Jayam Ravi Aarti Divorce: ಪತ್ನಿ ಜೊತೆ ನಿಲ್ಲದ ಜಗಳ, ವಿಚ್ಛೇದನ ನೀಡಿ ಹೊರಬಂದ ಪ್ರಖ್ಯಾತ ನಟ!

First Published | Sep 9, 2024, 6:46 PM IST

ಜಯಂ ಸಿನಿಮಾದ ಮೂಲಕ ತಮಿಳು ಚಿತ್ರರಂಗದಲ್ಲಿ ತಮ್ಮದೇ ಛಾಪೂ ಮೂಡಿಸಿ ಜಯಂ ರವಿ ಎನ್ನುವ ಹೆಸರಿನಿಂದಲೇ ಪ್ರಖ್ಯಾತರಾಗಿದ್ದ ನಟ ರವಿ ತಮ್ಮ ಪತ್ನಿ ಆರತಿಗೆ ವಿಚ್ಛೇದನ ನೀಡಿದ್ದಾರೆ.
ಪತ್ನಿ ಆರತಿಗೆ ವಿಚ್ಛೇದನ ನೀಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

2009 ರಲ್ಲಿ ಆರ್ತಿ ಅವರನ್ನು ವಿವಾಹವಾದ ಜಯಂ ರವಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಪತ್ನಿಯೊಂದಿಗೆ ಕಲಹದ ಹಿನ್ನೆಲೆಯಲ್ಲಿ ದೂರವಾಗಿದ್ದ ಜಯಂ ರವಿ, ಇದೀಗ ಆಕೆಗೆ ವಿಚ್ಛೇದನ ನೀಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಕುರಿತು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಕಟಣೆ ಹೊರಡಿಸಿದ್ದಾರೆ.

“ಜೀವನವು ಹಲವು ಅಧ್ಯಾಯಗಳ ಪ್ರಯಾಣವಾಗಿದೆ, ಪ್ರತಿಯೊಂದೂ ತನ್ನದೇ ಆದ ಸವಾಲುಗಳು ಮತ್ತು ಅವಕಾಶಗಳನ್ನು ಹೊಂದಿದೆ. ನನ್ನ ಪ್ರಯಾಣವನ್ನು ಸಿನಿಮಾಗಳ ಮೂಲಕ ಮತ್ತು ಹೊರಗೆ ಯಾವಾಗಲೂ ವೀಕ್ಷಿಸುತ್ತಿರುವ ಎಲ್ಲರೊಂದಿಗೂ, ಚಿತ್ರರಂಗದಲ್ಲಿರುವ ನನ್ನ ಸ್ನೇಹಿತರು, ಮಾಧ್ಯಮ, ಸಾಮಾಜಿಕ ಮಾಧ್ಯಮ ಸ್ನೇಹಿತರು ಮತ್ತು ನನ್ನ ಅಭಿಮಾನಿಗಳೊಂದಿಗೆ ನಾನು ಯಾವಾಗಲೂ ಪ್ರಾಮಾಣಿಕ ಮತ್ತು ಪಾರದರ್ಶಕನಾಗಿರಲು ಪ್ರಯತ್ನಿಸುತ್ತೇನೆ. ಆದ್ದರಿಂದ, ನನ್ನ ವೈಯಕ್ತಿಕ ಜೀವನದಲ್ಲಿ ನೋವಿನ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾಗಿದೆ.

Tap to resize

ಸಾಕಷ್ಟು ಚಿಂತನೆ ಮತ್ತು ಚರ್ಚೆಯ ನಂತರ, ಆರ್ತಿಯೊಂದಿಗಿನ ನನ್ನ ದಾಂಪತ್ಯವನ್ನು ಕೊನೆಗೊಳಿಸಲು ನೋವಿನಿಂದ ನಿರ್ಧರಿಸಿದ್ದೇನೆ. ಇದು ನಾನು ಹಗುರವಾಗಿ ತೆಗೆದುಕೊಂಡ ನಿರ್ಧಾರವಲ್ಲ, ನನ್ನ ಪ್ರೀತಿಪಾತ್ರರ ಹಿತಾಸಕ್ತಿ ಮತ್ತು ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ನಿರ್ಧಾರ ಇದು. ಈ ಸಮಯದಲ್ಲಿ ನನ್ನ ಮತ್ತು ನನ್ನ ಪ್ರೀತಿಪಾತ್ರರ ಗೌಪ್ಯತೆಯನ್ನು ಗೌರವಿಸಬೇಕೆಂದು ನಾನು ಎಲ್ಲರಲ್ಲಿಯೂ ವಿನಂತಿಸುತ್ತೇನೆ. 

ಇದು ಸಂಪೂರ್ಣವಾಗಿ ನನ್ನ ವೈಯಕ್ತಿಕ ನಿರ್ಧಾರ. ದಯವಿಟ್ಟು ಅದನ್ನು ಹಾಗೆಯೇ ಗೌರವಿಸಿ. ನನ್ನ ನಟನೆಯ ಮೂಲಕ ನನ್ನ ಅಭಿಮಾನಿಗಳು ಮತ್ತು ಜನರಿಗೆ ಸಂತೋಷ ಮತ್ತು ಮನರಂಜನೆಯನ್ನು ನೀಡುವುದೇ ನನ್ನ ಆದ್ಯತೆ. ನಿಮ್ಮ ನಿರಂತರ ಬೆಂಬಲಕ್ಕೆ ಧನ್ಯವಾದಗಳು ಮತ್ತು ನೀವು ಯಾವಾಗಲೂ ನನ್ನನ್ನು ಆಶೀರ್ವದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಜಯಂ ರವಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಯಂ ರವಿ - ಆರ್ತಿ ದಂಪತಿಗಳ ನಿರ್ಧಾರ ಚಿತ್ರರಂಗ ಮತ್ತು ಅವರ ಕುಟುಂಬ ವಲಯದಲ್ಲಿ ದುಃಖವನ್ನುಂಟುಮಾಡಿದೆ.

Latest Videos

click me!