Coming Soon ಎನ್ನುತ್ತಲೇ ವೀಕ್ಷಕರ ತಲೆಯಲ್ಲಿ ಹುಳುಬಿಟ್ಟ ಶ್ರೀರಸ್ತು ಶುಭಮಸ್ತು ಅಕ್ಕ-ತಂಗಿಯರು!

Published : Aug 08, 2025, 04:02 PM IST

Coming Soon ಎನ್ನುತ್ತಲೇ ವೀಕ್ಷಕರ ತಲೆಯಲ್ಲಿ ಹುಳುಬಿಟ್ಟ ಶ್ರೀರಸ್ತು ಶುಭಮಸ್ತು ಅಕ್ಕ-ತಂಗಿ ಪೂರ್ಣಿ ಮತ್ತು ದೀಪಿಕಾ ಅರ್ಥಾತ್​ ಲಾವಣ್ಯ ಭಾರದ್ವಾಜ್​ ಮತ್ತು ದರ್ಶಿನಿ ಡೆಲ್ಟಾ. ಏನಿದು? 

PREV
17
ಶ್ರೀರಸ್ತು ಶುಭಮಸ್ತು ಸೀರಿಯಲ್​

ಶ್ರೀರಸ್ತು ಶುಭಮಸ್ತು ಇದೀಗ ಮುಗಿಯುವ ಹಂತಕ್ಕೆ ಬಂದಿದ್ದರೂ, ಸೀರಿಯಲ್​ ಅನ್ನು ಎಳೆಯುತ್ತಾ ಇರುವುದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ಸೀರಿಯಲ್​ನಲ್ಲಿ ಒಂದೇ ಮನೆಯ ಸೊಸೆಯಂದಿರಾಗಿರುವವರು ಪೂರ್ಣಿ ಮತ್ತು ದೀಪಿಕಾ. ಅಣ್ಣ ತಮ್ಮಂದಿರ ಪತ್ನಿಯರಾದ ಇವರಿಬ್ಬರದ್ದೂ ಸೀರಿಯಲ್​ನಲ್ಲಿ ಭಿನ್ನ ಕ್ಯಾರೆಕ್ಟರ್​ ಆಗಿತ್ತು. ಒಬ್ಬಳು ಅತೀ ಒಳ್ಳೆಯವಳು, ಇನ್ನೊಬ್ಬಳು ಅಗತ್ಯಕ್ಕಿಂತ ಹೆಚ್ಚು ಕೆಟ್ಟವಳು ಅಂದ್ರೆ ವಿಲನ್​. ದೊಡ್ಡ ಸೊಸೆ ಪೂರ್ಣಿಗೆ ಇನ್ನಿಲ್ಲದ ಕಾಟ ಕೊಡುವುದು ಎಂದರೆ ದೀಪಿಕಾಗೆ ಇನ್ನಿಲ್ಲದ ಖುಷಿ. ಅದರಲ್ಲಿಯೂ ಪೂರ್ಣಿ ಅನಾಥೆ ಎನ್ನುವ ಕಾರಣಕ್ಕೆ, ಅವಳನ್ನು ಹೆಜ್ಜೆ ಹೆಜ್ಜೆಗೂ ಹಂಗಿಸಿ, ಟೀಕಿಸುತ್ತಿದ್ದಳು. ಅದೇ ಪೂರ್ಣಿ ತುಂಬಾ ಒಳ್ಳೆಯವಳು. ಎಲ್ಲವನ್ನೂ ಸಹಿಸಿಕೊಂಡು ಹೋಗುವವಳು. ಆದರೆ ಇದೀಗ ದೀಪಿಕಾ ಕೂಡ ಒಳ್ಳೆಯವಳಾಗಿ ವರ್ಷವೇ ಕಳೆಯುತ್ತಾ ಬಂದಿದೆ.

