'ಆ..' ಸೀರಿಯಸ್‌ ಸಮಸ್ಯೆಯಿಂದ ಬಳಲುತ್ತಿದ್ದಾರಾ ನಟಿ ಶ್ರುತಿ ಹಾಸನ್? ದತ್ತು ಸ್ವೀಕರಿಸೋಕೂ ರೆಡಿಯಾಗಿದ್ದು ಅದಕ್ಕೇನಾ?

Published : Sep 20, 2026, 11:06 AM IST

ಹಲವು ವಿಚಾರಗಳಲ್ಲಿ ಮುಕ್ತವಾಗಿ ಮಾತನಾಡುವ ನಟಿ ಶ್ರುತಿ ಹಾಸನ್ ಇದೀಗ ತಮ್ಮ ತಾಯ್ತನದ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. "ದತ್ತು ಸ್ವೀಕರಿಸಿಯಾದರೂ ಸರಿ, ನಾನು ತಾಯಿಯಾಗಬೇಕು" ಎಂಬ ಅವರ ಮಾತು ಇದೀಗ ಭಾರೀ ಗಮನ ಸೆಳೆದಿದೆ.

PREV
16

Shruti Haasan about her Motherhood-PCOS ಸಮಸ್ಯೆಯಿಂದ ಬಳಲುತ್ತಿದ್ದಾರಾ ಶ್ರುತಿ ಹಾಸನ್? ದತ್ತು ಸ್ವೀಕರಿಸಿಯಾದರೂ ತಾಯಿಯಾಗಬೇಕು ಎಂದ ನಟಿ!

ಸಿನಿಮಾ, ವೈಯಕ್ತಿಕ ಜೀವನ, ಆರೋಗ್ಯ... ಹೀಗೆ ಹಲವು ವಿಚಾರಗಳಲ್ಲಿ ಮುಕ್ತವಾಗಿ ಮಾತನಾಡುವ ನಟಿ ಶ್ರುತಿ ಹಾಸನ್ ಇದೀಗ ತಮ್ಮ ತಾಯ್ತನದ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. "ದತ್ತು ಸ್ವೀಕರಿಸಿಯಾದರೂ ಸರಿ, ನಾನು ತಾಯಿಯಾಗಬೇಕು" ಎಂಬ ಅವರ ಮಾತು ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಆದರೆ ಈ ಮಾತಿನ ಹಿಂದೆ ಹಲವು ವರ್ಷಗಳ ಆರೋಗ್ಯದ ಕುರಿತ ಆತಂಕವೊಂದು ಇದೆ ಎಂಬುದು ಮತ್ತಷ್ಟು ಕುತೂಹಲ ಮೂಡಿಸಿದೆ.

26

40 ವರ್ಷದ ಶ್ರುತಿ ಹಾಸನ್, ತಾಯ್ತನದ ಕುರಿತು ತಮ್ಮ ಆಲೋಚನೆಗಳು ಹಲವು ವರ್ಷಗಳಿಂದ PCOS (Polycystic Ovary Syndrome) ಅನುಭವದ ಸುತ್ತ ರೂಪುಗೊಂಡಿವೆ ಎಂದು ಹೇಳಿದ್ದಾರೆ. ಹದಿಹರೆಯದಲ್ಲೇ ತಮ್ಮ ಭವಿಷ್ಯದ ಗರ್ಭಧಾರಣೆಯ ಬಗ್ಗೆ ಆತಂಕ ಮೂಡಿತ್ತು ಎನ್ನುವುದು ಅವರ ಮಾತು.

