ಗುರುತೇ ಸಿಗದಷ್ಟು ಬದಲಾದ ನಟಿ ನಿವೇಥಾ ಥಾಮಸ್‌, ಬಳುಕುವ ಬಳ್ಳಿಯಾಗಿದ್ದ ನಟಿ ಹೀಗೆ ಬದಲಾಗಿದ್ದೇಕೆ?

Published : Sep 04, 2024, 05:40 PM IST

 Nivetha Thomas physical  Transformation ನಟಿ ನಿವೇಥಾ ಥಾಮಸ್‌ ಅವರು ತಮ್ಮ ಮುಂದಿನ ಚಿತ್ರ '35 ಚಿನ್ನ ಕಥಾ ಕಾದು' ಸಿನಿಮಾದಲ್ಲಿನ ಪಾತ್ರಕ್ಕಾಗಿ ತಮ್ಮ ದೇಹದ ತೂಕವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಎರಡು ಮಕ್ಕಳ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

PREV
17
ಗುರುತೇ ಸಿಗದಷ್ಟು ಬದಲಾದ ನಟಿ ನಿವೇಥಾ ಥಾಮಸ್‌, ಬಳುಕುವ ಬಳ್ಳಿಯಾಗಿದ್ದ ನಟಿ ಹೀಗೆ ಬದಲಾಗಿದ್ದೇಕೆ?
Nivetha Thomas

ತಮ್ಮ ಸಿನಿಮಾಗಳಿಗೆ ನಟ-ನಟಿಯರು ತೋರುವ ಕಮೀಟ್‌ಮೆಂಟ್‌ನ ಹೇಗೆ ಗುರುತಿಸಬಹುದು? ಕೆಲವೊಬ್ಬರು ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ಮಾಡಿಕೊಳ್ಳುವ ಬದಲಾವಣೆಗಳಿಂದ. ಕೆಲವರು ಸಿನಿಮಾದಲ್ಲಿನ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡರೆ, ಇನ್ನೂ ಕೆಲವರು ಸಿಕ್ಸ್‌ಪ್ಯಾಕ್‌ ವರ್ಕ್ಔಟ್‌ ಮಾಡುತ್ತಾರೆ. ಇನ್ನೂ ಕೆಲವರೂ ಸಣಕಲು ಕಡ್ಡಿಯಾಗುತ್ತಾರೆ.

27
Nivetha thomas

ಈ ಹಿಂದೆ ನಟ ಅಮೀರ್‌ ಖಾನ್‌, ದಕ್ಷಿಣ ನಟಿ ಅನುಷ್ಕಾ ಶೆಟ್ಟಿ, ಸರಬ್ಜಿತ್‌ ಸಿನಿಮಾಗಾಗಿ ರಣದೀಪ್‌ ಹೂಡಾ ಇಂಥ ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಈಗ ನಟಿ ನಿವೇಥಾ ಥಾಮಸ್‌ ಕೂಡ ಸಿನಿಮಾಕ್ಕಾಗಿ ಊದಿಕೊಂಡು ಬಿಟ್ಟಿದ್ದಾರೆ. 2015ರಲ್ಲಿ ಕಮಲ್‌ ಹಾಸನ್‌ ಅವರ ಪಾಪನಾಸಂ ಸಿನಿಮಾದ ಮೂಲಕ ಪರಿಚಿತರಾದ ನಟಿ ನಿವೇಥಾ ಥಾಮಸ್‌ ತಮ್ಮ ಮುಂದಿನ ಚಿತ್ರ 35 ಚಿನ್ನ ಕಥಾ ಕಾದು ಸಿನಿಮಾಕ್ಕಾಗಿ ಸಂಪೂರ್ಣವಾಗಿ ಬದಲಾಗಿದ್ದಾರೆ.

37

ಒಂದು ಕಾಲದಲ್ಲಿ ಬಳುಕುವ ಬಳ್ಳಿಯಂತಿದ್ದ ನಿವೇಥಾ ಥಾಮಸ್‌ ಈಗ ಗುರುತೇ ಸಿಗದಷ್ಟು ಬೀಗಿಕೊಂಡಿದ್ದಾರೆ. 35 ಚಿನ್ನ ಕಥಾ ಕಾದು ಸಿನಿಮಾದಲ್ಲಿ ಎರಡು ಮಕ್ಕಳ ತಾಯಿಯಾಗಿ ಅವರು ನಟಿಸುತ್ತಿದ್ದು, ಆ ಪಾತ್ರಕ್ಕಾಗಿ ಈ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್‌ 6 ರಂದು ಬಿಡುಗಡೆಯಾಗಲಿದೆ.

47

ಇತ್ತೀಚೆಗೆ ಸಿನಿಮಾದ ಪ್ರಮೋಷನ್‌ಗಾಗಿ ಅವರು ಬಿಗ್‌ ಬಾಸ್‌ ತೆಲುಗು ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಅವರನ್ನು ಕಂಡು ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ. ಇದೇ ವೇಳೆ ಸಿನಿಮಾದಲ್ಲಿನ ತಾಯಿಯ ಪಾತ್ರಕ್ಕಾಗಿ ಈ ರೀತಿ ಬದಲಾವಣೆ ಆಗಿರುವುದಾಗಿ ನಿವೇಥಾ ತಿಳಿಸಿದ್ದಾರೆ.

57

ಈ ಪಾತ್ರದಲ್ಲಿ ನಟಿಸಲು ತನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ ಅವರು, 35-ಚಿನ್ನ ಕಥಾ ಕಾದು ಸರಳ ಮತ್ತು ಆಕರ್ಷಕ ಕಥೆಯಾಗಿದೆ. ಸರಸ್ವತಿ ಎಂಬ ಗೃಹಿಣಿಯ ಪಾತ್ರ ಮಾಡಿದ್ದೇನೆ. 20 ಅಥವಾ 22 ನೇ ವಯಸ್ಸು ಇರುವಾಗಲೇ ಭಾರತದಲ್ಲಿ ಹುಡುಗಿಯರಿಗೆ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಕೇಳಲಾಗುತ್ತದೆ. ನಾವು ಕೂಡ ಇದಕ್ಕೆ ಒಗ್ಗಿಕೊಂಡು ಹೋಗಿದ್ದೇವೆ. ಹಾಗಾಗಿ ಪಾತ್ರವನ್ನು ನಿರ್ವಹಿಸಲು ನನಗೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಿದ್ದಾರೆ.

67

35-ಚಿನ್ನ ಕಥಾ ಕಾದು ಚಿತ್ರವನ್ನು ನಂದ ಕಿಶೋರ್ ಎಮಾನಿ ನಿರ್ದೇಶಿಸಿದ್ದಾರೆ. ಇದರಲ್ಲಿ ಗೌತಮಿ, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯರಾಜ್, ವಿಶ್ವದೇವ್ ರಾಚಕೊಂಡ, ಅನನ್ಯಾ, ಅರುಣ್ ದೇವ್ ಮತ್ತು ಕೃಷ್ಣ ತೇಜ ಮುಂತಾದ ಕಲಾವಿದರು ನಟಿಸಿದ್ದಾರೆ. ಎಸ್ ಒರಿಜಿನಲ್ಸ್, ಸುರೇಶ್ ಪ್ರೊಡಕ್ಷನ್ಸ್ ಮತ್ತು ವಾಲ್ಟೇರ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ವಿಶ್ವದೇವ್ ರಾಚಕೊಂಡ, ಸಿದ್ಧಾರ್ಥ್ ರಾಳ್ಳಪಲ್ಲಿ ಮತ್ತು ಸೃಜನ್ ಯರಬೋಲು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ ಮತ್ತು ವಿವೇಕ್ ಸಾಗರ್ ಸಂಗೀತ ಸಂಯೋಜಿಸಿದ್ದಾರೆ.

77

ಧರಣಿ ನಿರ್ದೇಶನದ ಕುರುವಿ ಚಿತ್ರದ ಮೂಲಕ ನಿವೇತಾ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಆಗಸ್ಟ್ 30 ರಂದು ಬಿಡುಗಡೆಯಾದ HIT 3 ನಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡರು. ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ನಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರ ಕೆಲವು ಜನಪ್ರಿಯ ಸಿನಿಮಾಗಳಾ ಶಾಖಿಣಿ ಡಾಖಿಣಿ, ವಕೀಲ್ ಸಾಬ್ ಮತ್ತು ನಿನ್ನು ಕೋರಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories