ಕೆಲವರಿಗೆ ಬದುಕು ಬಹುದೊಡ್ಡ ಅವಕಾಶ ಕೊಡುತ್ತದೆ. ಆದರೆ, ಅವರು ಇಂಥ ಅವಕಾಶಗಳನ್ನು ನೋಡೋದೇ ಇಲ್ಲ. ಬಹುಶಃ ದರ್ಶನ್ ಪಾಲಿಗೆ ಇದು ಸೂಕ್ತವಾಗಿ ಅನ್ವಯಿಸುತ್ತದೆ.
2011ರಲ್ಲಿ ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ದರ್ಶನ್ ಬಳಿಕ ಸಿನಿಮಾ ಜೀವನದಲ್ಲಿ ದೊಡ್ಡ ಯಶಸ್ಸು ಕಂಡಿದ್ದರು. ಆದರೆ, ಯಶಸ್ಸಿನ ಅಮಲು ಏರಿದಂತೆಲ್ಲಾ, ದರ್ಶನ್ ಅವರ ಕೆಟ್ಟ ಕೆಲಸಗಳು ಸುದ್ದಿಯಾಗುತ್ತಲೇ ಹೋದವು.
ಈ ನಡುವೆ ದರ್ಶನ್ ವೈವಾಹಿಕ ಜೀವನಕ್ಕೆ ಮೂರನೆಯವರಾಗಿ ಬಂದಿದ್ದ ಪವಿತ್ರಾ ಗೌಡ ಸಮಸ್ಯೆಗೆ ದೊಡ್ಡ ಕಾರಣ ಎನ್ನಲಾಗ್ತಿದೆ. ಹಾಗಿದ್ದರೆ, ಈ ಪವಿತ್ರಾ ಗೌಡ ದರ್ಶನ್ ಅವರ ಜೀವನಕ್ಕೆ ಬಂದಿದ್ದು ಯಾವಾಗ?
ದರ್ಶನ್ ಹಾಗೂ ಪವಿತ್ರಾ ಗೌಡ ಮದುವೆಯೊಂದು ಆಗಿಲ್ಲ ಬಿಟ್ಟರೆ, ಅವರಿಬ್ಬರೂ ಸತಿ-ಪತಿಗಳೇ ಆಗಿದ್ದಾರೆ. ಈ ಪವಿತ್ರಾ ಗೌಡ ದರ್ಶನ್ ಅವರ ಜೀವನದಲ್ಲಿ ಬಂದಿದ್ದು ಜಗ್ಗುದಾದಾ ಸಿನಿಮಾದ ಶೂಟಿಂಗ್ ಸಮಯದಲ್ಲಿ.
ಜಗ್ಗುದಾದಾ ಶೂಟಿಂಗ್ ಸಮಯದಲ್ಲಿ ಇವರಿಬ್ಬರ ನಡುವೆ ಅಫೇರ್ ಇದೆ ಎನ್ನುವ ವಿಚಾರ ಗೊತ್ತಾಗಿತ್ತು. ಆದರೆ, ಇತ್ತೀಚೆಗೆ ಪವಿತ್ರಾ ಗೌಡ ತಮ್ಮದು 10 ವರ್ಷಗಳ ಪ್ರೀತಿ ಎಂದು ಹೇಳಿಕೊಂಡಿದ್ದರು.
ಇನ್ನು ಪವಿತ್ರಾ ಗೌಡ ಸಿನಿಮಾ ಇಂಡಸ್ಟ್ರೀಗೆ ಕಾಲಿಡುವ ಮುನ್ನ ಸಂಜಯ್ ಸಿಂಗ್ ಎನ್ನುವ ವ್ಯಕ್ತಿಯನ್ನು ವಿವಾಹವಾಗಿದ್ದರು. ಆದರೆ, ಗ್ಲಾಮರ್ ಜಗತ್ತಿನೆಡೆ ಆಕರ್ಷಣೆ ಹೊಂದಿದ್ದ ಪವಿತ್ರಾ ಆತನಿಗೆ ವಿಚ್ಛೇದನ ನೀಡಿದ್ದರು.
2017ರಲ್ಲಿ ಪವಿತ್ರಾ ಗೌಡ, ದರ್ಶನ್ ಅವರ ಜೊತೆಯಲ್ಲಿರುವ ಫೋಟೋವನ್ನು ತಮ್ಮ ಟ್ವಿಟರ್ ಹಾಗೂ ಫೇಸ್‌ಬುಕ್ ಅಕೌಂಟ್‌ನ ಡಿಪಿ ಮಾಡಿಕೊಂಡಿದ್ದರು. ಈ ವೇಳೆ ದರ್ಶನ್ ಫ್ಯಾನ್ಸ್ ಬೆದರಿಕೆ ಹಾಕಿದ್ದರಿಂದ ಅದನ್ನು ತೆಗೆದುಹಾಕಿದ್ದರು.
ಪವಿತ್ರಾ ಗೌಡ ಅವರಿಗೆ ಖುಷಿ ಎನ್ನುವ ಪುತ್ರಿಯೂ ಇದ್ದಾರೆ. ಕೆಲವರು ಇದು ದರ್ಶನ್ ಅವರ ಪುತ್ರಿ ಎಂದು ಹೇಳಿದ್ದರೆ, ಇನ್ನೊಂದು ವರದಿಗಳ ಪ್ರಕಾರ ಇದು ಮೊದಲ ಗಂಡನಿಂದ ಪಡೆದ ಮಗು ಎಂದು ಹೇಳಲಾಗಿದೆ.
ಕನ್ನಡದಲ್ಲಿ ಛತ್ರಿಗಳು ಸಾರ್ ಛತ್ರಿಗಳು ಹಾಗೂ ಬತ್ತಾಸ್‌ನಂಥ ಕೆಲವು ಸಿನಿಮಾಗಳಲ್ಲಿ ಪವಿತ್ರಾ ಗೌಡ ನಟಿಸಿದ್ದಾರೆ. ಆ ನಂತರ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.
ಪವಿತ್ರಾ ಗೌಡ ಹಾಗೂ ದರ್ಶನ್ ನಡುವಿನ ಅಫೇರ್ ಇಂದು ನಿನ್ನೆಯದಲ್ಲ. 2015ರಿಂದಲೂ ಇವರಿಬ್ಬರ ನಡುವಿನ ಅಫೇರ್ ಬಗ್ಗೆ ಸುದ್ದಿಗಳು ಬರುತ್ತಲೇ ಇವೆ.