ಮದ್ವೆ ಆಗಿ 8 ವರ್ಷ ಆಯ್ತು ಮಗು ಬೇಡ್ವಾ ಎಂದ ನೆಟ್ಟಿಗರಿಗೆ 'ಇವ್ನು ದೊಡ್ಡವನಾಗ್ಲಿ ಮಗು ಮಾಡ್ಕೋತೀನಿ..' ಎಂದ ನಟಿ!

Published : Mar 24, 2024, 02:02 PM IST

2007ರಲ್ಲಿ ಬಿಡುಗಡೆಯಾದ ಹ್ಯಾಪಿ ಡೇಸ್‌ ಸಿನಿಮಾ ಯಾರಿಗೆ ಗೊತ್ತಿಲ್ಲ. ಈ ಸಿನಿಮಾದ ಮೂಲಕ ಫೇಮಸ್‌ ಆಗಿದ್ದ ನಟ ವರುಣ್‌ ಸಂದೇಶ್‌, 2016ರಲ್ಲಿ ನಟಿ ವಿತಿಕಾ ಶೇರು ಅವರನ್ನು ವಿವಾಹವಾಗಿದ್ದರು.

PREV
114
ಮದ್ವೆ ಆಗಿ 8 ವರ್ಷ ಆಯ್ತು ಮಗು ಬೇಡ್ವಾ ಎಂದ ನೆಟ್ಟಿಗರಿಗೆ 'ಇವ್ನು ದೊಡ್ಡವನಾಗ್ಲಿ ಮಗು ಮಾಡ್ಕೋತೀನಿ..' ಎಂದ ನಟಿ!

ತೆಲುಗು ನಟಿ ವಿತಿಕಾ ಶೇರು ಸಖತ್‌ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ನೆಟ್ಟಿಗರ ಪದೇ ಪದೇ ಪ್ರಶ್ನೆಗೆ ನೀಡಿರುವ ಒಂದು ಉತ್ತರ.

214

ವಿತಿಕಾ ಶೇರು ಎಂದರೆ ಯಾರಿಗೂ ಗುರುತು ಸಿಗಲಿಕ್ಕಿಲ್ಲ. 2007ರಲ್ಲಿ ಹ್ಯಾಪಿಡೇಸ್‌ ಸಿನಿಮಾದ ಮೂಲಕ ಸಖತ್‌ ಹೆಸರು ಮಾಡಿದ್ದ ನಟ ವರುಣ್‌ ಸಂದೇಶ್‌ ಅವರ ಪತ್ನಿ ವಿತಿಕಾ ಶೇರು.

314

2015ರಲ್ಲಿ ಬಿಡುಗಡೆಯಾದ ಪದ್ದಾನಂದಿ ಪ್ರೇಮಲೋ ಮಾರಿ ಸಿನಿಮಾದಲ್ಲಿ ವಿತಿಕಾ ಶೇರು ಹಾಗೂ ವರುಣ್ ಸಂದೇಶ್‌ ಒಟ್ಟಿಗೆ ನಟಿಸಿದ್ದರು.

414

ಈ ಸಮಯದಲ್ಲಿಯೇ ಪ್ರೀತಿಯ ಬಲೆಗೆ ಬಿದ್ದಿದ್ದ ಇವರಿಬ್ಬರೂ ಮರು ವರ್ಷವೇ ಮದುವೆಯಾಗಿದ್ದರು. ತೆಲುಗು ಚಿತ್ರರಂಗದ ಸೂಪರ್‌ ಜೋಡಿಗಳಲ್ಲಿ ಇವರದೂ ಒಂದು.

514

ಇತ್ತೀಚೆಗೆ ವಿತಿಕಾ ಶೇರು ತಮ್ಮ ಇನ್ಸ್‌ಟಾಗ್ರಾಮ್‌ ಪುಟದಲ್ಲಿ ಯಾವುದೇ ಫೋಟೋ ಹಂಚಿಕೊಂಡರೂ ಅದರ ಕೆಳಗೆ ಒಂದು ಪ್ರಶ್ನೆ ಇದ್ದೇ ಇರುತ್ತಿತ್ತು. ಮದುವೆಯಾಗಿ ಇಷ್ಟು ವರ್ಷವಾಯಿತು? ಮಗು ಮಾಡಿಕೊಳ್ಳುವುದು ಯಾವಾಗ? ಎನ್ನುವ ಪ್ರಶ್ನೆಗಳು ಬರುತ್ತಿದ್ದವು.

