ಕೊನೆಗೂ ನನಸಾಯ್ತು ಬಹುದಿನಗಳ ಕನಸು...ಮಂತ್ರ ಮಾಂಗಲ್ಯ ಪದ್ಧತಿಯಂತೆ ನವಜೀವನಕ್ಕೆ ಕಾಲಿಟ್ಟ ಸುಹಾನಾ -ನಿತಿನ್

Published : Oct 17, 2025, 01:17 PM ISTUpdated : Oct 17, 2025, 01:30 PM IST

Suhana Syed Marriage News: ಬಹಳ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಸುಹಾನಾ ಸೈಯದ್ ಮತ್ತು ನಿತಿನ್ ಶಿವಾಂಶ್, ಕುಟುಂಬದವರು, ಗಣ್ಯರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

PREV
16
ಸುಹಾನ ಸೈಯದ್-ನಿತಿನ್ ಶಿವಾಂಶ್

ಸರಿಗಮಪ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಗಾಯಕಿ ಸುಹಾನಾ ಸೈಯದ್ ಸ್ನೇಹಿತ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವರಿಸಿದ್ದಾರೆ.

26
ಗಣ್ಯರ ಸಮ್ಮುಖದಲ್ಲಿ ವಿವಾಹ

16 ವರ್ಷಗಳ ಕಾಲ ಪ್ರೀತಿಸಿದ ಸುಹಾನಾ ಸೈಯದ್ ಮತ್ತು ನಿತಿನ್ ಶಿವಾಂಶ್,  ಎರಡು ಮನೆಯವರನ್ನ ಒಪ್ಪಿಸಿ  ಕುಟುಂಬದವರು, ಗಣ್ಯರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

36
ಆಪ್ತರು ಭಾಗಿ

ಈ ಜೋಡಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂತರ್‌ಧರ್ಮೀಯ ಸರಳ ವಿವಾಹ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ. ಮನೋಹರ್,  ಸ್ನೇಹಿತೆ, ಕಿರುತೆರೆ ನಟಿ ಸುಷ್ಮಿತಾ ಸೇರಿದಂತೆ ಆಪ್ತ ವರ್ಗದವರಷ್ಟೇ ಪಾಲ್ಗೊಂಡಿದ್ದರು.

46
ಫೋಟೋಗಳು ರಿವೀಲ್

ಮದುವೆಗೂ ಮುನ್ನ ಭಾವಿ ಪತಿ ಜೊತೆ ಫೋಟೋಗೆ ಫೋಸ್ ಕೊಡುವಾಗ ಫೋಟೋಗಳು ರಿವೀಲ್ ಆಗಿದ್ದವು. 

56
ವಿಶ್ ಮಾಡಿದ ಫ್ಯಾನ್ಸ್

ಮದುವೆಯ ಸಮಯದಲ್ಲಿ ಸುಹಾನಾ ಗೋಲ್ಡನ್‌ ಬಾರ್ಡರ್‌ ಇರುವ ರೆಡ್‌ ಸೀರೆಯಲ್ಲಿ ಕಂಗೊಳಿಸಿದರೆ, ನಿತಿನ್ ಶಿವಾಂಶ್ ಶೇರ್ವಾನಿ ಧರಿಸಿದ್ದರು. ಫೋಟೋಗೆ ಸುಹಾನಾ ಅಭಿಮಾನಿಗಳು ʻಸೂಪರ್‌ ಜೋಡಿʼ ಎಂದೆಲ್ಲಾ ಹರಸಿ ಹಾರೈಸಿದ್ದಾರೆ.

66
ಹೀಗಿತ್ತು ಆಮಂತ್ರಣ ಪತ್ರಿಕೆ

ಈ ಅಂತರ್‌ಧರ್ಮೀಯ ಮದುವೆ ಬಹಳ ವಿಶೇಷವಾಗಿದ್ದು, ಅನೇಕ ಕಲಾವಿದರು ಗಾಯಕರು ಸಾಕ್ಷಿಯಾಗಿದ್ದರು. ಆಮಂತ್ರಣ ಪತ್ರಿಕೆಯಲ್ಲಿ, ಪ್ರೀತಿ ವಿಶ್ವದ ಭಾಷೆ, ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಸುಹಾನಾ ಹಾಗೂ ನಿತಿನ್ ಮದುವೆಯಾಗುತ್ತಿದ್ದೇವೆ. ನಮ್ಮ ನಡೆ ವಿಶ್ವಮಾನವತ್ವದೆಡೆಗೆ ಎಂದು ಬರೆಯಲಾಗಿತ್ತು. 

Read more Photos on
click me!

Recommended Stories