ಜಿಮ್ ಇಲ್ಲ, ದುಬಾರಿ ಮಾತ್ರೆನೂ ಇಲ್ಲ, ಆದ್ರೂ ಇಲ್ಲಿನ ಜನ 100 ವರ್ಷ ಬದುಕುತ್ತಾರೆ. ಜಿಮ್, ದುಬಾರಿ ಔಷಧಿಗಳಿಲ್ಲದೆ 100 ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತಿರುವ ಜನರ ಜೀವನಶೈಲಿಯ ರಹಸ್ಯ.
ಮುಪ್ಪಿನಲ್ಲೂ ಯುವಕರಂತೆ ಚಟುವಟಿಕೆಯಿಂದ ಇರಬೇಕೆಂದು ಬಯಸುತ್ತೀರಾ?. ಆದರೆ ಇಂದಿನ ದಿನಗಳಲ್ಲಿ ಇದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ವಯಸ್ಸು ಹೆಚ್ಚಾದಂತೆ ರೋಗಗಳು ಜಾಸ್ತಿ. ಆದರೆ ಕೆಲವರು 100 ವರ್ಷ ದಾಟಿದರೂ ಚೈತನ್ಯ ಕಳೆದುಕೊಂಡಿಲ್ಲ. ಯಾವುದೇ ಕಾಯಿಲೆಗಳಿಲ್ಲದೆ, ಯಾರ ಸಹಾಯವೂ ಇಲ್ಲದೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡು ಫುಲ್ ಫಿಟ್ ಆಗಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದು ಹೇಗೆ ಸಾಧ್ಯ?
25
ಗಿನ್ನೆಸ್ ದಾಖಲೆ ನಿರ್ಮಿಸಿದ ಮೂವರು ಸಹೋದರಿಯರು
ಬ್ರೆಜಿಲ್‌ನಲ್ಲಿ ಮೂವರು ಸಹೋದರಿಯರಿದ್ದಾರೆ. ಈ ಮೂವರಿಗೂ 100 ವರ್ಷ ದಾಟಿದೆ. ವಿಜ್ಞಾನಿಗಳು ಇವರ ಮೇಲೆ ಸಂಶೋಧನೆ ನಡೆಸಿದಾಗ, ನಮ್ಮ ದೈನಂದಿನ ಜೀವನಶೈಲಿಗೆ ಸಂಬಂಧಿಸಿದ ಹಲವು ವಿಷಯಗಳು ಬೆಳಕಿಗೆ ಬಂದಿವೆ. ಜುಲಿನಾ ಡಿ ಡ್ಯೂಸ್ ನುನೆಸ್ (103), ಜೊರೈಡ್ ಡಿ ಡ್ಯೂಸ್ ಮೋಟಾ (104) ಮತ್ತು ಲೆವಿಟಾ ಡಿ ಡ್ಯೂಸ್ ನುನೆಸ್ (109) ಇವರ ಹೆಸರುಗಳು. ಈ ಮೂವರ ಒಟ್ಟು ವಯಸ್ಸು 316 ವರ್ಷ. ವಿಶ್ವದಲ್ಲೇ ಅತಿ ಹೆಚ್ಚು ಕಾಲ ಬದುಕಿದವರು ಎಂದು ಗಿನ್ನೆಸ್ ದಾಖಲೆಯನ್ನು ಇವರು ಮಾಡಿದ್ದಾರೆ. ಇದು ಹೇಗೆ ಸಾಧ್ಯ?, ಅವರು ತಿನ್ನುವ ಆಹಾರ. ಅದನ್ನೇ ಅವರು ತಮ್ಮ ಜೀವನದ ಮಂತ್ರವಾಗಿಸಿಕೊಂಡಿದ್ದಾರೆ.