36

ಸೋಹಾ ಅಲಿ ಖಾನ್ ಅವರ ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಶ್ರುತಿ, ತಮಗೆ ಕೇವಲ 14 ವರ್ಷ ವಯಸ್ಸಿನಲ್ಲೇ PCOS ಮತ್ತು ಗರ್ಭಧಾರಣೆಯ ನಡುವಿನ ಸಂಬಂಧದ ಬಗ್ಗೆ ತಿಳಿದಿತ್ತು ಎಂದು ಹೇಳಿದ್ದಾರೆ. ಇದರಿಂದಾಗಿ ಮುಂದೆ ಸಹಜವಾಗಿ ತಾಯಿಯಾಗುವುದು ಕಷ್ಟವಾಗಬಹುದು ಎಂಬ ಭಾವನೆ ಹಲವು ವರ್ಷಗಳ ಕಾಲ ಅವರ ಮನಸ್ಸಿನಲ್ಲಿತ್ತು.

46

ಆದರೆ ನಂತರ ಭೇಟಿಯಾದ ಸ್ತ್ರೀರೋಗ ತಜ್ಞೆ ಡಾ. ಧ್ರುಪ್ತಿ ದೇಧಿಯಾ ಅವರ ಮಾತು ಶ್ರುತಿಯ ಈ ದೃಷ್ಟಿಕೋನವನ್ನೇ ಬದಲಿಸಿತಂತೆ. ತಾಯ್ತನವನ್ನು ಸಂಪೂರ್ಣವಾಗಿ ತಳ್ಳಿಹಾಕುವ ಬದಲು, ತಾವು ಯಾವಾಗ ತಾಯಿಯಾಗಲು ಸಿದ್ಧರಾಗುತ್ತಾರೋ ಆಗ ಆ ಸಾಧ್ಯತೆಯನ್ನು ಪರಿಗಣಿಸಬಹುದು ಎಂಬ ಆತ್ಮವಿಶ್ವಾಸವನ್ನು ವೈದ್ಯರು ನೀಡಿದರು ಎಂದು ನಟಿ ಹೇಳಿದ್ದಾರೆ.

56

"ನಾನು 14 ವರ್ಷದವಳಿದ್ದಾಗಿನಿಂದ ಇದು ಕಷ್ಟಕರವಾಗಿರುತ್ತದೆ ಎಂದುಕೊಂಡಿದ್ದೆ. ಆದರೆ ವೈದ್ಯರು ನನ್ನ ಮನಸ್ಸನ್ನು ತೆರೆದರು. ನಾನು ಯಾವಾಗ ಅಮ್ಮನಾಗಲು ಸಿದ್ಧಳಾಗುತ್ತೇನೋ, ಆಗ ತಾಯಿಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು" ಎಂದು ಶ್ರುತಿ ಹೇಳಿದ್ದಾರೆ.

66

ಇಷ್ಟೇ ಅಲ್ಲ, ಸಹಜವಾಗಿ ತಾಯಿಯಾಗುವ ಪ್ರಯತ್ನದ ಜೊತೆಗೆ ದತ್ತು ಸ್ವೀಕಾರಕ್ಕೂ ತಾವು ಸಿದ್ಧ ಎಂದು ಶ್ರುತಿ ಸ್ಪಷ್ಟಪಡಿಸಿದ್ದಾರೆ. "ನಾನು ನಿಜವಾಗಿಯೂ ತಾಯಿಯಾಗಲು ಬಯಸುತ್ತೇನೆ. ನೈಸರ್ಗಿಕವಾಗಿ ತಾಯಿಯಾಗಲು ಪ್ರಯತ್ನಿಸಲು ಇಷ್ಟಪಡುತ್ತೇನೆ. ಆದರೆ ದತ್ತು ಸ್ವೀಕರಿಸುವುದನ್ನೂ ನಾನು ಪರಿಗಣಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಹೀಗಾಗಿ ಶ್ರುತಿ ಹಾಸನ್ ಅವರ ಮಾತು ಕೇವಲ ತಾಯ್ತನದ ಆಸೆಯಷ್ಟೇ ಅಲ್ಲ, ವರ್ಷಗಳ ಆತಂಕವನ್ನು ಮೀರಿ ಭವಿಷ್ಯವನ್ನು ಆಶಾವಾದದಿಂದ ನೋಡುವ ಅವರ ಮನೋಭಾವವನ್ನೂ ತೆರೆದಿಟ್ಟಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories