ಕೆಲಸ ಇದೆ ಎಂದು ಬೀಗಬೇಡ! ಬೃಹತ್‌ ಲಾಭವಿದ್ರೂ, ಉದ್ಯೋಗಿಗಳ ಹೊಟ್ಟೆಪಾಡು ಕಿತ್ತುಕೊಂಡ ದೈತ್ಯ ಕಂಪೆನಿ, ಬ್ಯಾಂಕ್!

Published : Apr 27, 2026, 05:00 PM IST

ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್‌ನಂತಹ ಟೆಕ್ ಕಂಪೆನಿಗಳು ಲೇಆಫ್‌ ಮಾಡುತ್ತಿವೆ. ಈಗ ಅಕ್ಸಿಸ್‌ ಬ್ಯಾಂಕ್‌ ಕೂಡ ಲೇಆಫ್‌ ಮಾಡಿದೆ. 

PREV
14
ಒರಾಕಲ್‌ನಿಂದ ಉದ್ಯೋಗಿಗಳ ವಜಾ

ಈಗಾಗಲೇ ಐಟಿ ಕಂಪೆನಿಗಳು ಸಾಕಷ್ಟು ಉದ್ಯೋಗಿಗಳ ವಜಾ ಮಾಡಿದೆ. ಒರಾಕಲ್ (Oracle) ಕಂಪನಿಯು ಜಾಗತಿಕವಾಗಿ ಅಂದಾಜು 20,000 ದಿಂದ 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮೆಟಾ, ಮೈಕ್ರೋಸಾಫ್ಟ್, ಡಿಸ್ನಿ, ಎಎಸ್‌ಎಮ್‌ಎಲ್ ಕಂಪನಿಗಳು ಉದ್ಯೋಗ ಕಡಿತ ಮಾಡಲಿವೆ.

24
ಹಿರಿಯ ಉದ್ಯೋಗಿ ವಜಾ

ಕಂಪನಿಗಳು ಕೃತಕ ಬುದ್ಧಿಮತ್ತೆಯಲ್ಲಿ ಬೃಹತ್ ಹೂಡಿಕೆ ಮಾಡುತ್ತಿವೆ. ಇದರಿಂದ ಹೆಚ್ಚು ಲಾಭ ಬರುತ್ತಿದೆ, ಆದರೆ ದಶಕಗಳಿಂದ ಕೆಲಸ ಮಾಡುತ್ತಿದ್ದವರು ಮನೆಗೆ ಹೋಗುತ್ತಿದ್ದಾರೆ. ಒರಾಕಲ್‌ನಲ್ಲಿ 33 ವರ್ಷ ಕೆಲಸ ಮಾಡಿದ ಹಿರಿಯ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. 

34
ಸಿಬ್ಬಂದಿಯಲ್ಲಿ ಇಳಿಕೆ

ಭಾರತದಲ್ಲಿ ಆಕ್ಸಿಸ್ ಬ್ಯಾಂಕ್‌ ಸಹ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು, ತನ್ನ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. 2026ರಲ್ಲಿ 3,100ರಷ್ಟು ಉದ್ಯೋಗಿಗಳ ಸಂಖ್ಯೆ ಕುಸಿದಿದೆ.

44
ಬೃಹತ್‌ ಲಾಭ

ಈಗ ಬ್ಯಾಂಕ್‌ನಲ್ಲಿ ಸಿಬ್ಬಂದಿ ಸಂಖ್ಯೆ ಇಳಿಕೆಯಾಗಿದ್ದರೂ ಬ್ಯಾಂಕ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಇದೇ ಅವಧಿಯಲ್ಲಿ ಸುಮಾರು 400 ಹೊಸ ಶಾಖೆಗಳನ್ನು ತೆರೆಯಲಾಗಿದ್ದು, ₹7,071 ಕೋಟಿಗಳಷ್ಟು ಬೃಹತ್ ಲಾಭ ಮಾಡಿದೆ

Read more Photos on
click me!

Recommended Stories