614

ಇದರಿಂದ ರೋಸಿ ಹೋಗಿದ್ದ ವಿತಿಕಾ ಶೇರು ಎರಡು ದಿನಗಳ ಹಿಂದೆ ಉತ್ತರ ಎನ್ನುವಂತೆ ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

714

ಈ ವಿಡಿಯೋದಲ್ಲಿ ವಿತಿಕಾ ಶೇರು ಕಾಲಿನ ಮೇಲೆ ವರುಣ್‌ ಸಂದೇಶ್‌ ಮಲಗಿಕೊಂಡಿದ್ದಾರೆ. ಮಗು ಮಾಡಿಕೊಳ್ಳುವುದು ಯಾವಾಗ ಎಂದು ನೀವೆಲ್ಲಾ ಪ್ರಶ್ನೆ ಮಾಡ್ತಿದ್ದೀರಲ್ಲ? ಈ ಮಗು (ವರುಣ್‌ ಸಂದೇಶ್‌) ದೊಡ್ಡವನಾದ ಮೇಲೆ ಮಗು ಮಾಡಿಕೊಳ್ಳುತ್ತೇನೆ ೆಂದು ಬರೆದುಕೊಂಡಿದ್ದಾರೆ.

814

ಆ ಮೂಲಕ ಪ್ರತಿ ಬಾರಿಯೂ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ನೆಟ್ಟಿಗರಿಗೆ ವಿತಿಕಾ ಶೇರು ಬೆಂಕಿ ಉತ್ತರ ನೀಡಿದ್ದಾರೆ. 

914

ಇನ್ನು ವಿತಿಕಾ ಶೇರು 2016ರಲ್ಲಿ ಮದುವೆಯಾದ ದಿನದಿಂದಲೂ ಸಿನಿಮಾರಂಗದಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ವರುಣ್‌ ಸಂದೇಶ್‌ ಅಭಿಯನದ ಎರಡು ಚಿತ್ರಗಳು ಕಳೆದ ವರ್ಷ ಬಿಡುಗಡೆಯಾಗಿದ್ದು, ಇನ್ನೂ ಎರಡು ಶೂಟಿಂಗ್‌ ಹಂತದಲ್ಲಿದೆ.

1014

ಬಿಗ್‌ ಬಾಸ್‌ ಸೀಸನ್‌-3ಯಲ್ಲೂ ಭಾಗವಹಿಸಿದ್ದ ಜೋಡಿ ಅಲ್ಲಿಯೂ ಸಾಕಷ್ಟು ಟಾಸ್ಕ್‌ಗಳಲ್ಲಿ ಭಾಗಿಯಾಗಿತ್ತು. ಆದರೆ, ಫೈನಲ್‌ಗೇರಲು ಸಾಧ್ಯವಾಗಿರಲಿಲ್ಲ.

1114

ಬಿಗ್‌ ಬಾಸ್‌ ಶೋನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ವಿತಿಕಾ ಶೇರು ಕುರಿತಾಗಿ ಸಾಕಷ್ಟು ಟ್ರೋಲ್‌ ಮಾಡಲಾಗಿತ್ತು. ಇದರಿಂದ ಕೆಲ ಕಾಲ ಈಕೆ ಖಿನ್ನತೆಗೂ ಹೋಗಿದ್ದರು,

1214

ಈಗ ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ಅನ್ನು ಹೊಂದಿರುವ ವಿತಿಕಾ ಶೇರು ಸಾಕಷ್ಟು ವಿಶೇಷವಾದ ಮಾಹಿತಿಗಳು ಹಾಗೂ Vlogs ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

1314

ಜನರು ಪದೇ ಪದೇ ನನಗೆ ಒಂದೇ ಪ್ರಶ್ನೆ ಕೇಳುತ್ತಿರುತ್ತಾರೆ? ಮಗು ಮಾಡಿಕೊಳ್ಳುವುದು ಯಾವಾಗ? ಅದಕ್ಕೆ ನನ್ನ ಉತ್ತರ ಇಲ್ಲಿದೆ ಎಂದು ವಿತಿಕಾ ಶೇರು ಬರೆದುಕೊಂಡಿದ್ದಾರೆ.

1414

ಆ ಮೂಲಕ ತನ್ನ ಪತಿಯೇ ತನ್ನ ಮಗು ಎಂದು ವಿತಿಕಾ ಶೇರು ಸೂಚ್ಯವಾಗಿ ತಿಳಿಸಿದ್ದಾರೆ. ವಿತಿಕಾ ಅವರು ನೀಡಿರುವ ಉತ್ತರಕ್ಕೂ ಸಾಕಷ್ಟು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read more Photos on
click me!

Recommended Stories