23ರ ಹರೆಯದಲ್ಲೇ 250 ಕೋಟಿ ಆಸ್ತಿ, ಸ್ಟಾರ್ ನಟಿಯರಿಗೂ ಶಾಕ್ ಕೊಟ್ಟ ಹೀರೋಯಿನ್ ಯಾರು?
23 ವರ್ಷದ ಚಿಕ್ಕ ವಯಸ್ಸಿನಲ್ಲೇ ಒಬ್ಬ ನಟಿ 250 ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ. ಸ್ಟಾರ್ ನಟಿಯರಿಗೂ ಸಾಧ್ಯವಾಗದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಹಾಗಾದರೆ ಆ ಬ್ಯೂಟಿ ಯಾರು?
23 ವರ್ಷದ ಚಿಕ್ಕ ವಯಸ್ಸಿನಲ್ಲೇ ಒಬ್ಬ ನಟಿ 250 ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ. ಸ್ಟಾರ್ ನಟಿಯರಿಗೂ ಸಾಧ್ಯವಾಗದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಹಾಗಾದರೆ ಆ ಬ್ಯೂಟಿ ಯಾರು?
ಫಿಲ್ಮ್ ಇಂಡಸ್ಟ್ರಿಯಲ್ಲಿ ಎಷ್ಟೇ ಟ್ಯಾಲೆಂಟ್ ಇದ್ದರೂ, ಸ್ವಲ್ಪ ಅದೃಷ್ಟವೂ ಇರಬೇಕು ಅಂತಾರೆ ಹಿರಿಯ ನಟ ಕೋಟಾ ಶ್ರೀನಿವಾಸ ರಾವ್. ಅದು ಇಲ್ಲದಿದ್ದರೆ ಇಂಡಸ್ಟ್ರಿಯಲ್ಲಿ ಬೆಳೆಯೋದು ಕಷ್ಟ. ಒಂದು ವೇಳೆ ಇಂಡಸ್ಟ್ರಿಗೆ ಬಂದರೂ ಸ್ಟಾರ್ ಆಗಲು ಸಾಧ್ಯವಿಲ್ಲ. ಕೋಟಿ ಸಂಪಾದಿಸಲು ಸಾಧ್ಯವಿಲ್ಲ. ಸಂಪಾದಿಸಿದರೂ ಕೊನೆವರೆಗೂ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವರು ಮಾತ್ರ ಅದೃಷ್ಟದೊಂದಿಗೆ ಇಂಡಸ್ಟ್ರಿಗೆ ಬರುತ್ತಾರೆ. ಅವರಿಗೆ ಚಿಕ್ಕ ವಯಸ್ಸಿನಲ್ಲೇ ಅದೃಷ್ಟ ಒಲಿಯುತ್ತದೆ. ಅಂತಾ ಹೀರೋಯಿನ್ ಯಾರು ಗೊತ್ತಾ?
ಬಾಲ್ಯ ಕಲಾವಿದೆಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಜನ್ನತ್, 2001 ಆಗಸ್ಟ್ 29 ರಂದು ಮುಂಬೈನಲ್ಲಿ ಜನಿಸಿದರು. 2008 ರಲ್ಲಿ ಚಾಂದ್ ಕೆ ಪರ್ ಚಲೋ ಧಾರಾವಾಹಿ ಮೂಲಕ ಟೆಲಿವಿಷನ್ ರಂಗಕ್ಕೆ ಕಾಲಿಟ್ಟರು. ನಂತರ ಸೀರಿಯಲ್ ಗಳಲ್ಲಿ ಅವಕಾಶ ಸಿಕ್ಕಿತು. ಇದರಿಂದ ಜನ್ನತ್ ಜುಬೇರಾ ಕಿರುತೆರೆಯ ಸ್ಟಾರ್ ಆದರು. ಸೌಂದರ್ಯ ಮತ್ತು ಅಭಿನಯದಿಂದ ಗಮನ ಸೆಳೆಯುತ್ತಿರುವ ಈ ಬ್ಯೂಟಿ ಕೈತುಂಬಾ ಸಂಪಾದನೆಯನ್ನೂ ಹೊಂದಿದ್ದಾರೆ. ಅಭಿಮಾನಿಗಳ ಜೊತೆಗೆ ಆಸ್ತಿಯನ್ನೂ ಸಹ ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸ್ಟಾರ್ ನಟಿಯರನ್ನು ಸಹ ಹಿಂದಿಕ್ಕಿದ್ದಾರೆ.
