Barwan Kala Bihar bachelors village: ಹೆಣ್ಣೇ ಸಿಗುತ್ತಿಲ್ಲ, ಎಲ್ಲಿಂದ ಮದುವೆ ಆಗೋದು ಎಂದು ಅನೇಕರು ಬೇಸರದಲ್ಲಿದ್ದಾರೆ. ಹೀಗಿರುವಾಗ ಭಾರತದ ಹಳ್ಳಿಯೊಂದರಲ್ಲಿ 120 ಯುವಕರಿಗೆ ಮದುವೆಯೇ ಆಗಿಲ್ಲ. ಹೌದು, ಹಾಗಿದ್ರೆ ಅದು ಯಾವ ಊರು?
ಬಿಹಾರದಲ್ಲಿರುವ ಕೈಮೂರ್ ಜಿಲ್ಲೆಯ ಬರ್ವಾನ್ ಕಲಾ ಹಳ್ಳಿಯನ್ನು ಬ್ರಹ್ಮಚಾರಿಗಳ ಹಳ್ಳಿ ಎಂದು ಕರೆಯುತ್ತಾರೆ. ಈ ಹಳ್ಳಿಯಲ್ಲಿರುವ ನೂರಾರು ಯುವಕರಿಗೆ ಮದುವೆಯೇ ಆಗುತ್ತಿಲ್ಲ, ಹೀಗೆಯೇ ವಯಸ್ಸು ಕೂಡ ಮುಗಿದಿದೆ.
ಬಿಹಾರದ ಕೈಮೂರ್ ಬೆಟ್ಟಗಳ ತಪ್ಪಲಿನಲ್ಲಿ ಬರ್ವಾನ್ ಕಲಾ ಗ್ರಾಮದಲ್ಲಿದೆ. ಈ ಹಳ್ಳಿಯಲ್ಲಿರುವ ಹುಡುಗರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಇದಕ್ಕಾಗಿ ಈ ಊರು ಬ್ರಹ್ಮಚಾರಿಗಳ ಗ್ರಾಮ ಎಂದು ಕರೆಸಿಕೊಂಡಿದೆ.
25
ಈ ಹಳ್ಳಿಗೆ ನಡೆದು ಹೋಗಬೇಕು
ಈ ಹಳ್ಳಿಯಲ್ಲಿರುವ ಹುಡುಗರೆಲ್ಲರೂ ತುಂಬ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಈ ಹಳ್ಳಿಗೆ ಸರಿಯಾದ ರಸ್ತೆ ಇಲ್ಲ. ಅಷ್ಟೇ ಅಲ್ಲದೆ ಮೂಲಸೌಕರ್ಯಗಳ ಅಭಾವ ಕೂಡ ಇದೆ. ದಶಕಗಳಿಂದಲೂ ಈ ಹಳ್ಳಿಗೆ ರಸ್ತೆಯೇ ಇಲ್ಲ. ಈ ಹಳ್ಳಿಗೆ ಹೋಗಲು 8-10 ಕಿಮೀ ನಡೆದುಕೊಂಡೇ ಹೋಗಬೇಕು.
35
ಯಾಕೆ ಹೆಣ್ಣು ಕೊಡ್ತಿಲ್ಲ?
ಇಂಥ ಹಳ್ಳಿಯಲ್ಲಿ ನೀರು, ಆರೋಗ್ಯ, ಸಾರಿಗೆ ಸಮಸ್ಯೆ ಇದೆ. ಹೀಗೆಲ್ಲ ಇರುವಾಗ ನಮ್ಮ ಹೆಣ್ಣು ಮಕ್ಕಳನ್ನು ಹೇಗೆ ಈ ಊರಿನ ಹುಡುಗರಿಗೆ ಮದುವೆ ಮಾಡಿಕೊಡೋದು ಎಂದು ಹೆಣ್ಣು ಹೆತ್ತವರು ಭಯಪಡುತ್ತಾರೆ, ಹೀಗಾಗಿ ಇಲ್ಲಿನ ಹುಡುಗರಿಗೆ ಮದುವೆಯೇ ಆಗಿಲ್ಲ.
ಈ ಹಳ್ಳಿಯಲ್ಲಿ 16 ರಿಂದ 45 ವರ್ಷ ವಯಸ್ಸಿನ ನೂರಕ್ಕೂ ಹೆಚ್ಚು ಮದುವೆ ಆಗದಿರೋ ಹುಡುಗರಿದ್ದಾರೆ. ವಯಸ್ಸಾಗುತ್ತಿದ್ದರೂ ಕೂಡ ಮದುವೆಯೇ ಆಗುತ್ತಿಲ್ಲ ಎಂದು ಇಲ್ಲಿನ ಹುಡುಗರು ಬೇಸರಮಾಡಿಕೊಂಡಿದ್ದಾರೆ.
55
ಸ್ವಲ್ಪ ರಸ್ತೆ ಸುಧಾರಿಸಿದೆ!
ಕೆಲವು ವರ್ಷಗಳ ಹಿಂದೆ ಇಲ್ಲಿನವರೇ, ಬೆಟ್ಟವನ್ನು ಕೊರೆದು ರಸ್ತೆ ಮಾಡಲು ರೆಡಿ ಆಗಿದ್ದರು. ಇಲ್ಲಿನ ರಸ್ತೆ ಸ್ವಲ್ಪ ಮಟ್ಟಿಗೆ ರಸ್ತೆ ಸುಧಾರಿಸಿದೆ, ಆದರೂ ಮದುವೆ ಮಾತ್ರ ಆಗುತ್ತಿಲ್ಲ. ಸರ್ಕಾರ ಯಾವಾಗ ಈ ಹಳ್ಳಿಗೆ ರಸ್ತೆ ಮಾಡಿಕೊಡುತ್ತದೆ ಎಂದು ಕಾದು ನೋಡಬೇಕಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.