ಸಾವಿರಾರು ಕಲಾ ಕೃತಿಗಳನ್ನು ಸೃಷ್ಟಿಸಿರುವ ಡಾ.ವರ್ಮಾ ಅವರ ಡಾ.ರಾಜ್‌ಕುಮಾರ್, ಕನ್ನಡ ನಾಡಿನ ತಾಯಿ ಭುವನೇಶ್ವರಿ ಹಾಗೂ ರಾಘವೇಂದ್ರ ಸ್ವಾಮಿಗಳು ಪೂಜೆಯಲ್ಲಿ ನಿರತರವಾಗಿರುವ ಪೇಟಿಂಗ್ಸ್ ಎಂಥ ಅರಸಿಕರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ನೋಡಿದರೆ ನೋಡುತ್ತಲೇ ಇರಬೇಕೆಂದು ಬಯಸುವ ಈ ಕೃತಿಗಳು ನೋಡಿದವರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸುವುದರಲ್ಲಿ ಅನುಮಾನವೇ ಇಲ್ಲ.