ಎಂಬಿಬಿಎಸ್ ಮಾಡಿದ್ದ ಈಕೆಗೆ ದೊಡ್ಡ ವೈದ್ಯೆಯಾಗುವ ಅವಕಾಶವೂ ಇತ್ತು. ಆದರೆ, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಈಕೆ ಪ್ರಸ್ತುತ ಸಿನಿಮಾ ರಂಗದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
ಪೊಲಿಮೆರಾ 2 ಸಿನಿಮಾದ ಹೀರೋಯಿನ್ ಸಾಯಿ ಕಾಮಾಕ್ಷಿ ಭಾಸ್ಕರಾಲಾ ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ಇಲ್ಲಿಯವರೆಗೂ ಡಿ ಗ್ಲಾಮರ್ ರೋಲ್‌ನಲ್ಲೇ ನಟಿಸಿದ್ದ ಆಕೆ, ಮುಂದೆ ಬೆತ್ತಲೆಯಾಗಿ ನಟಿಸೋಕು ಸಿದ್ಧ ಎಂದು ಹೇಳಿದ್ದಾರೆ.
ಪೊಲಿಮೆರಾ ಪಾರ್ಟ್-1 ಹಾಗೂ ಪಾರ್ಟ್ 2 ಸಿನಿಮಾದ ಮೂಲಕ ತೆಲಂಗಾಣದಲ್ಲಿ ಜನಪ್ರಿಯರಾಗಿರುವ ಕಾಮಾಕ್ಷಿ ಭಾಸ್ಕರಾಲಾ, ಎರಡೂ ಸಿನಿಮಾದಲ್ಲಿ ಬಹಳ ಪ್ರಭಾವ ಬೀರುವ ಪಾತ್ರದಲ್ಲಿ ನಟಿಸಿದ್ದರು.
ಇದಕ್ಕೂ ಮುನ್ನ ಆಕೆ ಸೈತಾನ್ ಎನ್ನುವ ವೆಬ್ ಸಿರೀಸ್‌ನಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದರು. ನಟಿಯಾಗಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ತನ್ನಲ್ಲಿರುವ ವಿಶಿಷ್ಟ ನಟಿಯನ್ನು ಪ್ರೇಕ್ಷಕರಿಗೆ ಮತ್ತು ಚಿತ್ರರಂಗಕ್ಕೆ ಪರಿಚಯಿಸುವುದು ತಮ್ಮ ಗುರಿ ಎಂದಿದ್ದಾರೆ.
ಈಗ ಕಾಮಾಕ್ಷಿ ಭಾಸ್ಕರಾಲಾ ಇನ್ನಷ್ಟು ಬೋಲ್ಡ್ ಸ್ಟೇಟ್‌ಮೆಂಟ್‌ಅನ್ನು ನೀಡಿದ್ದು, ಎಲ್ಲಾ ರೀತಿಯ ಬೋಲ್ಡ್ ಪಾತ್ರಗಳಿಗೂ ನಾನು ರೆಡಿ ಅದು ನ್ಯೂಡ್ ಪಾತ್ರವೇ ಆಗಿರಲಿ, ಐಟಮ್ ಡಾನ್ಸ್ ಆಗಿರಲಿ ನಾನು ಮಾಡುತ್ತೇನೆ ಎಂದಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಚಿಟ್‌ಚಾಟ್‌ನಲ್ಲಿ ಕಾಮಾಕ್ಷಿ ಭಾಸ್ಕರಾಲಾ ಅವರು ನಿರ್ದೇಶಕರಿಗೆ ಈ ಆಫರ್ ನೀಡಿದ್ದಾರೆ.
ಸಿನಿಮಾದಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಅನ್ನೋದಕ್ಕೆ ಮುಕ್ತವಾಗಿ ಉತ್ತರ ನೀಡಿದ ಅವರು, ಎಲ್ಲಾ ರೀತಿಯ ಬೋಲ್ಡ್ ಪಾತ್ರಗಳಿಗೂ ನಾನು ಸಿದ್ಧ. ನಾನು ಬೋಲ್ಡ್ ಪಾತ್ರವೇ ಮಾಡಲಿ ಅಥವಾ ಮುಜುಗರ ಪಡುವ ಹೆಣ್ಣಿನ ಪಾತ್ರವೇ ಮಾಡಲಿ. ನನ್ನ ಪಾಲಿಗೆ ಅದೊಂದು ಪಾತ್ರವಷ್ಟೇ ಎಂದು ಹೇಳಿದ್ದಾರೆ.
ಹಾಗಿದ್ದರೆ ನೀವು ನ್ಯೂಡ್ ಪಾತ್ರದಲ್ಲಿ ನಟಿಸೋಕೆ ಸಿದ್ಧವವೇ ಎಂದು ನಿರೂಪಕ ಕೇಳಿದ ಪ್ರಶ್ನೆಗೆ, ನಾನೊಬ್ಬಳು ನಟಿ ಎಲ್ಲಾ ರೀತಿಯ ಪಾತ್ರಗಳಿಗೂ ಸಿದ್ಧರಾಗಿರೋದು ನನ್ನ ಜವಾಬ್ದಾರಿ ಎಂದಿದ್ದಾರೆ.
ಇದುವೇ ಕಲಾವಿದರ ಜೀವನ, ಜನರಿಗೂ ನೀವು ಕಲಾವಿದರಂತೆ ಕಾಣಬೇಕು. ನಾನೊಬ್ಬ ನಟನಾದ್ದರಿಂದ ಆ ಪಾತ್ರಕ್ಕೆ ನನ್ನ ಧ್ವನಿ, ದೇಹ, ಮುಖ, ಎಲ್ಲವನ್ನೂ ಸಾಧನವಾಗಿ ಬಳಸಿಕೊಳ್ಳುತ್ತೇನೆ ಎಂದಿದ್ದಾರೆ.
ಹೀಗೇ ಇದ್ದು ನಾಳೆ ಬಿಟ್ಟರೆ ನನಗೆ ಇಮೇಜ್ ಮತ್ತು ಸೌಂದರ್ಯದ ಬಗ್ಗೆ ಕಾಳಜಿ ಇಲ್ಲ ಎನ್ನುತ್ತಾಳೆ. ನಗ್ನ ಅಥವಾ ಬೋಲ್ಡ್ ಆಗಿ ನಟಿಸಲು ಸಿದ್ಧ ಎಂದು ಕಾಮಾಕ್ಷಿ ಬಹಿರಂಗವಾಗಿ ಹೇಳಿದ್ದಾರೆ.
ಇದಲ್ಲದೆ, ಐಟಂ ಸಾಂಗ್‌ಗಳ ಬಗ್ಗೆ ಮಾತನಾಡುತ್ತಾ, ತಾನು ಉತ್ತಮ ಡ್ಯಾನ್ಸರ್ ಕೂಡ ಮತ್ತು ಐಟಂ ಡಾನ್ಸ್‌ಗಳನ್ನೂ ಕೂಡ ಮಾಡುತ್ತೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಹಾಡು ಚೆನ್ನಾಗಿದ್ದಲ್ಲಿ, ನಟಿಸೋಕೆ ಇಷ್ಟವಾದಲ್ಲಿ ಯಾವುದೇ ನಟರ ಜೊತೆ ಡಾನ್ಸ್ ಮಾಡಲು ಇದ್ಧ. ನನಗೆ ಆಫರ್ ಮಾಡಲು ಬರುವ ನಿರ್ದೇಶಕರು ಕೂಡ ಇದನ್ನು ತಿಳಿದಿಟ್ಟುಕೊಂಡಿರಬೇಕು. ಈ ವೀಡಿಯೊ ಕ್ಲಿಪ್ ಈಗ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿದೆ.
ಪೊಲಿಮೆರಾ ಸಿನಿಮಾ ಇವರನ್ನು ಫೇಮಸ್ ಮಾಡಿದ್ದರೆ, ಇದರ 2ನೇ ಪಾರ್ಟ್ ಇವರನ್ನು ಇನ್ನಷ್ಟು ಪ್ರಸಿದ್ಧಿ ಮಾಡಿದೆ. ಸೈತಾನ್ ವೆಬ್ ಸಿರೀಸ್‌ನಲ್ಲಿ ಬೋಲ್ಡ್ ಆಗಿ ನಟಿಸಿದ್ದ ಈಕೆ, ಪ್ರಿಯರಾಲು ಸಿನಿಮಾದ ಮೂಲಕ ಟಾಲಿವುಡ್‌ಗೆ ಲಗ್ಗೆ ಇಟ್ಟಿದ್ದರು.
ವೈದ್ಯೆಯಾಗಿದ್ದರೂ, ತಮ್ಮ ಆಸ್ತಕ್ತಿಯಿಂದಲೇ ನಟನಾ ಕ್ಷೇತ್ರಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಬೋಲ್ಡ್ ಪಾತ್ರಕ್ಕಾದರೂ ತಾವು ಸೈ ಎಂದಿದ್ದಾರೆ.