ವಿಚ್ಛೇದಿತ ನಿರ್ಮಾಪಕನ ಜೊತೆ ಪುನೀತ್‌ ರಾಜ್‌ಕುಮಾರ್‌ ಸಿನಿಮಾದ ನಟಿಯ ಮದುವೆ?

Published : Mar 23, 2024, 10:27 PM IST

ತೆಲುಗು ಸಿನಿಮಾ ಅಂಗಳದಲ್ಲಿ ಮತ್ತೊಂದು ನಟಿಯ ಮದುವೆ ವಿಚಾರ ಸಖತ್‌ ಸುದ್ದಿಯಾಗಿದೆ. ತೆಲುಗು ಚಿತ್ರರಂಗದಲ್ಲಿ ಸ್ಟಾರ್‌ ನಟರೊಂದಿಗೆ ನಟಿಸಿರುವ ನಟಿ, ನಿರ್ಮಾಪಕರೊಬ್ಬರ ಜೊತೆ ಸಪ್ತಪದಿ ತುಳಿದಿದ್ದಾರೆ ಎಂದು ವರದಿಯಾಗಿದೆ.

PREV
113
ವಿಚ್ಛೇದಿತ ನಿರ್ಮಾಪಕನ ಜೊತೆ ಪುನೀತ್‌ ರಾಜ್‌ಕುಮಾರ್‌ ಸಿನಿಮಾದ ನಟಿಯ ಮದುವೆ?

ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿ ಅಂಜಲಿ ಫೇಮಸ್‌ ಹೆಸರು. ಕೆಲ ದಿನಗಳ ಹಿಂದೆ ಇವರ ಮದುವೆಯ ಬಗ್ಗೆ ದೊಡ್ಡ ಗಾಸಿಪ್‌ ವರದಿಯಾಗಿತ್ತು.
 

213

ಈಗ ಅಂಜಲಿ ಅವರ ಮದುವೆಯ ಬಗ್ಗೆಯೇ ಇನ್ನೊಂದು ದೊಡ್ಡ ಗಾಸಿಪ್‌ ಬಂದಿದ್ದು, ಟಾಲಿವುಡ್‌ ಸಿನಿಮಾ ರಂಗದಲ್ಲಿ ಇದರ ಬಗ್ಗೆಯೇ ಚರ್ಚೆಯಾಗುತ್ತಿದೆ.

313

ತೆಲುಗು ಸಿನಿಮಾರಂಗದ ನಟಿಯಾಗಿದ್ದರೂ ಅಂಜಲಿ ಕೆಲವು ತಮಿಳು ಸಿನಿಮಾಗಳನ್ನೂ ನಟಿಸಿದ್ದಾರೆ. ರಾಮ್‌ ನಿರ್ದೇಶನದ ಕರಾಟು ಸಿನಿಮಾದ ಮೂಲಕ ಇವರು ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದದ್ದಾರೆ.
 

413

ಇನ್ನೂ ಕನ್ನಡದಲ್ಲಿ ಪವನ್‌ ಒಡೆಯರ್‌ ನಿರ್ದೇಶನದ ಹಾಗೂ ಪುನೀತ್‌ ರಾಜ್‌ಕುಮಾರ್‌ ನಾಯಕರಾಗಿದ್ದ ರಣವಿಕ್ರಮ ಚಿತ್ರದಲ್ಲೂ ಅಂಜಲಿ ನಟಿಸಿದ್ದರು.

513

ತೆಲುಗು ಸಿನಿಮಾ ರಂಗದಲ್ಲಿ ಇವರನ್ನು ಸೀತಮ್ಮ ಎಂದೇ ಗುರುತಿಸುತ್ತಾರೆ. ಅದಕ್ಕೆ ಕಾರಣ ಮಹೇಶ್‌ ಬಾಬು ಹಾಗೂ ವೆಂಕಟೇಶ್‌ ನಟನೆಯ ಸೀತಮ್ಮ ವಾಕಿಟ್ಲು ಸಿರಿಮಲ್ಲೆ ಚೆಟ್ಟು ಸಿನಿಮಾ.

613

ಸ್ಟಾರ್‌ ಹೀರೋಯಿನ್‌ ಆಗಿದ್ದರೂ, ಅಂಜಲಿ ವಿಚಾರದಲ್ಲಿ ವಿವಾದಗಳಿಗೇನೂ ಕೊರತೆಯಿಲ್ಲ. ತಮ್ಮೊಂದಿಗೆ ಜರ್ನಿ ಸಿನಿಮಾದಲ್ಲಿ ನಟಿಸಿದ್ದ ನಟ ಜೈ ಜೊತೆ ಇವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು.