35
ದೀರ್ಘಾಯುಷ್ಯಕ್ಕೆ ನಿಜವಾದ ಕಾರಣ
ಸಂಶೋಧನೆಯ ಪ್ರಕಾರ, ಈ ಮೂವರು ಸಹೋದರಿಯರು ನೂರು ವರ್ಷ ದಾಟಲು ಕೇವಲ ಜೀನ್ಸ್ ಮಾತ್ರವಲ್ಲ, ಜೀವನಶೈಲಿಯ ಬದಲಾವಣೆಗಳೂ ಅಷ್ಟೇ ಮುಖ್ಯ. ಇಷ್ಟು ಕಾಲ ಬದುಕಲು ಆರೋಗ್ಯಕರ ಆಹಾರ ಮತ್ತು ಚಟುವಟಿಕೆಯ ಜೀವನಶೈಲಿಯೇ ಕಾರಣವೆಂದು ಅವರು ಹೇಳುತ್ತಾರೆ. ಜುಲಿನಾ ನೆನಪುಗಳನ್ನು ಹಂಚಿಕೊಳ್ಳುತ್ತಾ, ತಾವು ಚಿಕ್ಕವರಿದ್ದಾಗ ನದಿಗಳಲ್ಲಿ ಈಜುತ್ತಿದ್ದೆವು, ಮೀನು ಹಿಡಿಯುತ್ತಾ ಕಾಲ ಕಳೆಯುತ್ತಿದ್ದೆವು ಎಂದು ಹೇಳಿದ್ದಾರೆ. ಲೆವಿಟಾ ಕರಕುಶಲಕರ್ಮಿಯಾಗಿ, ನಂತರ ಟೆಲಿವಿಷನ್ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡಿದರು. ಜೊರೈಡ್ ನರ್ಸ್ ಆಗಿ ಕೆಲಸ ಮಾಡುತ್ತಾ ಐದು ಮಕ್ಕಳನ್ನು ಬೆಳೆಸಿದರು. ಜುಲಿನಾ ಗೃಹಿಣಿಯಾಗಿ ಆರು ಮಕ್ಕಳನ್ನು ನೋಡಿಕೊಂಡರು.
45
ಸರಳ ಆಹಾರ
ನಮ್ಮ ಪೋಷಕರು ಹೆಚ್ಚು ಕಾಲ ಬದುಕಿದರೆ, ಮಕ್ಕಳೂ ಹೆಚ್ಚು ಕಾಲ ಬದುಕುತ್ತಾರೆ ಎಂಬ ಮಾತಿದೆ. ಈ ಮಾತಿನಲ್ಲಿ ಸ್ವಲ್ಪ ಸತ್ಯವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸಂಶೋಧನೆಯ ಪ್ರಕಾರ, 100 ವರ್ಷಕ್ಕೂ ಹೆಚ್ಚು ಕಾಲ ಬದುಕುವ ಸಾಧ್ಯತೆಯಲ್ಲಿ ಜೀನ್‌ಗಳ ಪಾತ್ರ ಕೇವಲ ಶೇಕಡಾ 20 ರಿಂದ 30 ಮಾತ್ರ. ಉಳಿದ ಶೇಕಡಾ 70-80 ರಷ್ಟು ನಮ್ಮ ಜೀವನಶೈಲಿ, ಪರಿಸರ, ಆರೋಗ್ಯ ಸೇವೆ ಮತ್ತು ನಮ್ಮ ಅದೃಷ್ಟದ ಮೇಲೆ ಅವಲಂಬಿತವಾಗಿರುತ್ತದೆ. ದೀರ್ಘಾಯುಷ್ಯಕ್ಕಾಗಿ ಊಟ ತುಂಬಾ ಸರಳವಾಗಿರಬೇಕು. ಮುಖ್ಯವಾಗಿ ಸಂಸ್ಕರಿಸಿದ ಆಹಾರದಿಂದ ದೂರವಿರಬೇಕು. ಹೆಚ್ಚು ತರಕಾರಿಗಳು, ಹಣ್ಣುಗಳು, ಬೇಳೆಕಾಳುಗಳು ಮತ್ತು ಧಾನ್ಯಗಳಿರಬೇಕು. ಮಾಂಸಾಹಾರವನ್ನು ಮಿತವಾಗಿ ಸೇವಿಸಬೇಕು.
55
ಜೀವನಶೈಲಿಯಲ್ಲಿ ತಕ್ಷಣವೇ ಬದಲಾಯಿಸಬೇಕಾದ ವಿಷಯ
ವಿಶ್ವದ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ಜನಸಂಖ್ಯೆಗಿಂತ ಹೆಚ್ಚು ಜನರು 100 ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತಿದ್ದಾರೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಪ್ರದೇಶಗಳನ್ನು 'ಬ್ಲೂ ಜೋನ್ಸ್' ಎಂದು ಕರೆಯುತ್ತಾರೆ.
ವಿಜ್ಞಾನಿಗಳು ಗುರುತಿಸಿದ ಆ 5 ಪ್ರದೇಶಗಳು ಇಲ್ಲಿವೆ:
1. ಓಕಿನಾವಾ – ಜಪಾನ್ 2. ಸಾರ್ಡಿನಿಯಾ – ಇಟಲಿ 3. ಇಕಾರಿಯಾ – ಗ್ರೀಸ್ 4. ನಿಕೋಯಾ – ಕೋಸ್ಟರಿಕಾ 5. ಲೋಮಾ ಲಿಂಡಾ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.