ಈ ವರ್ಷ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸೆಲೆಬ್ರಿಟಿ ಜೋಡಿಗಳಿವು, ಯಾವ ಜೋಡಿಯ ಮಗುವಿಗೆ ನೀವು ಕಾಯ್ತದ್ದೀರಾ?

First Published | Mar 28, 2024, 7:45 PM IST

ಈ ವರ್ಷ ಸಾಕಷ್ಟು ಸೆಲೆಬ್ರಿಟಿ ಜೋಡಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಂಥ ಜೋಡಿಗಳ ವಿವರ ಇಲ್ಲಿದೆ.

ರಿಚಾ ಚಡ್ಡಾ ಹಾಗೂ ಅಲಿ ಫಜಲ್‌ ಜೋಡಿ ಈ ವರ್ಷ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ತೀರಾ ಇತ್ತೀಚೆಗೆ ರಿಚಾ ಚಡ್ಡಾ ಗರ್ಭಿಣಿಯಾಗಿರೋದನ್ನು ಅಲಿ ಫಜಲ್‌ ಘೋಷಿಸಿದ್ದರು.

ಕನ್ನಡದ ಪ್ರಮುಖ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದಾದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್‌ ಕೃಷ್ಣ ಕೂಡ ಇದೇ ವರ್ಷ ಮೊದಲ ಮಗುವಿನ ನಿರೀಕ್ಷೆ ಇರಿಸಿದ್ದಾರೆ.

Tap to resize

ಕನ್ನಡದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ಉಲ್ಲಾಸ ಉತ್ಸಾಹ ಚಿತ್ರದಲ್ಲಿ ನಟಿಸಿದ್ದ ಯಾಮಿ ಗೌತಮ್‌ ಕೂಡ ಗರ್ಭಿಣಿಯಾಗಿದ್ದಾರೆ. ಅವರ ಪತಿ ನಿರ್ದೇಶಕ ಆದಿತ್ಯ ಧರ್‌ ಈ ಸುದ್ದಿಯನ್ನು ತಿಳಿಸಿದ್ದರು.

2018ರಲ್ಲಿ ನಟ ರಣವೀರ್‌ ಸಿಂಗ್‌ ಅವರನ್ನು ಮದುವೆಯಾಗಿದ್ದ ನಟಿ ದೀಪಿಕಾ ಪಡುಕೋಣೆ ಕೂಡ ಈ ವರ್ಷ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತಾಗಿ ಇಬ್ಬರೂ ಕೂಡ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡು ಸುದ್ದಿ ತಿಳಿಸಿದ್ದರು.

ಕನ್ನಡದ ಮತ್ತೊಂದು ಜೋಡಿ ಆದಿತಿ ಪ್ರಭುದೇವ ಹಾಗೂ ಯಶಸ್‌ ಶೀಘ್ರದಲ್ಲೇ ಮೊದಲ ಮಗುವಿಗೆ ತಂದೆ-ತಾಯಿ ಆಗುವ ಸಾಧ್ಯತೆ ಇದೆ. ಇತ್ತೀಚೆಗೆ ನಟಿ ತಮ್ಮ 9ನೇ ತಿಂಗಳ ಸೀಮಂತದ ಫೋಟೋಶೂಟ್‌ ಕೂಡ ಮಾಡಿಸಿದ್ದರು.

ಹೆಬ್ಬುಲಿ ಚಿತ್ರದಲ್ಲಿ ನಟಿಸಿದ್ದ ಅಮಲಾ ಪೌಲ್‌ ಹಾಗೂ ಜಗತ್‌ ದೇಸಾಯಿ ಕೂಡ ಇದೇ ವರ್ಷದಲ್ಲಿ ತಂದೆ ತಾಯಿ ಆಗಲಿದ್ದಾರೆ. ನಟಿ ಅಮಲಾ ಪೌಲ್‌ಗೆ ಇದು 2ನೇ ಮದುವೆಯಾಗಿದೆ.

ಬಾಲಿವುಡ್‌ನ ಜೋಡಿಗಳ ಪೈಕಿ ಮತ್ತೊಂದು ಜೋಡಿ ವರುಣ್‌ ಧವನ್‌ ಹಾಗೂ ನತಾಶಾ ಕೂಡ ಈ ಬಾರಿ ತಾವು ತಂದೆ ತಾಯಿ ಆಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

Latest Videos

click me!