ಮಾತು ಮಾತಿನಲ್ಲಿಯೂ ದಳಪತಿಗಳಿಗೆ ತಿವಿದು, ಮಹತ್ವದ ಸುಳಿವು ಕೊಟ್ಟ ಶಾಸಕ ಜಿ.ಟಿ.ದೇವೇಗೌಡ

Published : Mar 18, 2026, 09:37 AM IST

ಶಾಸಕ ಜಿ.ಟಿ.ದೇವೇಗೌಡರು ಮೈಸೂರು ಭಾಗದಲ್ಲಿ ತಾವೇ ಏಕಾಂಗಿಯಾಗಿ ಜೆಡಿಎಸ್ ಪಕ್ಷವನ್ನು ಕಟ್ಟಿದ್ದಾಗಿ ಹೇಳುವ ಮೂಲಕ ದಳಪತಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಮ್ಮನ್ನು ಬೆಳೆಸಿದವರೇ ಕಳೆದ ಚುನಾವಣೆಯಲ್ಲಿ ವಿರೋಧ ಮಾಡಿದರು, ಆದರೂ ಕ್ಷೇತ್ರದ ಜನ ಕೈಬಿಡಲಿಲ್ಲ ಎಂದಿದ್ದಾರೆ.

PREV
15
ದಳಪತಿಗಳ ವಿರುದ್ಧ ಜಿಟಿಡಿ ಅಸಮಾಧಾನ

ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಏಕಾಂಗಿ ಜೆಡಿಎಸ್ ಪಕ್ಷವನ್ನ ಕಟ್ಟಿದ್ದೇನೆ. ಸಾ ರಾ ಮಹೇಶ್ ಬಿಜೆಪಿಯಲ್ಲಿದ್ರು, ಮಹದೇವ್ ವೆಂಕಟೇಶ್ ಜೊತೆಯಲ್ಲಿದ್ರು, ಅಶ್ವಿನ್ ಊರಿನಲ್ಲೇ ಇರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಒಂದೇ ಒಂದು ಸಣ್ಣ ಚುನಾವಣೆಯಲ್ಲೂ ಸೋತಿಲ್ಲ ಎಂದು ಹೇಳುವ ಮೂಲಕ ದಳಪತಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಟಾಂಗ್ ಕೊಟ್ಟಿದ್ದಾರೆ.

25
ಹೆಚ್‌ಡಿಡಿ ಹೀಗೆ ಹೇಳಿದ್ರಾ?

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜಯಪುರ ಗ್ರಾಮದಲ್ಲಿ ಮಾತನಾಡಿರುವ ಜಿ.ಟಿ.ದೇವೇಗೌಡರು, 25 ಜನ ದೆಹಲಿಗೆ ಹೋಗಿ ಎಚ್.ಡಿ ದೇವೇಗೌಡರನ್ನ ಭೇಟಿಯಾಗಿದ್ದಾರೆ. ಭೇಟಿಯ ವೇಳೆ ಜಿ.ಟಿ ದೇವೇಗೌಡ ವಿರೋದ ಪಕ್ಷದ ನಾಯಕರಾಗಿದ್ರೆ ಯಾವ ರೀತಿ ಮಾತನಾಡುತ್ತಿದ್ರ ಎಂಬುದು ಗೊತ್ತಿದೆ. ನಮ್ಮ ಪಕ್ಷದ ಧ್ವನಿ ಸದನದೊಳಗೆ ಇಲ್ಲ ಎಂಬುದನ್ನು ದೇವೇಗೌಡರ ಹೇಳಿದ್ದಾರೆ. ಜಿ.ಟಿ ದೇವೇಗೌಡರ ಬಗ್ಗೆ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಎಚ್.ಡಿ ದೇವೇಗೌಡರೇ ಬೇಸರ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿದ್ರು.

