ಶಾಸಕ ಮುನಿರತ್ನರನ್ನು ಡಿಸಿಎಂ ಡಿಕೆ ಶಿವಕುಮಾರ್ 'ಕರಿ ಟೋಪಿ' ಎಂದು ಕರೆದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಅವಮಾನದಿಂದ ಆಕ್ರೋಶಗೊಂಡ ಮುನಿರತ್ನ, ಡಿಕೆಶಿ ತಮ್ಮನ್ನು ಕೊಲೆ ಮಾಡುತ್ತಾರೆ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಮುಗಿಸಲು ಕೇರಳದಲ್ಲಿ ಮಾಟ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಬೆಂಗಳೂರು: ಗಣವೇಷಧಾರಿಯಾಗಿದ್ದ ಶಾಸಕ ಮುನಿರತ್ನರನ್ನು ಏಯ್ ಕರಿ ಟೋಪಿ ಬಾ ಇಲ್ಲಿ ಎಂದು ವೇದಿಕೆ ಮೇಲಿನಿಂದಲೇ ಕರೆದ ಡಿಕೆ ಶಿವಕುಮಾರ್ ವಿರುದ್ಧ ಶಾಸಕ ಮುನಿರತ್ನ ಆಕ್ರೋಶ ವ್ಯಕ್ತ ಪಡಿಸಿ ಧರಣಿ ನಡೆಸಿದರು. ಡಿಸಿಎಂ ಹೇಳಿಕೆಗೆ ಮುನಿರತ್ನ ಕೆಂಡವಾದರು. ಇದೀಗ ಈ ಬಗ್ಗೆ ಹೇಳಿಕೆ ನೀಡಿ ಡಿಕೆಶಿ ಸಿದ್ದರಾಮಯ್ಯ ಅವರನ್ನು ಮುಗಿಸಲು ಕೇರಳದಲ್ಲಿ ಮಾಠ ಮಾಡಿಸಿದ್ದಾರೆ. ಈ ಬಗ್ಗೆ ನನಗೆ ಗೊತ್ತಿದೆ. ಜೊತೆಗೆ ಕೋಣ, ಹಂದಿ ಬಲಿ ಕೊಟ್ಟಿದ್ದಾರೆ. ಡಿಕೆಶಿ ನನ್ನನ್ನು ಕೊಲೆ ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
26
ಆಹ್ವಾನ ಇಲ್ಲದೆ ಬಂದಿದ್ದ ಮುನಿರತ್ನ
ಅಕ್ಟೋಬರ್ 12ರಂದು ಬೆಂಗಳೂರಿನ ಮತ್ತಿಕೆರೆ ಬಳಿಯ ಜೆಪಿ ಪಾರ್ಕ್‌ನಲ್ಲಿ ಡಿಕೆ ಶಿವಕುಮಾರ್ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದರು. ಇದೇ ಕಾರ್ಯಕ್ರಮಕ್ಕೆ ಮುನಿರತ್ನ, RSS ಪಥಸಂಚಲನ ಮುಗಿಸಿ ಸಾಮಾನ್ಯ ಜನರಂತೆ ಭಾಗಿಯಾಗಿದ್ದರು. ಡಿಕೆಶಿ ವಾಕಿಂಗ್ ಗೆ ಸಂಘದ ಗಣವೇಷದಲ್ಲೇ ಶಾಸಕ ಮುನಿರತ್ನ ಆಗಮಿಸಿದರು. ಈ ವೇಳೆ ಮೊದಲಿಗೆ ಮುನಿರತ್ನರನ್ನು ನೋಡಿಯೂ ನೋಡಿದಂತೆ ಡಿಕೆಶಿ ಹೋದರು. ತಮ್ಮ ಕ್ಷೇತ್ರದ ಪಾರ್ಕ್ ನಲ್ಲಿ ನಡೆಯುವತ್ತಿರುವ ಡಿಕೆಶಿ ಅವರ ನಡಿಗೆ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕನಾಗಿ ಮುನಿರತ್ನ ಆಗಮಸಿದ್ದರು. ಬಳಿಕ ಶಾಸಕ ಮುನಿರತ್ನ ಅವರನ್ನ ನೋಡಿ ಡಿಕೆಶಿ ಕೈ ಎತ್ತಿ ವಿಶ್ ಮಾಡಿದರು.
36
ಗಾಂಧಿ ಫೋಟೋ ಹಿಡಿದು ಧರಣಿ ಕುಳಿತ ಮುನಿರತ್ನ
ಯಾವುದೇ ಆಹ್ವಾನ ಇಲ್ಲದಿದ್ದರೂ ಶಾಸಕ ಮುನಿರತ್ನ ಬಂದು ಕುಳಿತಿದ್ದರು. ಅದ್ಯಾವಾಗ ಡಿಕೆ ಶಿವಕುಮಾರ್ ಏಯ್, ಕರಿ ಟೋಪಿ ಎಂಎಲ್ಎ ಬಾ ಇಲ್ಲಿ ಅಂದ್ರೋ ಮುನಿರತ್ನ ಪಿತ್ತ ನೆತ್ತಿಗೇರಿತು. ಮೈಕ್ ಕೈಗೆ ಎತ್ತಿಕೊಂಡ ಮುನಿರತ್ನ ಒಬ್ಬ ಶಾಸಕನಿಗೆ ಏನು ಗೌರವ ಕೊಡಬೇಕು ಅದನ್ನ ಕೊಟ್ಟಿದ್ದೀರಾ? ನನಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿಲ್ಲ. ಒಂದು ಎಂಪಿ , MLA ಫೋಟೋ ಇಲ್ಲ ಎಂದು ಡಿಕೆ ಸುಮ್ಮಖದಲ್ಲೇ ಅಧಿಕಾರಿಗಳ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದರು. ಕರಿ ಟೋಪಿ ಅಂತ ಕರೆದ್ದಿದ್ದಕ್ಕೆ ಮುನಿರತ್ನ ಜೆಪಿ ಪಾರ್ಕ್ ಮುಂದೆ ಗಾಂಧಿ ಫೋಟೋ ಹಿಡಿದು ಧರಣಿ ಕುಳಿತರು. ಈ ವೇಳೆ ಇತ್ತ ಸ್ಟೇಜ್ ನಲ್ಲೇ ಗಲಾಟೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಗಲಾಟೆಗಿಳಿದರು. ಇಲ್ಲಿ ರಾಜಕೀಯ ಮಾಡೋಕೆ ಬರಬೇಡಿ ಅಂತಾ ಗಲಾಟೆ ಮಾಡಿದರು.