27
ಶ್ರೀರಸ್ತು ಶುಭಮಸ್ತು ಸೀರಿಯಲ್​

ಅದೇ ಇನ್ನೊಂದೆಡೆ, ಶಾರ್ವರಿಯ ದುಷ್ಟಬುದ್ಧಿ ಎಲ್ಲರಿಗೂ ತಿಳಿದಿದೆ. ಇನ್ನೇನು ಸೀರಿಯಲ್​ ಮುಗಿದೇ ಹೋಯ್ತು ಎನ್ನುವಾಗಲೇ ಶಾರ್ವರಿ ತಲೆಮರೆಸಿಕೊಂಡಿದ್ದಾಳೆ. ದೊಡ್ಡ ದೊಡ್ಡ ಕಳ್ಳರನ್ನು ಹಿಡಿಯುವ ಪೊಲೀಸರಿಗೆ ಶಾರ್ವರಿಯಂಥವಳನ್ನು ಹಿಡಿಯಲು ಆಗ್ತಿಲ್ವಾ ಎಂದು ಟ್ರೋಲ್​ಗಳ ಸುರಿಮಳೆಯೇ ಆಗುತ್ತಿದೆ. ಸೀರಿಯಲ್​ ಅನ್ನು ಎಳೆಯಲು ಏನೇನೋ ತುರುಕುತ್ತಿರುವುದು ಜನರಿಗೆ ಇಷ್ಟವಾಗುತ್ತಿಲ್ಲ. ಆದರೂ ಬೈದುಕೊಳ್ಳುತ್ತಲೇ ಶಾರ್ವರಿ ಯಾವಾಗ ಸಿಗ್ತಾಳೆ ಎಂದು ಕಾಯುತ್ತಿದ್ದಾರೆ.

37
ಪೂರ್ಣಿ ಮತ್ತು ದೀಪಿಕಾ ಸಕತ್​ ಸ್ಟೆಪ್​

ಇದರ ನಡುವೆಯೇ ಇದೀಗ ಪೂರ್ಣಿ ಮತ್ತು ದೀಪಿಕಾ ಸೇರಿ ಸಕತ್​ ಸ್ಟೆಪ್​ ಹಾಕಿದ್ದು, ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ. ಕಮಿಂಗ್​ ಸೂನ್​ (Coming Soon) ಎಂದು ಹೇಳುವ ಮೂಲಕ ಇಬ್ಬರೂ ಬಿಳಿಯ ಡ್ರೆಸ್​ನಲ್ಲಿ ಮಿಂಚಿದ್ದಾರೆ. ಇದೇನು ಎನ್ನುವ ಬಗ್ಗೆ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ.

47
ಪೂರ್ಣಿಯ ರಿಯಲ್​ ಹೆಸರು ಲಾವಣ್ಯ

ಪೂರ್ಣಿಯ ರಿಯಲ್​ ಹೆಸರು ಲಾವಣ್ಯ ಹಾಗೂ ದೀಪಿಕಾ ನಿಜವಾದ ಹೆಸರು ದರ್ಶಿನಿ ಡೆಲ್ಟಾ. ದರ್ಶಿನಿ ಕುರಿತು ಹೇಳುವುದಾದರೆ, ಇವರು ನಟಿಯಾಗೋ ಮೊದಲು ಮಾಡೆಲ್ (Model), ಜೊತೆಗೆ ಕೊರಿಯೋಗ್ರಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ.

57
ಕೊರಿಯೋಗ್ರಫರ್​ ಆಗಿರೋ ದರ್ಶಿನಿ

ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

67
ಪೂರ್ಣಿಯ ಹೆಸರು ಲಾವಣ್ಯ ಭಾರದ್ವಾಜ್​

ಪೂರ್ಣಿಯ ನಿಜವಾದ ಹೆಸರು ಲಾವಣ್ಯ. ಇವರ ರಿಯಲ್‌ ಪತಿಯ ಹೆಸರು ಶಶಿ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಶಶಿ ಅವರು ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾ ಸಹೋದರನ ಪಾತ್ರ ಮಾಡುತ್ತಿದ್ದಾರೆ.

77
ಹುಟ್ಟಿನ ಬಗ್ಗೆ ಲಾವಣ್ಯಾ

ರಿಯಾಲಿಟಿ ಷೋ ಒಂದರಲ್ಲಿ ಲಾವಣ್ಯ ಅವರ ಹುಟ್ಟಿನ ಬಗ್ಗೆ ಅಪ್ಪ ಹೇಳಿಕೊಂಡಿದ್ದರು. ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್‌ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು!

Read more Photos on
click me!

Recommended Stories