತುಂಬಾ ಸೂಕ್ಷ್ಮವಾಗಿದ್ದು, ಸಾಕುಪ್ರಾಣಿಗಳ ರೋಗದಿಂದ ಅಲರ್ಜಿ ಸಮಸ್ಯೆ ಹೊಂದಿದ್ದಾರೆ ಈ ಬಗ್ಗೆ ಗಮನ ಹರಿಸಬೇಕು.

56
Labrador dog

ಲ್ಯಾಬ್ರಡಾರ್ ರಿಟ್ರೈವರ್‌ಗಳು ಹೆಚ್ಚು ಶಕ್ತಿಶಾಲಿ ಸಾಕು ನಾಯಿಗಳು.
ಲ್ಯಾಬ್ರಡಾರ್‌ಗಳು ಶಕ್ತಿಶಾಲಿ ನಾಯಿಗಳು ಹೀಗಾಗಿ ಅವುಗಳಿಗೆ ಸಂತೋಷ ಮತ್ತು ಆರೋಗ್ಯವಾಗಿರಲು ನಿಯಮಿತವಾದ  ವ್ಯಾಯಾಮದ ಅಗತ್ಯವಿದೆ. ಅವು ಓಡುವುದು, ತರಬೇತುದಾರರೊಂದಿಗೆ ಆಟವಾಡುವುದು ಮತ್ತು ಈಜುವುದನ್ನು ಇಷ್ಟಪಡುತ್ತವೆ. ಮತ್ತು ಇದು ಸಕ್ರಿಯ ಜೀವನಶೈಲಿಯನ್ನು ಹೊಂದಿರುವ ಜನರಿಗೆ ಅವುಗಳನ್ನು ಉತ್ತಮ ಒಡನಾಡಿಗಳನ್ನಾಗಿ ಮಾಡುತ್ತದೆ. ದೈನಂದಿನ ದೈಹಿಕ ಚಟುವಟಿಕೆಯಿಲ್ಲದೆ ಹೋದರೆ ಲ್ಯಾಬ್ರಡಾರ್‌ಗಳು ಆತಂಕಕ್ಕೊಳಗಾಗುತ್ತವೆ.  ಹಾಗೂ ಅವುಗಳ ಗುಣನಡತೆಯಲ್ಲಿ ವ್ಯತ್ಯಾಸವಾಗಬಹುದು.

66
Labrador dog

ಜನರನ್ನು ಮೆಚ್ಚಿಸಲು ಬಹಳ ಇಷ್ಟಪಡುತ್ತವೆ.
ಲ್ಯಾಬ್ರಡಾರ್‌ಗಳು ಸ್ವಾಭಾವಿಕವಾಗಿ ಸ್ನೇಹಪರವಾಗಿವೆ, ಆದರೆ ಆರಂಭಿಕ ಸಾಮಾಜಿಕೀಕರಣವು ಇನ್ನೂ ಮುಖ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಅವುಗಳನ್ನು ವಿಭಿನ್ನ ಜನರು, ಸಾಕುಪ್ರಾಣಿಗಳು, ಪರಿಸರಗಳು ಮತ್ತು ಸನ್ನಿವೇಶಗಳಿಗೆ ಒಡ್ಡಿಕೊಳ್ಳುವುದರಿಂದ ಅವು ಇತರ ಮನುಷ್ಯರಿಗೆ ಚೆನ್ನಾಗಿ ಹೊಂದಿಕೊಳ್ಳುವಂತೆ ಬೆಳೆಯಲು ಸಹಾಯ ಮಾಡುತ್ತದೆ. ಇದು ಅವುಗಳ ಆತಂಕವನ್ನು ಕಡಿಮೆ ಮಾಡಲು, ಆಕ್ರಮಣಶೀಲತೆಯನ್ನು ನಿಗ್ರಹಿಸಲು ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ.

Read more Photos on
click me!

Recommended Stories