ಈ ಮುದ್ದಾದ ಹುಡುಗಿ ಫಿಲ್ಮ್ ಇಂಡಸ್ಟ್ರಿಗೆ ಕಾಲಿಟ್ಟ ತಕ್ಷಣ ಸೌಂದರ್ಯ ಮತ್ತು ಅಭಿನಯದಿಂದ ಎಲ್ಲರನ್ನೂ ಸೆಳೆದರು. ತಮ್ಮ ಪ್ರತಿಭೆಯಿಂದ ದೇಶಾದ್ಯಂತ ಉತ್ತಮ ಹೆಸರು ಗಳಿಸಿದ್ದಾರೆ. 23 ವರ್ಷ ವಯಸ್ಸಿಗೆ 250 ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ ಬಾಲಿವುಡ್ ಬ್ಯೂಟಿ ಜನ್ನತ್ ಜುಬೇರ್ ರಹಮಾನಿ. ಚಿಕ್ಕ ವಯಸ್ಸಿನಲ್ಲಿಯೇ ಇಂಡಸ್ಟ್ರಿಗೆ ಕಾಲಿಟ್ಟ ಜನ್ನತ್ ಜುಬೇರ್ ಕಡಿಮೆ ಸಮಯದಲ್ಲಿಯೇ ಉತ್ತಮ ಕ್ರೇಜ್ ಗಳಿಸಿದ್ದಾರೆ.
ಮುಖ್ಯವಾಗಿ ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋಯಿಂಗ್ ಇದೆ. ಎಷ್ಟರ ಮಟ್ಟಿಗೆ ಅಂದರೆ ಶಾರುಖ್ ಖಾನ್ ಗಿಂತಲೂ ಜನ್ನತ್ ಫಾಲೋಯಿಂಗ್ ಜಾಸ್ತಿ ಇದೆ. ಶಾರುಖ್ ಖಾನ್ ಗೆ ಇನ್ ಸ್ಟಾಗ್ರಾಮ್ ನಲ್ಲಿ 46 ಮಿಲಿಯನ್ ಫಾಲೋವರ್ಸ್ ಇದ್ದರೆ, ಜನ್ನತ್ ಜುಬೇರ್ ಗೆ ಇನ್ ಸ್ಟಾಗ್ರಾಮ್ ನಲ್ಲಿ 49.7 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಜನ್ನತ್ ಕಿರುತೆರೆಯಲ್ಲಿ ಹೆಚ್ಚು ಸಂಭಾವನೆ ಪಡೆಯುವ ತಾರೆಯಾಗಿದ್ದಾರೆ. ಬಾಲಿವುಡ್ ನಲ್ಲಿ ಹೆಚ್ಚಾಗಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ಈ ಬ್ಯೂಟಿ ಖತ್ರೋನ್ ಕೆ ಖಿಲಾಡಿ ಶೋನಲ್ಲಿ ಒಂದು ಎಪಿಸೋಡ್ ಗೆ 18 ಲಕ್ಷದವರೆಗೂ ಸಂಭಾವನೆ ಪಡೆದಿದ್ದಾರೆ. ಮತ್ತೊಂದು ಶೋನಲ್ಲಿ ಪ್ರತಿ ಎಪಿಸೋಡ್ ಗೆ 2 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಬೇರೆ ಸಮುದಾಯದಲ್ಲಿ ಮದುವೆಯಾದ ಕನ್ನಡದ ನಟ-ನಟಿಯರು; ನೀವು ಗೆಸ್ ಮಾಡಿರಲ್ಲ ಅಲಾ..!
ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಮೊತ್ತದ ಆಸ್ತಿ ಸಂಪಾದಿಸಿರುವ ಜನ್ನತ್, 21 ವರ್ಷ ವಯಸ್ಸಿನಲ್ಲಿ ಮುಂಬೈನಲ್ಲಿ ಸ್ವಂತ ಮನೆ ಖರೀದಿಸಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾ ಸಂಪಾದನೆಯಿಂದ ಹೊರಗಿನ ವ್ಯಾಪಾರಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಕೆಲವು ಸ್ವಂತ ವ್ಯಾಪಾರಗಳನ್ನು ಸಹ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗೆ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಮೊತ್ತದ ಆಸ್ತಿ ಸಂಪಾದಿಸಿದ ಕಿರುತೆರೆಯ ತಾರೆಯಾಗಿ ಅವರು ಗುರುತಿಸಿಕೊಂಡಿದ್ದಾರೆ.
ವಿಯೆಟ್ನಾಂನಲ್ಲಿ ಲಕ್ಷ್ಮೀ ನಿವಾಸ ಚೆಲುವೆ ಬೊಂಬಾಟ್ ಲುಕ್