Tamannaah Bhatia: ಹೆಬ್ಬಾಳದ ಸಿಂಧಿ ಕಾಲೇಜು ಎಡವಟ್ಟು, 7ನೇ ತರಗತಿ ವಿದ್ಯಾರ್ಥಿಗಳಿಗೆ ನಟಿ ತಮನ್ನಾ ಬಗ್ಗೆ ಪಾಠ!

First Published | Jun 26, 2024, 5:43 PM IST

ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಿಂಧಿ ಕಾಲೇಜಿನಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೆ ನಟಿ ತಮನ್ನಾ ಕುರಿತಾಗಿ ಪಠ್ಯವನ್ನು ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಪೋಷಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Tamannaah Bhatia

ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಿಂಧಿ ಕಾಲೇಜು ವಿನಾಕಾರಣ ವಿವಾದ ಮೈಮೇಲೆ ಎಳೆದುಕೊಂಡಿದೆ. ಸಿಂಧಿ ಕಾಲೇಜಿನ 7ನೇ ತರಗತಿಯ ಪಠ್ಯದಲ್ಲಿ ನಟಿ ತಮನ್ನಾ ಕುರಿತಾಗಿ ಪಠ್ಯ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ತಮನ್ನಾ ಪಠ್ಯವನ್ನು ಸೇರ್ಪಡೆ ಮಾಡಿರುವುದಕ್ಕೆ ಹಲವಾರು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ನೀಡಿರುವ ಪಠ್ಯದ ತುಣುಕುಗಳು ಕೂಡ ಮಾಧ್ಯಮದಲ್ಲಿ ಪ್ರಸಾರವಾಗಿದೆ.

Tap to resize

ಸಿಂಧಿ ಕಾಲೇಜಿನ ಪಠ್ಯೇತರ ಪಠ್ಯದಲ್ಲಿ ತಮನ್ನಾ ಕುರಿತಾಗಿ ಪಾಠವನ್ನು ಸೇರಿಸಲಾಗಿದ್ದು, ಈ ಕುರಿತು ಹಲವು ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಿಂಧ್‌ ಸಮುದಾಯದಲ್ಲಿ ಬಗ್ಗೆ ತಿಳಿಸುವ ವೇಳೆ ತಮನ್ನಾ ಅವರ ಪಾಠವನ್ನು ಸೇರಿಸಲಾಗಿದೆ. ಅವರು ಹುಟ್ಟಿದ ದಿನ, ಅವರು ಮಾಡಿದ ಸಿನಿಮಾಗಳ ವಿವರಗಳನ್ನು ಪಾಠದಲ್ಲಿ ನೀಡಲಾಗಿದೆ.

ಸಿಂಧ್ ಸಮುದಾಯ ಸಾಧಕರ ಪರಿಚಯಿಸಲು ಹೋಗಿ ಎಡವಟ್ಟು ಮಾಡಿದ್ದಾರೆ. 7 ನೇತರಗತಿಯ ವಿದ್ಯಾರ್ಥಿಗಳಿಗೆ ಈ ಪಾಠ ನೀಡಲಾಗಿದೆ.   ನಟಿ ಮಾಡಿದ ಸಿನಿಮಾಗಳ ಬಗ್ಗೆ ಹಾಗೂ ತೆಲುಗು, ತಮಿಳಿನಲ್ಲಿ ಅವರು ಅಭಿನಯಿಸಿರುವ ಬಗ್ಗೆ ಪಠ್ಯದಲ್ಲಿ ವಿವರಣೆ ನೀಡಲಾಗಿದೆ.

ಸಿಂಧ್ ವಿಭಜನೆಯ ನಂತರದ ಜೀವನ. ವಲಸೆ, ಸಮುದಾಯ ಮತ್ತು ಕಲಹ ಎಂಬ ಶೀರ್ಷಿಕೆಯ ಅಡಿಯಲ್ಲಿ ತಮನ್ನಾ ಅವರ ಪಠ್ಯವನ್ನು ನೀಡಲಾಗಿದ್ದು, ಇದರಲ್ಲಿಯೇ ಬಾಲಿವುಡ್‌ ನಟ ರಣಬೀರ್‌ ಸಿಂಗ್‌ ಅವರ ಮಾಹಿತಿ ಕೂಡ ಇದೆ.

ತಮನ್ನಾ ಅವರ ಪಾಠ ಸೇರ್ಪಡೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ನಮ್ಮ ಮಕ್ಕಳು ಈಕೆಯ ಬಗ್ಗೆ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಮಕ್ಕಳು ಇಂಥ ನಟಿಯಿಂದ ಏನು ಕಲಿಯುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ತಮನ್ನಾ ಪೋರ್ನ್ ಮಾದರಿಯ ಚಿತ್ರಗಳಲ್ಲಿ ನಟನೆ ನಟಿಸಿದ್ದಾರೆ. ಆಕೆಯ ಬಗ್ಗೆ ಮಕ್ಕಳು ಕೂಡ ನಮಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.  ಆಡಳಿತ ಮಂಡಳಿಯನ್ನ ಈ ಬಗ್ಗೆ ಪ್ರಶ್ನೆ ಮಾಡಿದ್ರೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Tamannaah Bhatia

ಈ ಕುರಿತಾಗಿ ಪೋಷಕರು ಮಕ್ಕಳ ಹಕ್ಕುಗಳ ಆಯೋಗ ಹಾಗೂ ಖಾಸಗಿ ಶಾಲೆಗಳ ಒಕ್ಕೂಟಕ್ಕೆ ದೂರು ಕೂಡ ನೀಡಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

Latest Videos

click me!