ಇದಾದ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗೆ ಮಾತನಾಡಿದ ಮುನಿರತ್ನ ಅವರಿ ಡಿಕೆ ಶಿವಕುಮಾರ್ ಮೇಲೆ ಹಕ್ಕು ಚ್ಯುತಿ ಮಂಡಿಸುತ್ತೇನೆ. ನನ್ ಹಕ್ಕಿಗೆ ಚ್ಯುತಿ ಆಗಿದೆ. ಡಿಕೆ ಶಿವಕುಮಾರ್ ನನ್ನ ಕೊಲೆ ಮಾಡುತ್ತಾರೆ. ಹೇಗಿದ್ದರೂ ನನ್ನ ಸಾಯಿಸುತ್ತಾರೆ. ಹೀಗಾಗಿ ಹೆದರಿಕೊಂಡು ಕೂರೋದು ಯಾಕೆ ಎಂದು ವೇದಿಕೆಗೆ ಹೋಗಿದ್ದೇನೆ. ಸಾಯೋನಿಗೆ ಭಯ ಯಾಕೆ? ಎಂದು ಡಿಕೆ ಶಿವಕುಮಾರ್ ಮೇಲೆ ಮುನಿರತ್ನ ಗಂಭೀರ ಆರೋಪ ಮಾಡಿದರು.
56
ಸಿದ್ದರಾಮಯ್ಯ ಮೇಲೆ ಡಿಕೆಶಿ ಮಾಠ ಮಾಡಿಸಿದ್ದಾರೆ
ಸಿದ್ದರಾಮಯ್ಯ ಹಳೆ ಸಿದ್ದರಾಮಯ್ಯ ಅಲ್ಲ. ಸಿದ್ದರಾಮಯ್ಯನವರನ್ನು ಮುಗಿಸಬೇಕು ಎಂದು ಡಿಕೆ ಶಿವಕುಮಾರ್ ಕೇರಳದಲ್ಲಿ ಮಾಠ ಮಾಡಿಸಿದ್ದಾರೆ. ಕೋಣನ ಬಲಿ ಕೊಟ್ಟಿದ್ದಾರೆ. ಕಾಡು ಹಂದಿ ಬಲಿ ನೀಡಿದ್ದಾರೆ. ನನ್ನ ಬಳಿ ಮಾಹಿತಿ ಇದೆ. ಸಿದ್ದರಾಮಯ್ಯ ಮೇಲೆ ರೇಪ್ ಕೇಸ್ ಹಾಕೋಕೆ ಆಗಲ್ಲ. ಹೀಗಾಗಿ ಮಾಠ ಮಂತ್ರ ಮಾಡಿಸ್ತಾ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
66
ಡಿಕೆ ರವಿ ಸತ್ತು ನಂಗೆ ಸಮಸ್ಯೆ
ಡಿಕೆ ರವಿ ಸತ್ತು ನಂಗೆ ಸಮಸ್ಯೆ ಆಗಿದೆ. ಆ ಪುಣ್ಯಾತ್ಮ ಬದುಕಿದ್ರೆ ಹೀಗೆ ಆಗ್ತಿರಲಿಲ್ಲ. ಕುಸುಮಾಗೆ ಶಾಸಕ ಆಗುವ ಹುಚ್ಚು ಬಂದಿದೆ. ಅವರ ಹುಚ್ಚಿಗೆ ನಾನು ಬಲಿ ಆಗ್ತಾ ಇದ್ದೇನೆ. ಜೆಪಿ ಪಾರ್ಕ್ ಲ್ಲಿ ಕಾರ್ಯಕ್ರಮ, ನಾನು ವೇದಿಕೆಗೆ ಹೋಗಿರಲಿಲ್ಲ. ಆದರೆ ಏ ಕರಿ ಟೊಪ್ಪಿ ಎಂದ್ರು, ಇದು ಅವಮಾನ ಮಾಡಿದ್ದು. ಇದಕ್ಕೆ ನಾನು ಪ್ರತಿರೋಧ ವ್ಯಕ್ತಪಡಿಸಿದೆ. ನನಗೆ ಒದ್ದಿದ್ದಾರೆ, ನನ್ನ ಮೇಲೆ ಹಲ್ಲೆ ಆಗಿದೆ ಎಂದು ಮುನಿರತ್ನ ಹೇಳಿಕೆ ನೀಡಿದ್ದಾರೆ.