ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ NDA ಜತೆ ಮೈತ್ರಿ ಮಾಡಿಕೊಂಡರೆ ದಳಪತಿ ವಿಜಯ್ ಅವರಿಗೆ ಬಿಜೆಪಿ 80 ಸ್ಥಾನ ಹಾಗೂ ಡಿಸಿಎಂ ಹುದ್ದೆ ನೀಡುವುದಾಗಿ ಆಫರ್ ನೀಡಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ವಿಜಯ್ ಗೆಳತಿ ಹಾಗೂ ನಟಿ ಅಮಿತ್ ಶಾರನ್ನು ಭೇಟಿಯಾಗಿದ್ದಾರೆಂದು ವರದಿಯಾಗಿದೆ.
ಸ್ಟಾರ್ ನಟಿ ತ್ರಿಷಾ ಸುತ್ತ ಇದೀಗ ರಾಜಕೀಯದ ವದಂತಿಗಳು ಹರಿದಾಡುತ್ತಿವೆ. ನಟ ವಿಜಯ್ ಮತ್ತು ತ್ರಿಷಾ ನಡುವಿನ ಅಫೇರ್ ಸುದ್ದಿ ಈ ಚರ್ಚೆಗಳಿಗೆ ಕಾರಣವಾಗಿದೆ. ಇದು ಕೇವಲ ಕಾಲಿವುಡ್‌ಗೆ ಸೀಮಿತವಾಗಿಲ್ಲ, ತಮಿಳುನಾಡು ರಾಜಕೀಯದಲ್ಲೂ ಚರ್ಚೆಯ ವಿಷಯವಾಗಿದೆ. ಈ ವಿಚಾರ ಕೇವಲ ಅಫೇರ್‌ಗೆ ನಿಲ್ಲದೆ, ರಾಜಕೀಯದಲ್ಲೂ ಸಂಚಲನ ಮೂಡಿಸುತ್ತಿದೆ. ತ್ರಿಷಾ ಏನೋ ದೊಡ್ಡ ಪ್ಲ್ಯಾನ್ ಮಾಡುತ್ತಿರುವಂತಿದೆ. ಇದರ ಹಿಂದೆ ನಟ ವಿಜಯ್ ಕೈವಾಡವಿದೆಯೇ ಎಂಬ ಅನುಮಾನ ಮೂಡಿದೆ. ಇನ್ನೊಂದೆಡೆ, ಪವನ್ ಕಲ್ಯಾಣ್ ಅವರ ತಂತ್ರವನ್ನೇ ಇವರು ಬಳಸುತ್ತಿದ್ದಾರಾ ಎಂಬ ಮಾತು ಕೇಳಿಬರುತ್ತಿದೆ.
26
ವಿಜಯ್ ವಿಚ್ಛೇದನಾ ಹಾದಿ ಹಿಡಿಯಲು ತ್ರಿಷಾ ಕಾರಣ?
ವಿಜಯ್ ಮತ್ತು ತ್ರಿಷಾ ನಡುವೆ ಅಫೇರ್ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರಿಂದಾಗಿ ದಳಪತಿ ವಿಜಯ್ ಅವರ ಪತ್ನಿ ಸಂಗೀತ, ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಅವರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ವಿಜಯ್‌ಗೆ ಒಬ್ಬ ನಟಿಯೊಂದಿಗೆ ಅಫೇರ್ ಇದೆ ಎಂದು ಆರೋಪಿಸಿದ್ದಾರಂತೆ. ಆ ನಟಿ ತ್ರಿಷಾ ಎಂದೇ ಹೇಳಲಾಗುತ್ತಿದೆ. ಇವರಿಬ್ಬರ ನಡುವಿನ ಅಫೇರ್ ಬಗ್ಗೆ ಬಹಳ ಕಾಲದಿಂದ ಸುದ್ದಿ ಇರುವುದರಿಂದ ಸಂಗೀತ ಅವರ ಆರೋಪಕ್ಕೆ ಮತ್ತಷ್ಟು ಬಲ ಬಂದಿದೆ. ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ.
36
ಎಂಜಿಆರ್-ಜಯಲಲಿತಾ ಹಾದಿ ಹಿಡಿದ್ರಾ ವಿಜಯ್-ತ್ರಿಷಾ?
