ಒಂದೇ ಒಂದು ಫೋಟೋಶೂಟ್ ಮೂಲಕ ಫೇಮಸ್ ಆದವರು ನಟಿ ರಮ್ಯಾ ಪಾಂಡಿಯನ್. ಅವರ ಟೆರೇಸ್ ಫೋಟೋಶೂಟ್ ಸಖತ್ ವೈರಲ್ ಆಗಿ, ಅವರಿಗೆ ಸಿನಿಮಾ ಮತ್ತು ಟಿವಿ ಅವಕಾಶಗಳನ್ನು ತಂದುಕೊಟ್ಟಿತು. ನಂತರ ವಿಜಯ್ ಟಿವಿಯ ಕುಕ್ ವಿತ್ ಕೋಮಾಲಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ರಮ್ಯಾ, ಅಲ್ಲಿ ತಮ್ಮ ಅಡುಗೆ ಕೌಶಲ್ಯವನ್ನು ಪ್ರದರ್ಶಿಸಿದರು.
25
ರಮ್ಯಾ ಪಾಂಡಿಯನ್
ಕುಕ್ ವಿತ್ ಕೋಮಾಲಿ ನಂತರ ಬಿಗ್ ಬಾಸ್ ಅವಕಾಶ ಬಂತು. ಅಲ್ಲೂ ಫೈನಲ್ ತನಕ ಮುನ್ನಡೆದರು. ನಂತರ ಸೂರ್ಯ ನಿರ್ಮಾಣದ 'ಇರಾಮೆ ಆಂಡಾಲುಮ್ ರಾವಣೆ ಆಂಡಾಲುಮ್' ಚಿತ್ರದಲ್ಲಿ ನಟಿಸಿದ ರಮ್ಯಾ, ಆ ಚಿತ್ರದ ನಂತರ ಎಲ್ಲೂ ಕಾಣಿಸಲಿಲ್ಲ. ಚಿತ್ರರಂಗದಲ್ಲಿ ಅವಕಾಶಗಳು ಸಿಗದ ಕಾರಣ, ಆಧ್ಯಾತ್ಮದತ್ತ ಮುಖ ಮಾಡಿದ ಅವರು ಯೋಗಕ್ಕಾಗಿ ರಿಷಿಕೇಶಕ್ಕೆ ಹೋಗಿದ್ದರು.
35
ರಮ್ಯಾ ಪತಿ ಲೋವಲ್ ಧವನ್
ಆಗ ನೀಡಿದ ಸಂದರ್ಶನವೊಂದರಲ್ಲಿ ಪ್ರೇಮ ವಿವಾಹವಾಗುತ್ತೇನೆ ಎಂದಿದ್ದರು ರಮ್ಯಾ. ಅದರಂತೆ ರಿಷಿಕೇಶದಲ್ಲಿ ಯೋಗಕ್ಕಾಗಿ ಶ್ರೀ ಶ್ರೀ ರವಿಶಂಕರ್ ಆಶ್ರಮಕ್ಕೆ ಹೋದ ರಮ್ಯಾ ಮತ್ತು ಯೋಗ ತರಬೇತಿದಾರ ಲೋವಲ್ ಧವನ್ ನಡುವೆ ಪ್ರೀತಿ ಶುರುವಾಯಿತು. ಯೋಗ ಮುಗಿಸಿ ಚೆನ್ನೈಗೆ ಬಂದ ರಮ್ಯಾ, ತಮ್ಮ ಪ್ರೀತಿಯ ವಿಷಯವನ್ನು ಗುಟ್ಟಾಗಿಟ್ಟಿದ್ದರು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರೀ ವೆಡ್ಡಿಂಗ್ ವಿಡಿಯೋ ಬಿಡುಗಡೆ ಮಾಡಿ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಿದ ರಮ್ಯಾ, ನವೆಂಬರ್ 8 ರಂದು ಲೋವಲ್ ಧವನ್ ಅವರನ್ನು ವಿವಾಹವಾದರು. ರಿಷಿಕೇಶದ ಗಂಗಾ ನದಿ ತೀರದಲ್ಲಿ, ಸಂಬಂಧಿಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿತು. ರಮ್ಯಾ ಅವರ ಮದುವೆ ಫೋಟೋಗಳು ವೈರಲ್ ಆದವು.
ಮದುವೆಯಾದ ಕೂಡಲೇ ಹನಿಮೂನ್‌ಗೂ ಹೋಗಿದ್ದಾರೆ ರಮ್ಯಾ. ಅಲ್ಲಿ ತಮ್ಮ ಪತಿ ಲೋವಲ್ ಧವನ್ ಜೊತೆಗೆ ತೆಗೆದ ಫೋಟೋ ಹಂಚಿಕೊಂಡಿದ್ದಾರೆ. ಮದುವೆಯಾದ ರಿಷಿಕೇಶದಲ್ಲೇ ಹನಿಮೂನ್ ಪ್ಲ್ಯಾನ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.