Breaking: ಸಚಿವ ರಾಮಲಿಂಗಾ ರೆಡ್ಡಿ, ಮುನಿಯಪ್ಪ ಬಳಿಕ ಈಗ ಮತ್ತೊಬ್ಬ ಸಚಿವ ಅಸಮಾಧಾನ!

Published : Jun 05, 2026, 01:41 PM ISTUpdated : Jun 05, 2026, 01:56 PM IST

ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಆರಂಭದಲ್ಲೇ ಸಂಕಷ್ಟಗಳು ಎದುರಾಗುತ್ತಿವೆ. ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡು ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಕೆಎಚ್ ಮುನಿಯಪ್ಪ ಕೂಡ ಡಿಕೆಶಿ ನಡೆಗೆ ಅಸಮಾಧಾನ ಹೊರಹಾಕಿದ ಬೆನ್ನಲ್ಲೆ ಇದೀಗ ಕೆಜೆ ಜಾರ್ಜ್ ಕೂಡ ಅಸಮಾಧಾನ.

PREV
14
ಬಯಸದ ಖಾತೆ ಸಿಗದೆ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಆರಂಭದಲ್ಲೇ ಒಂದರಿಂದೊಂದು ಸಂಕಷ್ಟ ಎದುರಾಗುತ್ತಿವೆ. ಬಯಸಿದ ಖಾತೆ ಸಿಗದ್ದಕ್ಕೆ ಮನನೊಂದು ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಆಪ್ತರ ಮನವೊಲಿಕೆ ನಡುವೆಯೂ ರಾಜೀನಾಮೆ ನೀಡಿದರು. ಆ ಮೂಲಕ ಡಿಕೆ ನೇತೃತ್ವದ ನೂತನ ಸರ್ಕಾರದ ಮೊದಲ ವಿಕೆಟ್ ಪತನವಾಯಿತು.

24
ಹಿರಿತನ ಪರಿಗಣಿಸಿಲ್ಲ: ಕೆಎಚ್ ಮುನಿಯಪ್ಪ ಅಸಮಾಧಾನ

ರಾಮಲಿಂಗಾ ರೆಡ್ಡಿ ಅವರು ಖಾತೆ ಹಂಚಿಕೆ ಅಸಮಾಧಾನಕ್ಕೆ ಕಾರಣವಾಗಿ ರಾಜೀನಾಮೆ ನೀಡಿದರು. ಇದರ ಬಳಿಕ ಕೆಎಚ್‌ ಮುನಿಯಪ್ಪ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೂತನ ಸಂಪುಟದಲ್ಲಿ ಹಿರಿಯರಿಗೆ ತಕ್ಕ ಗೌರವ ಸಿಕ್ಕಿಲ್ಲ ಹಿರಿತನ ಪರಿಗಣಿಸದೇ ಖಾತೆ ನೀಡಲಾಗಿದೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ ಇಂದು ಬೆಂಗಳೂರಿಗೆ ಅಗಮಿಸಿದ ರಾಹುಲ್ ಗಾಂಧಿಯವರನ್ನ ಏರ್ಪೋರ್ಟ್‌ನಲ್ಲೇ ಭೇಟಿಯಾಗಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.

34
ಕೆಪಿಟಿಸಿಎಲ್ ಎಂಡಿ ಆಗಿ ರಾಜೇಂದ್ರ ಚೋಳನ್ ನೇಮಕ: ಜಾರ್ಜ್ ಅಸಮಾಧಾನ?

ಸಚಿವ ರಾಮಲಿಂಗಾ ರೆಡ್ಡಿ, ಮುನಿಯಪ್ಪ ಬಳಿಕ ಇದೀಗ ಮತ್ತೊಬ್ಬ ಸಚಿವ ಕೆಜೆ ಜಾರ್ಜ್ ಕೂಡಮುಖ್ಯಮಂತ್ರಿ  ಡಿಕೆ ಶಿವಕುಮಾರ್ ನಡೆಗೆ ಅಸಮಾಧಾನಗೊಂಡಿದ್ದಾರೆ. ಅಧಿಕಾರಿಗಳ ನೇಮಕ ವಿಚಾರಕ್ಕೆ ಅಸಾಮಾಧಾನಗೊಂಡಿರುವ ಕೆಜೆ ಜಾರ್ಜ್. ಕೆಪಿಟಿಸಿಎಲ್ ಎಂಡಿ ಆಗಿ ರಾಜೇಂದ್ರ ಚೋಳನ್ ನೇಮಕವಾಗಿದೆ. ಈ ಮೊದಲು ಕೆಪಿಟಿಸಿಎಲ್ ಎಂಡಿ ಆಗಿದ್ದ ಗೌರವ್ ಗುಪ್ತಾ ಅವರನ್ನ ಎತ್ತಂಗಡಿ ಮಾಡಲಾಗಿದೆ.

44
ಕೆಪಿಟಿಸಿಎಲ್‌ಗೆ ನಮಗೆ ಅಧಿಕಾರಿ ನೇಮಕ ಆಗಬೇಕು

ರಾಜೇಂದ್ರ ಚೋಳನ್‌ಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಜೊತೆಗೆ ಕೆಪಿಟಿಸಿಎಲ್ ಎಂಡಿ ಆಗಿ ನೇಮಕ. ಈ ಹಿಂದೆ ಇದ್ದ ಗೌರವ ಗುಪ್ತ ಎತ್ತಂಗಡಿ ಆಗಿದ್ದಕ್ಕೆ ಕೆಜೆ ಜಾರ್ಜ್ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ತಮ್ಮ ಗಮನಕ್ಕೆ ತರದೇ ಸಿಎಂ ಡಿಕೆ ಶಿವಕುಮಾರ್ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಬೇಸರಗೊಂಡಿರುವ ಜಾರ್ಜ್, ಕೆಪಿಟಿಸಿಎಲ್‌ಗೆ ತಮಗೆ ಬೇಕಾದ ಅಧಿಕಾರಿ ನೇಮಕಕ್ಕೆ ಪಟ್ಟು ಹಿಡಿದಿದ್ದಾರೆ.

ಖಾತೆ ಹಂಚಿಕೆಗೂ ಮುನ್ನವೇ ತಮ್ಮ ಆಪ್ತ ಅಧಿಕಾರಿಯನ್ನ ಕೆಪಿಸಿಎಲ್ ಗೆ ನೇಮಕ ಮಾಡಿ ಆದೇಶ? ಜೂನ್ 3 ರಂದು ಕೆಪಿಸಿಎಲ್ MD ಆಗಿ ನೇಮಕ ಮಾಡಿ ಸಿಎಂ ಆದೇಶ ಹೊರಡಿಸಿರುವ ಸಚಿವ ಜಾರ್ಜ್ ಅಸಮಾಧಾನಕ್ಕೆ ಕಾರಣ?

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories