ಬೆಳಗ್ಗೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಖುಷಿ ಕೊಟ್ಟ ಮೆಟಾ ಫೇಸ್‌ಬುಕ್, ಸಂಜೆ ವೇಳೆ ನೀವು ಮನೆಯಲ್ಲಿ ಆರಾಮಾಗಿರಿ, ಇನ್ನು ಕೆಲಸಕ್ಕೆ ಬರುವ ಅಗತ್ಯವಿಲ್ಲ ಎಂದು 8000 ಮಂದಿ ಉದ್ಯೋಗ ಕಡಿತ ಮಾಡಿದ ನಡೆ ಭಾರಿ ವಿರೋಧಕ್ಕೆ ಕಾರಣವಾಗಿದೆ.
ಮಾರ್ಕ್ ಜುಕರ್‌ಬರ್ಗ್ ಮಾಲೀಕತ್ವದ ಫೇಸ್‌ಬುಕ್ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಳಗ್ಗೆ ಕಂಪನಿ ಉದ್ಯೋಗಿಗಳಿಗೆ ನಿಮಗೆಲ್ಲರಿಗೂ ವರ್ಕ್ ಫ್ರಮ್ ಹೋಮ್ ನೀಡಲಾಗಿದೆ. ಬೆಳಗ್ಗೆ ಎದ್ನೋ ಬಿದ್ನೋ ಅಂತಾ ಆಫೀಸ್‌ಗೆ ಬರಬೇಕಿಲ್ಲ. ನಿಮ್ಮ ಸಮಯಕ್ಕೆ ಸರಿಯಾಗಿ ಮನೆಯಿಂದಲೇ ಲಾಗಿನ್ ಆಗಿ. ಮನೆಯಲ್ಲೇ ಕೆಲಸ ಮಾಡಿ ಎಂದು ಘೋಷಿಸಿತ್ತು. ಇದೇ ಖುಷಿಯಲ್ಲಿ ಕೆಲವೇ ಗಂಟೆ ಕಳೆದ ಉದ್ಯೋಗಿಳಿಗೆ ಬಿಗ್ ಶಾಕ್ ಕೊಟ್ಟಿದೆ.
25
ಫೇಸ್‌ಬುಕ್ 8000 ಉದ್ಯೋಗ ಕಡಿತ
ವರ್ಕ್ ಫ್ರಮ್ ಹೋಮ್ ಆದೇಶ ನೀಡಿದ ಫೇಸ್‌ಬುಕ್ ಸಂಜೆ ವೇಳೆಗೆ ನೀವು ಮನೆಯಲ್ಲೇ ಆರಾಮಾಗಿರಿ, ನೀವಿನ್ನು ಕೆಲಸಕ್ಕೆ ಬರಬೇಕಿಲ್ಲ ಎಂದು ಬರೋಬ್ಬರಿ 8000 ಮಂದಿಯನ್ನು ಉದ್ಯೋಗದಿಂದ ಕಿತ್ತು ಹಾಕಿದೆ. ಎಐ ಜಾರಿ, ನಿರ್ವಹಣೆ ವೆಚ್ಚ ಕಡಿತ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಫೇಸ್‌ಬುಕ್ ಒಂದೇ ಬಾರಿಗೆ 8000 ಉದ್ಯೋಗ ಕಡಿತ ಮಾಡುತ್ತಿದೆ.
35
ಮೆಟಾ ವಿರುದ್ಧ ಆಕ್ರೋಶ
ಬೆಳಗ್ಗೆ ಮನೆಯಿಂದ ಕೆಲಸ ಮಾಡಿ ಎಂದು ಆದೇಶ ನೀಡಿದ ಮೆಟಾ ಫೇಸ್‌ಬುಕ್ ಸಂಜೆ ವೇಳೆಗೆ ಉದ್ಯೋಗ ಕಡಿತ ನಿರ್ಧಾರಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಉದ್ಯೋಗ ಕಡಿತ ಮಾಡುವಾಗ ಕನಿಷ್ಠ ಕಾರ್ಪೋರೇಟ್ ನಿಯಮ ಪಾಲಿಸಿ ಎಂದು ಹಲವರು ಮನವಿ ಮಾಡಿದ್ದಾರೆ.
ಸಿಂಗಾಪುರ, ಯುಎಸ್, ಬ್ರಿಟನ್ ಸೇರಿದಂತೆ ಹಲವೆಡೆ ಉದ್ಯೋಗ ಕಡಿತ ಮಾಡಲಾಗಿದೆ. ಮೆಟಾ ಕಳೆದೆರಡು ವರ್ಷದಿಂದ ಉದ್ಯೋಗ ಕಡಿತ ಮಾಡುತ್ತಲೇ ಬಂದಿದೆ. ಇದೀಗ ಏಕಾಏಕಿ 8000 ಮಂದಿ ಉದ್ಯೋಗ ಕಡಿತ ಹಾಗೂ ಮಾಡಿದ ರೀತಿಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಫೇಸ್‌ಬುಕ್ ಉದ್ಯೋಗಿಗಳಲ್ಲಿ ಕೆಲಸದ ಭದ್ರತೆಗಳು ಕಾಡತೊಡಗಿದೆ.
55
ಹಲವು ಕಂಪನಿಗಳಿಂದ ಲೇಆಫ್
ಮೆಟಾಗೂ ಮೊದಲು ಹಲವು ಕಂಪನಿಗಳು ಆರ್ಥಿಕ ಹಿಂಜರಿತ ಕಾರಣ ನೀಡಿ ಉದ್ಯೋಗ ಕಡಿತ ಮಾಡುತ್ತಿದೆ. ಸಿಸ್ಕೋ ಕಳೆದ ವಾರ 4,000 ಉದ್ಯೋಗ ಕಡಿತ ಮಾಡಿದೆ. ಮೈಕ್ರೋಸಾಫ್ಟ್, ಅಮೇಜಾನ್, ಡಿಸ್ನಿ ಸೇರಿದಂತೆ ಹಲವು ಕಂಪನಿಗಳು ಉದ್ಯೋದ ಕಡಿತ ಮಾಡಿದೆ.