35
ಮತದಾರರು ನನ್ನನ್ನು ಕೈ ಬಿಟ್ಟಿಲ್ಲ

ನನ್ನ ಕ್ಷೇತ್ರದ ಜನ ನನ್ನನ್ನ ಎಂದಿಗೂ ಕೈ ಬಿಟ್ಟಿಲ್ಲ. ಜೊತೆಯಲ್ಲಿದ್ದವರು ಕೈ ಬಿಟ್ಟರು ಕ್ಷೇತ್ರದ ಮತದಾರರು ಕೈ ಬಿಟ್ಟಿಲ್ಲ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆ ನಿಂತಾಗ ಜನ ಕೈ ಬಿಡಲಿಲ್ಲ. ಕಳೆದ ಚುನಾವಣೆಯಲ್ಲಿ ನಾನು ಬೆಳೆಸಿದವರೇ ನನ್ನ ವಿರುದ್ಧ ಚುನಾವಣೆ ಮಾಡಿದ್ರು. ಅವಾಗಲೂ ಮತದಾರರು ನನ್ನ ಕೈ ಬಿಟ್ಟಿಲ್ಲ. ಜಿ.ಪಂ ಚುನಾವಣೆಯಲ್ಲಿ ಕೆ.ಅರ್ ನಗರದಿಂದ ಗೆದಿದ್ದು ಜೆಡಿಎಸ್ ಬರಿ ಎರಡು ಕ್ಷೇತ್ರ, ಚಾಮುಂಡೇಶ್ವರಿ ಕ್ಷೇತ್ರದಿಂದ 7 ಸ್ಥಾನ ಗೆಲ್ಲಿಸಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಟಾಂಗ್ ನೀಡಿದರು.

45
ಹುಣಸೂರಿನಿಂದಲೇ ಮಗನ ಸ್ಪರ್ಧೆ?

ಚಾಮುಂಡೇಶ್ವರಿ ಕ್ಷೇತ್ರವನ್ನ ಮಗನಿಗೆ ಜಿ.ಟಿ ದೇವೇಗೌಡರು ಬಿಟ್ಟು ಕೊಡುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿದೆ. ಹುಣಸೂರಿನಲ್ಲಿ 25-30 ವರ್ಷ ದುಡಿದಿರುವ ಕಾರಣ ಹರೀಶ್ ಗೌಡ ಶಾಸಕರಾಗಿದ್ದಾರೆ. ಹುಣಸೂರಿನಲ್ಲಿ ಜನರು ಹರೀಶ್ ಗೌಡನ ರಿಜೆಕ್ಟ್ ಮಾಡಿಲ್ಲ. ಮುಂದಿನ ಬಾರಿಯೂ ಹುಣಸೂರಿನಲ್ಲಿ ಹರೀಶ್ ಗೌಡ ಎಂಎಲ್ಎ ಆಗುತ್ತಾರೆ ಎಂದು ಜಿ.ಟಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿ, ಮಗ ಚಾಮುಂಡೇಶ್ವರಿಗೆ ಬರಲ್ಲ ಎಂಬುದರ ಸುಳಿವು ನೀಡಿದರು.

ಇದನ್ನೂ ಓದಿ: ಏನ್ ಮಾಡಕತ್ತೀ ಮೇಂಬರವ್ವಾ ಅಂತಾ ಮಂದಿ ಮನೀಗೆ ಬರ್ತಾರಿ: ಪಂಚಾಯಿತಿ ಸಭೆಯಲ್ಲಿ ಆಕ್ರೋಶ

55
ಕುಮಾರಸ್ವಾಮಿಗೆ ಕುಮಾರಪರ್ವ

ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನ ಚುನಾವಣೆಗೆ ನಿಲ್ಲಿ ಎಂದರೇ ನಿಲ್ಲುತ್ತೇನೆ ಬೇಡ ಎಂದರೇ ಬಿಟ್ಟು ಬಿಡುತ್ತೇನೆ. ದಳ ಬಿಟ್ಟು ಬಿಜೆಪಿಗೆ ಹೋದಾಗ ಯಡಿಯೂರಪ್ಪ ಸಿಎಂ ಆಗಬೇಕು ಎಂದು ಘೋಷಣೆ ಮಾಡಿದ್ದೆ, ಹಾಗೆಯೇ ಯಡಿಯೂರಪ್ಪ ಸಿಎಂ ಆದ್ರು. ಸಿದ್ದರಾಮಯ್ಯ ಕುಮಾರಸ್ವಾಮಿಗೂ ಅಷ್ಟೆ. ಕುಮಾರಸ್ವಾಮಿಗೆ ಕುಮಾರ ಪರ್ವ ಮಾಡಿದ್ದೇನೆ. ನಾನು ಹೇಳಿದ ಹಾಗೇ ಜನರು ನನಗೆ ಸಪೋರ್ಟ್ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಮೈಸೂರು ದಳಪತಿಗಳ ಅಂಗಳದಲ್ಲಿ ಸಂಚಲನ; ಹೊಸ ದಾಳ ಉರುಳಿಸಿದ JDS ಶಾಸಕ ಜಿಟಿ ದೇವೇಗೌಡ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories