ದಿಢೀರ್ ಆಸ್ಪತ್ರೆಗೆ ದಾಖಲಾದ ನಟ ಶಾರೂಖ್ ಖಾನ್

First Published | May 22, 2024, 7:02 PM IST

ಬಾಲಿವುಡ್ ನಟ ಶಾರೂಖ್ ಖಾನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅಹಮದಾಬಾದ್ ನಗರ ಕೆಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ನಟ ಶಾರೂಖ್ ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

Shah Rukh Khan cute video gets attention

ಮೊದಲ ಐಪಿಎಲ್ ಪ್ಲೇಆಫ್ ಪಂದ್ಯದ (IPL) ವೀಕ್ಷಣೆಗಾಗಿ ಶಾರುಖ್ ಖಾನ್ ಅಹಮದಾಬಾದ್‌ ಗೆ ಬಂದಿದ್ದರು. ಈ ವೇಳೆ ಶಾರೂಖ್ ಖಾನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಶಾರೂಖ್ ಖಾನ್ ಕೆಕೆಆರ್ ತಂಡದ ಮಾಲೀಕರು ಸಹ ಆಗಿದ್ದಾರೆ.

Tap to resize

ಅಹಮಾದಬಾದ್‌ನಲ್ಲಿ ಅಧಿಕ ತಾಪಮಾನ ದಾಖಲಾಗುತ್ತಿದೆ. ತೀವ್ರ ಬಿಸಿಲಿನಿಂದಾಗಿ ಕಿಂಗ್ ಖಾನ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಶಾರೂಖ್ ಖಾನ್ ಅಭಿಮಾನಿಗಳು ಜವಾನ್‌ ಆರೋಗ್ಯದ ಕುರಿತು ತಿಳಿದುಕೊಳ್ಳಲು ಕಾಯುತ್ತಿದ್ದಾರೆ. ಆದ್ರೆ ಇದುವರೆಗೂ ಶಾರೂಖ್ ಖಾನ್ ಆಪ್ತರು  ಅಥವಾ ಆಸ್ಪತ್ರೆಯಿಂದ ಯಾವುದೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿಲ್ಲ. ಸದ್ಯಕ್ಕೆ ತೀವ್ರ ಬಿಸಿಲಿನಿಂದ ಶಾರೂಖ್ ಖಾನ್ ಬಳಲಿದ್ದಾರೆ ಎಂಬ ಮಾಹಿತಿ ಮಾತ್ರ  ಲಭ್ಯವಾಗಿದೆ.

Shah Rukh Khan Dunkis ott streaming report

ಶಾರೂಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ 2024ರ ಐಪಿಎಲ್‌ನಲ್ಲಿ ಫೈನಲ್ ಪ್ರವೇಶಿಸಿದೆ. ಸನ್ ರೈಸರ್ಸ್ ಹೈದರಬಾದ್-ಕೆಕೆಆರ್ ನಡುವಿನ ಪಂದ್ಯ ವೀಕ್ಷಣೆಗಾಗಿ ಶಾರೂಖ್ ಖಾನ್ ಕುಟುಂಬ ಸಮೇತರಾಗಿ ಅಹಮದಾಬಾದ್‌ಗೆ ಆಗಮಿಸಿದ್ದರು. ಮೊದಲ ಪ್ಲೇ ಆಫ್ ಪಂದ್ಯ ಅಹಮದಾಬಾದ್ ನಗರದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿತ್ತು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶಾರೂಖ್ ಖಾನ್ ಜೊತೆ ಮಕ್ಕಳಾದ ಅಬ್ರಾಮ್, ಸುಹಾನಾ, ಅನನ್ಯಾ ಮತ್ತು ಶನಯಾ ಕಾಣಿಸಿಕೊಂಡಿದ್ದರು. ಕಳೆದ ಎರಡು ವರ್ಷದಿಂದ ಶಾರೂಖ್ ಖಾನ್ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಐಪಿಎಲ್ ಆರಂಭವಾದಗಿನಿಂದ ತಂಡದ ಜೊತೆಯಲ್ಲಿಯೇ ಶಾರೂಖ್ ಖಾನ್ ಪ್ರಯಾಣಿಸುತ್ತಿದ್ದಾರೆ.

ಜವಾನ್, ಪಠಾಣ, ಡಂಕಿ ಸಿನಿಮಾಗಳಿಂದ ಶಾರೂಖ್ ಖಾನ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಡಂಕಿ ಸಿನಿಮಾ ಮಾತ್ರ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಕಿಂಗ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಇದರಲ್ಲಿ ಶಾರೂಖ್ ಖಾನ್ ಡಾನ್ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!