713

ಜೈ ಹಾಗೂ ಅಂಜಲಿ ಇಬ್ಬರೂ ಜೊತೆಯಲ್ಲಿಯೇ ವಾಸ ಮಾಡುತ್ತಿದ್ದು, ಶೀಘ್ರದಲ್ಲಿಯೇ ಇವರು ಮದುವೆಯೂ ಆಗಲಿದ್ದಾರೆ ಎಂದು ಸುದ್ದಿಯಾಗಿತ್ತು.

813

ಹೆಚ್ಚೂ ಕಡಿಮೆ ಅಂಜಲಿ ಅವರ ಅಭಿಮಾನಿಗಳು ಕೂಡ ಈ ವಿಚಾರವನ್ನು ನಿಜವೆಂದೇ ಭಾವಿಸಿದ್ದರು. ಆದರೆ, ಕೆಲ ದಿನಗಳ ಬಳಿಕ ತಾವಿಬ್ಬರೂ 

913
Anjali Marriage


ಇದುವರೆಗೂ ತಮ್ಮ  ಪ್ರೀತಿಯ ಬಗ್ಗೆ ಬಾಯಿ ಬಿಡದ ಅಂಜಲಿ ಒಮ್ಮೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡುವ ಮೂಲಕ ಸಂಚಲನ ಮೂಡಿಸಿದ್ದರು. ವ್ಯಕ್ತಿಯ ಜೊತೆಗಿನ ರಿಲೇಷನ್‌ಷಿಪ್‌ನ ಕಾರಣದಿಂದಾಗಿ ವೃತ್ತಿಯತ್ತ ಗಮನನೀಡಲು ಸಾಧ್ಯವಾಗುತ್ತಿಲ್ಲ. ಇದು ಕೆಟ್ಟ ಸಂಬಂಧವಾಗಿತ್ತು ಎಂದಿದ್ದರು.

1013
anjali

 ನಟಿ ಅಂಜಲಿ ಅವರು ತಮ್ಮ ವೃತ್ತಿಜೀವನಕ್ಕೆ ಅಡ್ಡಿಯಾಗುವ ಸಂಬಂಧಕ್ಕಿಂತ ವೃತ್ತಿಜೀವನಕ್ಕೆ ಪ್ರಾಮುಖ್ಯತೆ ನೀಡುವುದು ಉತ್ತಮ ಎಂದು ಇದೇ ಸಂದರ್ಶನದಲ್ಲಿ ತಿಳಿಸಿದ್ದರು.

1113

ಕೆಲ ವರ್ಷಗಳ ವಿಶ್ರಾಂತಿಯ ಬಳಿಕ ಅಂಜಲಿ ಮತ್ತೆ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಶಂಕರ್‌ ನಿರ್ದೇಶನದ ಗೇಮ್‌ ಚೇಂಜರ್‌ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಅದರೊಂದಿಗೆ ವೆಬ್‌ಸಿರೀಸ್‌ಗಳನ್ನೂ ಅವರು ನಟಿಸಿದ್ದಾರೆ.

1213

ಇದರ ನಡುವೆ ಅಂಜಲಿ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೂ ಬಂದಿದೆ. ತೆಲುಗು ಸಿನಿಮಾ ರಂಗದ ನಿರ್ಮಾಪಕರ ಜೊತೆ ಈಕೆಯ ಮದುವೆಯಾಗಿದೆ ಎನ್ನಲಾಗಿದೆ.

1313

ಕಳೆದ ಒಂದು ವರ್ಷದಿಂದ ಇವರಿಬ್ಬರು ಡೇಟಿಂಗ್‌ನಲ್ಲಿದ್ದು, ಒಂದೋ ಈಗಾಗಲೇ ಮದುವೆಯಾಗಿದೆ ಇಲ್ಲವೇ ಶೀಘ್ರದಲ್ಲಿ ಇವರ ಮದುವೆ ನಿಶ್ಚಯವಾಗಬಹುದು ಎನ್ನಲಾಗಿದೆ. ಈ ಬಗ್ಗ ಅಂಜಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Read more Photos on
click me!

Recommended Stories