ಕಾಂಗ್ರೆಸ್‌ನಲ್ಲಿ ಅತೃಪ್ತ ಆತ್ಮಗಳು ತುಂಬಿವೆ: ರಾಮಲಿಂಗಾ ರೆಡ್ಡಿ ಬಗ್ಗೆ ಕೆ.ಎಸ್.ಈಶ್ವರಪ್ಪ ವ್ಯಂಗ್ಯ

Published : Jun 06, 2026, 12:27 AM IST

ಕಾಂಗ್ರೆಸ್‌ನಲ್ಲಿ ಅತೃಪ್ತ ಆತ್ಮಗಳು ತುಂಬಾ ಇವೆ. ರಾಮಲಿಂಗಾ ರೆಡ್ಡಿ ಮೂಲಕ ಮೊದಲ ಆತ್ಮ ಹೊರಗೆ ಬಂದಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ..

PREV
14
ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ (ಜೂ.06): ಕಾಂಗ್ರೆಸ್‌ನಲ್ಲಿ ಅತೃಪ್ತ ಆತ್ಮಗಳು ತುಂಬಾ ಇವೆ. ರಾಮಲಿಂಗಾ ರೆಡ್ಡಿ ಮೂಲಕ ಮೊದಲ ಆತ್ಮ ಹೊರಗೆ ಬಂದಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಕೆಲವರಿಗೆ ಬೇರೆಯವರು ಅಧಿಕಾರದಲ್ಲಿ ಕೂರುವುದು ನೋಡೋಕೆ ಸಮಾಧಾನ ಇಲ್ಲ.

24
2 ವರ್ಷ ಪೂರೈಸಲ್ಲ

ಕೆಲವರು ತಾವು ಅಧಿಕಾರ ಬಿಡೋಕೆ ತಯಾರಿರಲ್ಲ. ಕಾಂಗ್ರೆಸ್‌ನ ಈಗಿನ ಪರಿಸ್ಥಿತಿ ನೋಡಿದರೆ ಈ ಸರ್ಕಾರ ಖಂಡಿತ 2 ವರ್ಷ ಪೂರೈಸಲ್ಲ ಎಂದು ಭವಿಷ್ಯ ನುಡಿದರು. ಕೆಲವರಿಗೆ ಅವರೇ ಅಧಿಕಾರದಲ್ಲಿರಬೇಕು ಎಂಬ ಅಪೇಕ್ಷೆ. ಪೂರ್ಣ ವಿವರ ಯಾರು, ಏನು ಎಂಬುದು ತಾನಾಗೇ ಹೊರಬರುತ್ತೆ.

34
ಆದಷ್ಟು ಬೇಗ ಹೊರಬರುತ್ತೆ

ರಾಮಲಿಂಗಾ ರೆಡ್ಡಿ ರಾಜೀನಾಮೆ ವಿಚಾರ ಅದು ಅವರೊಬ್ಬರ ತೀರ್ಮಾನ ಅಲ್ಲ. ಈ ಎಲ್ಲಾ ಬೆಳವಣಿಗೆ ಹಿಂದೆ ಬೇರೆಯವರು ಇದ್ದಾರೆ. ಆದಷ್ಟು ಬೇಗ ಹೊರಬರುತ್ತೆ. ಇದರ ಹಿಂದೆ ಯಾರಿದ್ದಾರೆ ಅನ್ನೋದು ಮುಂದೆ ಹೇಳ್ತಿನಿ ಎಂದು ಹೇಳಿದರು. ನಾನು ತುಂಬಾ ಸ್ಪಷ್ಟವಾಗಿ ಹೇಳ್ತೇನೆ.

44
ಹಿಂದುತ್ವದ ಸರ್ಕಾರ ಅಧಿಕಾರಕ್ಕೆ

ಬಹಳ ಬೇಗ ಚುನಾವಣೆ ಬರುತ್ತೆ. ಎಲ್ಲಾ ಹಿಂದುತ್ವವಾದಿಗಳು ಒಂದಾಗಬೇಕು. ರಾಜ್ಯದಲ್ಲಿ ಹಿಂದುತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಪ್ರತಿಕ್ರಿಯಿಸಿದರು. ನೀವು ಯಾವಾಗ ಬಿಜೆಪಿ ಸೇರುತ್ತೀರಿ ಎಂಬ ಪ್ರಶ್ನೆಗೆ, ಕಾಲ ಬರಲಿ ನೋಡೋಣ. ನಾನು ಕಾಯುತ್ತಾ ಇದ್ದೇನೆ ಎಂದು ಉತ್ತರಿಸಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories