ಇದಾಗಲೇ ಹಲವರು ಸೋಷಿಯಲ್ ಮೀಡಿಯಾಗಳಿಂದ ಲಕ್ಷಾಧಿಪತಿ ಅಷ್ಟೇ ಏಕೆ ಕೋಟ್ಯಧಿಪತಿಗಳೂ ಆಗಿದ್ದಾರೆ. ಅದರಲ್ಲಿಯೂ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾಗಳಿಂದಲೇ ಕೋಟಿಗಟ್ಟಲೆ ಸಂಪಾದನೆಯನ್ನೂ ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ಅವರು ಹಾಕುವ ರೀಲ್ಸ್ಗಳಿಂದ, Youtube Videoಗಳಿಂದ ವ್ಯೂವ್ಸ್ ಹೆಚ್ಚಾಗುತ್ತಿದ್ದಂತೆಯೇ ಜಾಹೀರಾತು ಕಂಪೆನಿಗಳು ತಮ್ಮ ಪ್ರಾಡಕ್ಟ್ಗಳನ್ನು ಇವರ ಕೈಯಿಂದಲೇ ಪ್ರಚಾರ ಮಾಡಿ ಲಕ್ಷ ಲಕ್ಷ ದುಡ್ಡು ಕೊಡುತ್ತವೆ. ಆದ್ದರಿಂದ ಸೆಲೆಬ್ರಿಟಿಗಳು ಮಾತ್ರವಲ್ಲದೇ ರೀಲ್ಸ್ ಮೂಲಕವೇ ಈ ರೀತಿಯ ಸಂಪಾದನೆ ಮಾಡುತ್ತಿರುವವರು ಹಲವರು ಇದ್ದಾರೆ.
26
ಗಗನಾ ಸೋಷಿಯಲ್ ಮೀಡಿಯಾ ಫಜೀತಿ
ಚಿಕ್ಕಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಫಾಲೋವರ್ಸ್, ವ್ಯೂವರ್ಸ್, ಲೈಕ್ಸ್, ಕಮೆಂಟ್ಸ್ ಆಧಾರದ ಮೇಲೆ ಜಾಹೀರಾತು ಕಂಪೆನಿಗಳಿಂದ ಸಕತ್ ಆದಾಯ ಮಾಡುವವರು ಇದ್ದಾರೆ. ಹಾಗೆಂದು ಇದು ಎಲ್ಲರಿಗೂ ಒಲಿಯುವ ಕಲೆಯಲ್ಲ. ಅದೃಷ್ಟ ಎನ್ನುವುದು ಇರಲೇಬೇಕು. ಇಲ್ಲದಿದ್ದರೆ ಎಷ್ಟು ಒಳ್ಳೆಯ ಕಂಟೆಂಟ್ ಕೊಟ್ಟರೂ, ಕೈಕಾಲು ಹಿಡಿದರೂ ನೂರು ವ್ಯೂವ್ಸ್ ಆಗುವುದಿಲ್ಲ, ಅದೇ ದೇಹ ಪ್ರದರ್ಶನ ಮಾಡಿ ಮೈಕೈ ಅಲ್ಲಾಡಿಸಿದರೆ ಕೋಟಿ ಕೋಟಿ ವ್ಯೂವ್ಸ್ ಆಗುವುದೂ ಇದೆ. ಹೀಗೆಯೇ ಎಂದು ಹೇಳಲು ಆಗುವುದಿಲ್ಲ. ಎಲ್ಲಾ ನಟ-ನಟಿಯರ ಕೈಯನ್ನು ಇದು ಹಿಡಿಯುತ್ತದೆ ಎನ್ನುವುದೂ ಕಷ್ಟ.
36
ಮಹಾನಟಿ ಮೂಲಕ ಪರಿಚಯ
ಅದೇ ರೀತಿಯ ಮಾತನ್ನಾಡಿದ್ದಾರೆ ಮಹಾನಟಿ, ಭರ್ಜರಿ ಬ್ಯಾಚುಲರ್ಸ್ ಮೂಲಕ ಮನೆಮಾತಾಗಿರುವ ನಟಿ ಗಗನಾ. ಅಷ್ಟಕ್ಕೂ ಗಗನಾ ಎಂದರೆ ಟಿವಿ ಪ್ರಿಯರಿಗೆ ಹೊಸ ಹೆಸರೇನಲ್ಲ. 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2'ನಲ್ಲಿ ಡ್ರೋನ್ ಪ್ರತಾಪ್ ಮತ್ತು ಗಗನಾ ಸಕತ್ ಹವಾ ಸೃಷ್ಟಿಸಿದ್ದರು. ಆದರೆ ಕೊನೆಗೆ ಗೆಲುವು ಸುನೀಲ್ ಹಾಗೂ ಅಮ್ರಿಟಾ ಜೋಡಿಯದ್ದಾಯಿತು. ಮೂರನೇ ಸ್ಥಾನವನ್ನು ಅಂದರೆ ಎರಡನೆಯ ರನ್ನರ್ ಅಪ್ ಆಗಿದೆ ಡ್ರೋನ್ ಪ್ರತಾಪ್ ಮತ್ತು ಗಗನಾ ಜೋಡಿ. ಈ ಜೋಡಿಯ ಅಭಿಮಾನಿಗಳಿಗೆ ಇದು ಸಹಜವಾಗಿ ದುಃಖ ತರಿಸಿದೆ.
