Amala Paul
ದಕ್ಷಿಣದ ಜನಪ್ರಿಯ ನಟಿ ಅಮಲಾ ಪೌಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಪ್ರಗ್ನೆನ್ಸಿಯ ಪ್ರತಿ ಹಂತವನ್ನೂ ಸೋಶಿಯಲ್ ಮೀಡಿಯಾದಲ್ಲಿ ಅಮಲಾ ಪೌಲ್ ಶೇರ್ ಮಾಡಿಕೊಳ್ಳುತ್ತಿದ್ದರು.
Amala Paul
ಮುದ್ದಾದ ಮಗ ಹಾಗೂ ಪತ್ನಿಯನ್ನು ಜಗತ್ ದೇಸಾಯಿ ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿರುವ ವಿಡಿಯೋವನ್ನೂ ಕೂಡ ಅಮಲಾ ಪೌಲ್ ಹಂಚಿಕೊಂಡಿದ್ದಾರೆ.
Amala Paul
ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿಯನ್ನು ನಟಿ ಅಮಲಾ ಪೌಲ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ಅಮಲಾ ಮಗುವಿನೊಂದಿಗೆ ಮನೆಗೆ ಬರುತ್ತಿರುವುದನ್ನು ವಿಡಿಯೋದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Amala Paul
ಮಗುವನ್ನು ಹೊತ್ತು ಮನೆಗೆ ಬಂದ ಅಮಲಾ ಪೌಲ್‌ಗೆ ಪತಿ ಜಗತ್ ದೇಸಾಯಿ ಸಖತ್ ಸರ್‌ಪ್ರೈಸ್ ನೀಡಿದ್ದಾರೆ. ವಿಶೇಷ ಥೀಮ್‌ನೊಂದಿಗೆ ಮನೆಯನ್ನು ಈ ಸಮಯದಲ್ಲಿ ಅಲಂಕರಿಸಲಾಗಿತ್ತು.
Amala Paul
ಜೂನ್ 11 ರಂದು ಅಮಲಾ ಪೌಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನ ಜೊತೆಗಿನ ವಿಡಿಯೋ ಶೇರ್ ಮಾಡುವುದರ ಜೊತೆಗೆ ಮಗುವಿನ ಹೆಸರನ್ನು ಕೂಡ ನಟಿ ರಿವೀಲ್ ಮಾಡಿದ್ದಾರೆ.
Amala Paul
ತಮ್ಮ ಮಗನಿಗೆ ಅಮಲಾ ಪೌಲ್ ಇಳಯ್ ಎಂದು ಹೆಸರಿಟ್ಟಿದ್ದಾರೆ. ಮಗುವಿನ ಹೆಸರು ಕೇಳಿ ಅಭಿಮಾನಿಗಳು ಕೂಡ ಸಖತ್ ಇಷ್ಟಪಟ್ಟಿದ್ದಾರೆ.
Amala Paul
ಜಗತ್ ದೇಸಾಯಿ ಅಮಲಾ ಪೌಲ್‌ಗೆ ಮೊದಲ ಪತಿಯಲ್ಲ. 2014ರ ಜೂನ್ 12 ರಂದು ಅಮಲಾ ಪೌಲ್ ನಿರ್ದೇಶಕ ಎಎಲ್ ವಿಜಯ್‌ರನ್ನು ಮದುವೆಯಾಗಿದ್ದರು.
Amala Paul
ಆದರೆ,ಈ ಮದುವೆ ಕೇವಲ ಮೂರು ವರ್ಷಗಳ ಕಾಲ ಮಾತ್ರವೇ ಉಳಿಯಿತು. ವೈಮನಸ್ಯದ ಕಾರಣದಿಂದ ಇಬ್ಬರೂ ಕಾನೂನುಬದ್ಧವಾಗಿ ಬೇರೆ ಬೇರೆಯಾಗಿದ್ದರು.
ಆ ನಂತರ ಕೆಲ ಕಾಲ ಒಬ್ಬಂಟಿಯಾಗಿಯೇ ಇದ್ದ ಅಮಲಾ ಪೌಲ್, ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದರು. ಕನ್ನಡದಲ್ಲಿ ಹೆಬ್ಬುಲಿ ಸೇರಿದಂತೆ ತಮಿಳು ಹಾಗೂ ತೆಲುಗು ಭಾಷೆಯ ಸಿನಿಮಾದಲ್ಲಿ ನಟಿಸಿದ್ದರು.
2023ರಲ್ಲಿ ನಟಿ ಗೆಳೆಯ ಜಗತ್ ದೇಸಾಯಿಯನ್ನು ಮದುವೆಯಾಗಿರುವುದು ಘೋಷಣೆ ಮಾಡಿದ್ದರು. ಮದುವೆಯಾದ 2 ತಿಂಗಳಿಗೇ ನಟಿ ಅಮಲಾ ಪೌಲ್ ತಾನು ಗರ್ಭಿಣಿ ಎನ್ನುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು.
ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು ಗೊತ್ತಾದ ಕಾರಣಕ್ಕಾಗಿಯೇ ನಟಿ ಅಮಲಾ ಪೌಲ್, ಸಡನ್ ಆಗಿ ಜಗತ್ ದೇಸಾಯಿ ಜೊತೆ ಮದುವೆ ಘೋಷಣೆ ಮಾಡಿದ್ದರು.
ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ನಟಿ ಅಮಲಾ ಪೌಲ್, ಸೀಮಂತದ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದರು.
amala paul
ಗುಜರಾತಿ ಸೊಸೆ ಅಮಲಾ ಪೌಲ್ ಟ್ರೆಡಿಷನಲ್ ಲುಕ್ನಲ್ಲಿ ಮಿಂಚಿದ್ರು. ಗುಜರಾತಿ ಸ್ಟೈಲ್ ನಲ್ಲೇ ಸೀರೆಯುಟ್ಟಿದ್ರು. ಪತಿಯ ಜೊತೆಗಿನ ಫೋಟೋಗಳನ್ನು ಅಮಲಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಮಲಾ ಪತಿ ಜಗತ್ ದೇಸಾಯಿ ಅವರು ಗುಜರಾತ್ ನ ಸೂರತ್ ನವರಾಗಿದ್ದಾರೆ.