Samantha Ruth Prabhu Diwali 2025: ಕಿರುತೆರೆಯಿಂದ ಬಾಲಿವುಡ್‌ವರೆಗೆ ಇಡೀ ದೇಶವೇ ದೀಪಾವಳಿ ಆಚರಿಸುತ್ತಿದೆ. ದಕ್ಷಿಣ ಭಾರತ ಚಿತ್ರೋದ್ಯಮದ ನಟರು ಸಹ ತಮ್ಮ ದೀಪಾವಳಿ ಆಚರಣೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ ಹೆಚ್ಚು ಗಮನ ಸೆಳೆದ ಪೋಸ್ಟ್ ಅಂದ್ರೆ ಅದು ನಟಿ ಸಮಂತಾ ರುತ್ ಪ್ರಭು ಅವರದ್ದು.
ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ತಮ್ಮ ಪ್ರೊಫೆಶನಲ್ ಲೈಫಿಗಿಂತ ಹೆಚ್ಚಾಗಿ ಪರ್ಸನಲ್ ಲೈಫ್‌ನಿಂದಲೇ ಸುದ್ದಿಯಲ್ಲಿದ್ದಾರೆ. ನಿಮಗೆ ತಿಳಿದಿರುವಂತೆ ಸಮಂತಾ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಇಬ್ಬರೂ ಅನೇಕ ಕಾರ್ಯಕ್ರಮಗಳು ಮತ್ತು ಇತರ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
26
ಫ್ಯಾನ್ಸ್ ಏನು ಹೇಳಿದ್ರು ?.
ಈಗ ವೈರಲ್ ಆಗುತ್ತಿರುವ ಫೋಟೋ ನೋಡಿದರೆ ಇಬ್ಬರೂ ರಿಲೇಶನ್ಶಿಪ್‌ನಲ್ಲಿ ಪರಸ್ಪರ ಗಂಭೀರವಾಗಿರುವಂತೆ ತೋರುತ್ತದೆ. ಇತ್ತೀಚೆಗೆ ಸಮಂತಾ ಸಾಮಾಜಿಕ ಮಾಧ್ಯಮದಲ್ಲಿ ರಾಜ್ ನಿಧಿಮೋರು ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದು, ಅದನ್ನು ನೋಡಿದ ನಂತರ ಫ್ಯಾನ್ಸ್ ಏನು ಹೇಳಿದ್ರು ಗೊತ್ತಾ?.
36
ಹೆಚ್ಚು ಗಮನ ಸೆಳೆದ ಪೋಸ್ಟ್
ಕಿರುತೆರೆಯಿಂದ ಬಾಲಿವುಡ್‌ವರೆಗೆ ಇಡೀ ದೇಶವೇ ದೀಪಾವಳಿ ಆಚರಿಸುತ್ತಿದೆ. ದಕ್ಷಿಣ ಭಾರತ ಚಿತ್ರೋದ್ಯಮದ ನಟರು ಸಹ ತಮ್ಮ ದೀಪಾವಳಿ ಆಚರಣೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ ಹೆಚ್ಚು ಗಮನ ಸೆಳೆದ ಪೋಸ್ಟ್ ಅಂದ್ರೆ ಅದು ನಟಿ ಸಮಂತಾ ರುತ್ ಪ್ರಭು ಅವರದ್ದು. ಇನ್ಸ್ಟಾಗ್ರಾಮ್‌ನಲ್ಲಿ ಸಮಂತಾ ದೀಪಾವಳಿ ಆಚರಣೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ರೂಮರ್ ಬಾಯ್‍ಫ್ರೆಂಡ್ ರಾಜ್ ನಿಧಿಮೋರು ಇದ್ದಾರೆ.
ಹೌದು, ಸಮಂತಾ ತಮ್ಮ ರೂಮರ್ ಬಾಯ್‍ಫ್ರೆಂಡ್ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದರು. ಅಲ್ಲಿಗೆ ರಾಜ್ ನಿಧಿಮೋರು ಮತ್ತು ಸಮಂತಾ ಅವರ ಸಂಬಂಧಕ್ಕೆ ಕುಟುಂಬದ ಅನುಮೋದನೆ ಸಿಕ್ಕಿದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ವಿಚ್ಛೇದನದ ನಂತರ ಸಮಂತಾ ಅವರ ಹೃದಯದಲ್ಲಿ ಮತ್ತೆ ಪ್ರೀತಿ ಅರಳಿದೆ ಎಂದು ಅಭಿಮಾನಿಗಳು ಸಂತೋಷಪಡುತ್ತಿದ್ದಾರೆ.
56
ಇಂಟರ್‌ನೆಟ್‌ನಲ್ಲಿ ವೈರಲ್
ಅನೇಕ ಅಭಿಮಾನಿಗಳು ಇಬ್ಬರೂ ಯಾವಾಗ ಮದುವೆಯಾಗುತ್ತಾರೆ ಎಂದು ಕೇಳುತ್ತಿದ್ದಾರೆ. ಏತನ್ಮಧ್ಯೆ ಸಮಂತಾ ಅವರ ಈ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿವೆ.
66
ಮೊದಲು ಭೇಟಿಯಾದದ್ದು..
ಸಮಂತಾ ಮತ್ತು ರಾಜ್ ಮೊದಲು ಭೇಟಿಯಾದದ್ದು "ಫ್ಯಾಮಿಲಿ ಮ್ಯಾನ್" ವೆಬ್ ಸರಣಿಯ ಸೆಟ್‌ನಲ್ಲಿ. ನಂತರ ಅವರು ಸಿಟಾಡೆಲ್: ಹನಿ ಬನ್ನಿ ಸೀರಿಸ್‌ಗಾಗಿ ಒಟ್ಟಿಗೆ ಕೆಲಸ ಮಾಡಿದರು. ಅವರಿಬ್ಬರ ನಡುವೆ ಆತ್ಮೀಯತೆ ಬೆಳೆಯಲು ಪ್ರಾರಂಭಿಸಿತು. ಸಮಂತಾ ಅವರಂತೆಯೇ ರಾಜ್ ಕೂಡ ವಿಚ್ಛೇದನ ಪಡೆದಿದ್ದಾರೆ.