ಅದೇನೇ ಇದ್ದರೂ ಇದೀಗ ಗಗನಾರ ಯೂಟ್ಯೂಬ್ ಚಾನೆಲ್ ಸ್ಟೋರಿ ಸಕತ್ ಇಂಟರೆಸ್ಟಿಂಗ್ ಆಗಿದೆ. ಹಲವಾರು ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಚಾನೆಲ್ ಮಾಡಿ ಕಾರು ಖರೀದಿ ಮಾಡಿದ್ದನ್ನು ನೋಡಿ, ನಾನೂ ಕಾರು ಪರ್ಚೇಸ್ ಮಾಡಬೇಕು ಎನ್ನೋ ಕಾರಣಕ್ಕೆ ರೀಲ್ಸ್ ಮಾಡಿದೆ. ಇನ್ಸ್ಟಾಗ್ರಾಮ್ನಲ್ಲಿ ಸಾವಿರ ವ್ಯೂವ್ಸೂ ಬರಲಿಲ್ಲ. ಕಾರು ಸಾಯಲಿ, ಸೈಕಲ್ಲೂ ಬರದ ಸ್ಥಿತಿ ನನ್ನದಾಗಿದೆ ಎಂದು ಗಗನಾ ಹಾಸ್ಯದ ರೀತಿಯಲ್ಲಿ ಹೇಳಿರುವ ವಿಡಿಯೋ ಒಂದು ಇದೀಗ ವೈರಲ್ ಆಗ್ತಿದೆ.
56
ಮಹಾನಟಿಯಲ್ಲಿಯೂ ಭರ್ಜರಿ ಷೋ
ಇನ್ನು ಗಗನಾ ಕುರಿತು ಹೇಳುವುದಾದರೆ, ಮಹಾನಟಿಯ ಮೊದಲ ಸೀಸನ್ ಮೂಲಕ ಮನೆಮಾತಾದವರು ಚಿತ್ರದುರ್ಗದ ಗಗನಾ. ಇದೀಗ ಅವರಿಗೆ ರಿಯಾಲಿಟಿ ಷೋಗಳಲ್ಲಿ ಭಾರಿ ಬೇಡಿಕೆ ಇದೆ. ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನಲ್ಲಿ ಡ್ರೋನ್ ಪ್ರತಾಪ್ಗೆ ಜೋಡಿಯಾಗಿದ್ದ ಗಗನಾ ಪೈಪೋಟಿಗೆ ಬಿದ್ದವರಂತೆ ಸ್ಪರ್ಧಾ ಜೋಡಿಗಳು ರೊಮಾನ್ಸ್ನಲ್ಲಿ ತೊಡಗಿಸಿಕೊಂಡಿತ್ತು.
66
ಭರ್ಜರಿ ಬ್ಯಾಚುಲರ್ಸ್ನಲ್ಲಿ ಗಮನ ಸೆಳೆದಿದ್ದ ಗಗನಾ
ಎಲ್ಲವೂ ಟಾಸ್ಕ್ ಆಗಿದ್ದರಿಂದ ಎಲ್ಲಾ ಜೋಡಿಗಳೂ ಹೀಗೆಯೇ ಮಾಡಿದ್ದರೆ, ಡ್ರೋನ್ ಪ್ರತಾಪ್ ಗಗನಾಳಿಗಾಗಿ ಒಂದು ಹೆಜ್ಜೆ ಮುಂದೆಯೇ ಹೋಗಿದ್ದರು. ಪ್ರಪೋಸಲ್ ರೌಂಡ್, ಆ ರೌಂಡ್, ಈ ರೌಂಡ್ ಎನ್ನುತ್ತಲೇ ರಿಯಲ್ ಪ್ರೇಮಿಗಳನ್ನೂ ನಾಚಿಸುವಂತೆ ಈ ಜೋಡಿಗಳು ಕಾಣಿಸಿಕೊಂಡಿದ್ದವು. shabari_sathish ಚಾನೆಲ್ಗೆ ನಟಿ ಮಾತನಾಡಿರುವ ವಿಡಿಯೋ ಇಲ್ಲಿದೆ…