ಈ ನಡುವೆ, ತ್ರಿಷಾ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಜೋರಾಗಿದೆ. ಎಂಜಿಆರ್ ಮತ್ತು ಜಯಲಲಿತಾ ಅವರಂತೆ ವಿಜಯ್ ಮತ್ತು ತ್ರಿಷಾ ರಾಜಕೀಯಕ್ಕೆ ಬರುತ್ತಿದ್ದು, ವಿಜಯ್‌ಗೆ ತ್ರಿಷಾ ಬೆಂಬಲವಾಗಿ ನಿಲ್ಲಲಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಅವರು ಯಾವುದೇ ಹೊಸ ಸಿನಿಮಾಗೆ ಸಹಿ ಹಾಕಿಲ್ಲ. ರಾಜಕೀಯಕ್ಕೆ ಬರುವ ಸಲುವಾಗಿಯೇ ಅವರು ಸಿನಿಮಾ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಇದೇ ವಿಚಾರ ಈಗ ತಮಿಳುನಾಡು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎಂಜಿಆರ್ ರಾಜಕೀಯದಲ್ಲಿದ್ದಾಗ ಜಯಲಲಿತಾ ಅವರಿಗೆ ಬೆಂಬಲ ನೀಡಿದ್ದರು. ಅವರ ಮರಣದ ನಂತರ ಜಯಲಲಿತಾ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಇಳಿದು, ಸಿಎಂ ಆಗಿ ತಮಿಳುನಾಡನ್ನು ಆಳಿದರು. ಈಗ ತ್ರಿಷಾ ಕೂಡ ಇದೇ ತಂತ್ರ ಅನುಸರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
56
ಅಮಿತ್ ಶಾ ಭೇಟಿಯಾದ ತ್ರಿಷಾ?
ಇನ್ನೊಂದೆಡೆ, ತ್ರಿಷಾಗೆ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ಸುದ್ದಿ ಕೇಳಿಬರುತ್ತಿದೆ. ಅವರು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಚುನಾವಣೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿ ದೊಡ್ಡ ಸಂಚಲನ ಸೃಷ್ಟಿಸಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೆಲ್ಲದರ ಹಿಂದೆ ವಿಜಯ್ ಆಟವಾಡುತ್ತಿದ್ದಾರಾ? ಎಂಬ ಮಾತು ಕೂಡ ಕೇಳಿಬರುತ್ತಿದೆ. ವಿಜಯ್ ಸ್ಥಾಪಿಸಿರುವ ಟಿವಿಕೆ ಪಕ್ಷವು ಈ ಬಾರಿ ಬಿಜೆಪಿ ಮತ್ತು ಎಐಎಡಿಎಂಕೆ ಜೊತೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಅದರ ಭಾಗವಾಗಿಯೇ ತ್ರಿಷಾ, ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಸತ್ಯಾಂಶ ಎಷ್ಟಿದೆ ಎಂಬುದು ತಿಳಿಯಬೇಕಿದೆ.
66
ಪವನ್ ಕಲ್ಯಾಣ್ ಅವರ ತಂತ್ರ ಫಾಲೋ ಮಾಡುತ್ತಿರುವ ವಿಜಯ್
ವಿಜಯ್ ಕೂಡ ಪವನ್ ಕಲ್ಯಾಣ್ ಅವರ ತಂತ್ರವನ್ನೇ ಅನುಸರಿಸುತ್ತಿರುವಂತೆ ಕಾಣುತ್ತಿದೆ. ಪವನ್ ಕಲ್ಯಾಣ್ ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದರು. ವಿಜಯ್ ಕೂಡ ತ್ರಿಷಾ ಅವರನ್ನು ಬಳಸಿಕೊಂಡು ಇದೇ ತಂತ್ರವನ್ನು ಜಾರಿಗೆ ತರುತ್ತಿದ್ದಾರಾ? ಎಂಬುದು ಕುತೂಹಲ ಮೂಡಿಸಿದೆ. ಇದರಲ್ಲಿ ಸತ್ಯ ಎಷ್ಟು? ತ್ರಿಷಾ ಸುತ್ತ ನಡೆಯುತ್ತಿರುವ ಈ ರಾಜಕೀಯದಲ್ಲಿ ನಿಜವೆಷ್ಟು? ತ್ರಿಷಾ ನಿಜವಾಗಿಯೂ ರಾಜಕೀಯಕ್ಕೆ ಬರುತ್ತಾರಾ ಎಂಬುದು ತಿಳಿಯಬೇಕಿದೆ. ಆದರೆ, ಇವರಿಗೆ ಸಂಬಂಧಿಸಿದ ಬೆಳವಣಿಗೆಗಳು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.