ತಮಿಳು ಸ್ಟಾರ್ ನಟ ಶಿವಕಾರ್ತಿಕೇಯನ್‌ಗೆ ಸ್ವಲ್ಪ ದಿನಗಳಿಂದ ಹಿಟ್ ಸಿಕ್ಕಿರಲಿಲ್ಲ. 'ಪ್ರಿನ್ಸ್', 'ಅಯಲಾನ್' ಸಿನಿಮಾಗಳು ಹೆಚ್ಚು ಓಡಲಿಲ್ಲ. ಹೀಗಾಗಿ ಸಾಯಿ ಪಲ್ಲವಿ ಜೊತೆ 'ಅಮರನ್' ಸಿನಿಮಾ ಮಾಡಿದ್ರು. ವೀರಮರಣ ಹೊಂದಿದ ಯೋಧ ಮುಕುಂದನ್ ವರದರಾಜನ್ ಅವರ ನಿಜ ಜೀವನ ಆಧರಿಸಿ ಈ ಸಿನಿಮಾ ಮಾಡಿದ್ದಾರೆ.
ಅಮರನ್ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಮುಕುಂದ್ ಪಾತ್ರದಲ್ಲಿ, ಸಾಯಿ ಪಲ್ಲವಿ ಅವರ ಪತ್ನಿ ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಚಾಲೆಂಜಿಂಗ್ ಪಾತ್ರ ಮಾಡಿದ್ದಾರೆ. ರಾಜ್‌ಕುಮಾರ್ ಪೆರಿಯಸಾಮಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.