ನವೆಂಬರ್ ಕ್ರಾಂತಿ ಅಂದ್ರೆ ನಿತಿನ್ ಗಡ್ಕರಿ ಪ್ರಧಾನಿ ಆಗೋದಾ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ

Published : Oct 14, 2025, 11:23 AM IST

ನವೆಂಬರ್‌ನಲ್ಲಿ ನಿತಿನ್ ಗಡ್ಕರಿ ಪ್ರಧಾನಿಯಾಗುವ ಮೂಲಕ 'ನವೆಂಬರ್ ಕ್ರಾಂತಿ' ಆಗಬಹುದು ಎಂದು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಇದೇ ವೇಳೆ, ಸರ್ದಾರ್ ಪಟೇಲರೇ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿದ್ದನ್ನು ನೆನಪಿಸಿ, ಸಂಪುಟ ಪುನಾರಚನೆ ಚರ್ಚೆನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

PREV
15
ನವೆಂಬರ್ ಕ್ರಾಂತಿಯ ಚರ್ಚೆ

ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ಶುರುವಾಗಿದೆ. ಇಂದು ಬೀದರ್ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ನವೆಂಬರ್ ಕ್ರಾಂತಿ ಅಂದ್ರೆ ನಿತಿನ್ ಗಡ್ಕರಿ ಪ್ರಧಾನಿ ಆಗಬಹುದು ಅಲ್ಲಾ ಎಂಬ ಹೊಸ ವ್ಯಾಖ್ಯಾನ ನೀಡಿದ್ದಾರೆ. ನವೆಂಬರ್‌ನಲ್ಲಿ ನಿತಿನ್ ಗಡ್ಕರಿ ಪ್ರಧಾನಿಯಾಗಿ ಕ್ರಾಂತಿ ಆಗಬಹುದು ಎಂದಿದ್ದಾರೆ.

25
ನಿತಿನ್ ಗಡ್ಕರಿ

ಕೇಂದ್ರ ಸಚಿವರಾಗಿರುವ ನಿತಿನ್ ಗಡ್ಕರಿ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಅವರೇ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ಸಂತೋಷ್ ಲಾಡ್ ಹೇಳಿದರು. ಮುಂದುವರಿದು ಸಚಿವ ಪ್ರಿಯಾಂಕ್ ಖರ್ಗೆ ಪತ್ರದ ಬಗ್ಗೆಯೂ ಸಂತೋಷ್ ಲಾಡ್ ಪ್ರತಿಕ್ರಿಯಿಸಿದರು.

35
ಆರ್‌ಎಸ್‌ಎಸ್ ಬ್ಯಾನ್

ಸರ್ದಾರ ವಲ್ಲಭಭಾಯಿ ಪಟೇಲ್ ಎರಡು ಬಾರಿ ಆರ್‌ಎಸ್‌ಎಸ್ ಬ್ಯಾನ್ ಮಾಡಿದ್ದರು. ಬಿಜೆಪಿ ಅವರೇ ಸರ್ದಾರ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು 3 ಸಾವಿರ ಕೋಟಿ ರೂ. ಖರ್ಚು ಮಾಡಿ ಸ್ಥಾಪನೆ ಮಾಡಿದ್ದಾರೆ. ಸರ್ದಾರ ವಲ್ಲಭಭಾಯಿ ಪಟೇಲ್ ಅವರು ಕಾಂಗ್ರೆಸ್ಸಿಗರು ಮತ್ತು ಗೃಹಸಚಿವರಾಗಿದ್ದವರು ಎಂಬುವುದು ಬಿಜೆಪಿ ಗಮನಕ್ಕಿರಲಿ. ದೇಶ ಪ್ರೇಮ ಅನ್ನೋದು ಪ್ರತಿಯೊಬ್ಬರಲ್ಲಿಯೂ ಇದೆ. ಭಾರತ ದೇಶದಲ್ಲಿದ್ದರೆ ಎಲ್ಲರೂ ದೇಶ ಪ್ರೇಮಿಗಳ. ಹಿಂದೂ, ಸಿಖ್, ಇಸಾಯಿ, ಮುಸ್ಲಿಂ ಎಲ್ಲರೂ ದೇಶ ಪ್ರೇಮಿಗಳು ಎಂದು ಸಂತೋಷ್ ಲಾಡ್ ಹೇಳಿದರು.

45
ಸಂಪುಟ ಪುನಾರಚನೆ

ಮುಖ್ಯಮಂತ್ರಿಗಳು ಪ್ರತಿ ವರ್ಷವೂ ಸೌಹಾರ್ದಯುತವಾದ ಸಭೆಯನ್ನು ಮಾಡುತ್ತಾರೆ. ಸೌಜನ್ಯಕ್ಕಾಗಿ ಎಲ್ಲರೂ ಸಭೆಗೆ ಹೋಗುತ್ತಾರೆ. ನಾನು ಸಹ ಸಭೆಗೆ ಹೋಗಿದ್ದೆ. ಅಲ್ಲಿ ಯಾವುದೇ ಸಂಪುಟ ಪುನಾರಚನೆ ಚರ್ಚೆಗಳು ನಡೆದಿಲ್ಲ. ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಲು ಸಿಎಂ ಮತ್ತು ಡಿಸಿಎಂ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಇದೆಲ್ಲರ ಜೊತೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನ ಫೈನಲ್ ಆಗುತ್ತೆ ಎಂದು ಸಂತೋಷ್ ಲಾಡ್ ತಿಳಿಸಿದರು.

 ಇದನ್ನೂ ಓದಿ: ಎರಡೇ ದಿನದಲ್ಲಿ ನಿಕೇತ್ ರಾಜ್ ಮೌರ್ಯಗೆ ಕೊಕ್, ಬಿಎಂಟಿಸಿ ಚುಕ್ಕಾಣಿ ಬದಲಿಸಿದ ಸಿಎಂ, ನಿಗಮ ಮಂಡಳಿಗಳಲ್ಲಿ ಮಹತ್ವದ ಬದಲಾವಣೆ

55
ನಮ್ಮ ಗ್ಯಾರಂಟಿ

ಈಗ ನಮ್ಮ ಗ್ಯಾರಂಟಿ ಇಟ್ಟುಕೊಂಡೇ ಪ್ರಧಾನಿ ಮೋದಿ ಸಾಹೇಬ್ರು ಎಲ್ಲಾ ಕಡೆ ತಿರುಗಾಡುತ್ತಿದ್ದಾರೆ. ಬಿಹಾರ ಮಹಿಳೆಯರಿಗೆ 10 ಸಾವಿರ ರೂಪಾಯಿ ನೀಡುತ್ತಿದ್ದಾರೆ. 10 ಸಾವಿರ ರೂಪಾಯಿ ಕೊಟ್ಟು ಪ್ರಧಾನಿಗಳು ಮತ ಹಾಕಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಇದಕ್ಕಿಂತ ಒಳ್ಳೆಯ ಕಾರ್ಯಕ್ರಮ ಇದೆಯಾ ಎಂದು ಸಂತೋಷ್ ಲಾಡ್ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಬೆಂಗಳೂರಿನ ರಸ್ತೆಗಳ ದುಸ್ಥಿತಿ ಬಗ್ಗೆ ಕಿರಣ್ ಮಜುಂದಾರ್ ಅಸಮಾಧಾನ: ಉದ್ಯಮಿಯ ಟ್ವಿಟ್‌ಗೆ ಎಂಬಿ ಪಾಟೀಲ್ ಗರಂ

Read more Photos on
click me!

Recommended Stories